ಕಾಸರಗೋಡು: ಸಂಯುಕ್ತ ಟ್ರೇಡ್ ಯೂನಿಯನ್ ಆಹ್ವಾನ ನೀಡಿರುವ 48 ಗಂಟೆಗಳ ರಾಷ್ಟ್ರೀಯ ಮುಷ್ಕರ ಇಂದು ಆರಂಭಗೊಂಡಿದ್ದು ನಾಳೆಯೂ ನಡೆಯಲಿದೆ.
ಸಿಐಟಿಯು, ಐಎನ್‍ಟಿಯುಸಿ, ಎಐಟಿಯುಸಿ, ಎಸ್‍ಟಿಯು, ಯುಟಿಯುಸಿ, ಎಚ್‍ಎಂಎಸ್, ಕೆಟಿಯು, ಸೆವಾ, ಟಿಯುಸಿಐ, ಕೆಟಿಯುಸಿ(ಎಂ), ಐಎನ್‍ಎಲ್‍ಸಿ, ಎನ್‍ಟಿಯುಐ, ಎಚ್‍ಎಂಕೆಪಿ, ಎಐಟಿಯುಐ, ಎನ್‍ಎಲ್‍ಸಿ, ಕೆಟಿಯುಸಿ(ಬಿ), ಕೆಟಿಯುಸಿ(ಜೆ) ಮತ್ತು ಟಿಯುಪಿಸಿ ಇತ್ಯಾದಿ ಕಾರ್ಮಿಕ ಸಂಘಟನೆಗಳು ಸಂಯುಕ್ತ ಒಕ್ಕೂಟದ ನೇತೃತ್ವದಲ್ಲಿ ದ್ವಿದಿನ ರಾಷ್ಟ್ರೀಯ ಮುಷ್ಕರ ನಡೆಸುತ್ತಿವೆ. ಬಿಎಂಎಸ್ ಮತ್ತು ಅದರ ಪೆÇೀಷಕ ಸಂಘಟನೆಗಳು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿಲ್ಲ.