ಮುಳ್ಳೇರಿಯ: ದೇಲಂಪಾಡಿ ಗ್ರಾಮ ಪಂಚಾಯತಿ ಗಡಿ ಪ್ರದೇಶವಾದ ಪಂಜಿಕಲ್ಲು ಕ್ಯಾಂಪೆÇ್ಕೀ ಶಾಖೆಯಲ್ಲಿ ಅಡಿಕೆ ಖರೀದಿಯೊಂದಿಗೆ ರಬ್ಬರ್ ಬೆಳೆಗಾರರ ಅನುಕೂಲಕ್ಕಾಗಿ ರಬ್ಬರ್ ಖರೀದಿ ಯೋಜನೆಯನ್ನು ಶ್ರೀ ಶೈಲ ಎಂಟರ್‍ಪ್ರೈಸಸ್ ಸಂಕೀರ್ಣದ ಮಾಲಕ ಹಿರಿಯ ಕೃಷಿಕ ಪೆರಂಬಾರು ವಿಷ್ಣು ಭಟ್ ದೀಪ ಪ್ರಜ್ವಲನಗೊಳಿಸುವ ಮೂಲಕ ಇತ್ತೀಚೆಗೆ ಉದ್ಘಾಟಿಸಿದರು.
ಅಡಿಕೆ ಕೃಷಿಕರ -ರಬ್ಬರ್ ಕೃಷಿಕರ ಪರವಾಗಿ ದೇಲಂಪಾಡಿ ಸೇವಾ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷ ಬೆಳ್ಳಿಪ್ಪಾಡಿ ಸದಾಶಿವ ರೈ ಮಾತನಾಡಿ ಕೃಷಿಕರು ಸದ್ಯ ಅನುಭವಿಸುತ್ತಿರುವ ಸಂಕಷ್ಟಗಳನ್ನು ವಿವರಿಸಿದರು.
ವೇದಿಕೆಯಿಂದ ಮಾತಾಡಿದ ಕ್ಯಾಂಪೆÇ್ಕೀ ಸಂಸ್ಥೆಯ ಉಪಾಧ್ಯಕ್ಷ ಖಂಡಿಗೆ ಶಂಕರನಾರಾಯಣ ಭಟ್ ಅವರು ಸಂಸ್ಥೆ ಬೆಳೆದು ಬಂದ ದಾರಿ ಕೃಷಿಕರೊಂದಿಗೆ ಇರುವ ಒಡನಾಟ ಹಾಗೂ ಸವಲತ್ತುಗಳ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕ ಶಿವಕೃಷ್ಣ ಉಪಸ್ಥಿತರಿದ್ದರು.
ಕ್ಯಾಂಪೆÇ್ಕೀ ಸಂಸ್ಥೆಯ ಬದಿಯಡ್ಕ ಪ್ರಾದೇಶಿಕ ಅಧಿಕಾರಿ ಪ್ರಕಾಶ್ ಕುಮಾರ್ ಶೆಟ್ಟಿ ಹಾಗೂ ರಬ್ಬರ್ ವಿಭಾಗದ ಅಧಿಕಾರಿ ರಾಘವೇಂದ್ರ ಅವರು ಸಾಂದರ್ಭಿಕವಾಗಿ ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ಕೆ.ಶಿವರಾಮ ಗೌಡ, ಮುಡೂರು ಕೃಷ್ಣ ಭಟ್, ಕಜೆ ನಾರಾಯಣ ಭಟ್, ಜಯಪ್ರಕಾಶ್ ಕೆಮನಬಳ್ಳಿ, ರವೀಂದ್ರ ಕುಮಾರ್, ಡಾ.ಹರಿಪ್ರಸಾದ್, ಕೆ.ವಿಶ್ವವಿನೋದ ಬನಾರಿ, ಎಸ್.ಎನ್.ಪ್ರಸಾದ್ ಪೆರುಂಬೂರು, ಸುಬ್ರಮಣಿ ಬೆಳ್ಳಿಪ್ಪಾಡಿ, ಗಣೇಶ ಶರ್ಮ ಬೆಳ್ಳಿಪ್ಪಾಡಿ, ವೈ.ಎಸ್.ಗಣೇಶ್ ಬೆಳ್ಳಿಪ್ಪಾಡಿ, ಹರಿಶ್ಚಂದ್ರ ನಾಯಕ್ ಹೊಳೆಕರೆ ಉಪಸ್ಥಿತರಿದ್ದರು.
ಪ್ರಬಂಧಕ ಪ್ರವೀಣ ಮುಳಿಯಾಲ ಸ್ವಾಗತಿಸಿ, ಸಂತೋಷ್ ಕಂಬಳಿ ವಂದಿಸಿದರು. ಹರೀಶ ಕಾರ್ಯಕ್ರಮ ನಿರೂಪಿಸಿದರು.