ಕಾಸರಗೋಡು: ಜಿಲ್ಲೆಯ ಪೆÇಲೀಸ್ ಠಾಣೆಗಳಲ್ಲಿ ನಡೆದ ಶಾಂತಿ ಸಮಿತಿ ಸಭೆಯನ್ನು ಬಿಜೆಪಿ ಬಹಿಷ್ಕರಿಸಿದೆ.
ಶಬರಿಮಲೆ ವಿವಾದಕ್ಕೆ ಸಂಬಂಧಿಸಿ ಇತ್ತೀಚೆಗೆ ಜಿಲ್ಲೆಯಲ್ಲಿ ಉಂಟಾದ ಘರ್ಷಣೆಯಲ್ಲಿ ಪೆÇಲೀಸರು ಏಕಪಕ್ಷೀಯ ಹಾಗು ಪಕ್ಷಪಾತ ನೀತಿ ಅನುಸರಿಸುತ್ತಿರುವುದನ್ನು ಪ್ರತಿಭಟಿಸಿ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾಗಿ ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಹೇಳಿದ್ದಾರೆ.
ಹರತಾಳವನ್ನು ವಿರೋಧಿಸುವ ಹೆಸರಲ್ಲಿ ಜಿಲ್ಲೆಯಾದ್ಯಂತ ದಾಂಧಲೆ, ಆಕ್ರಮಣ ನಡೆಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ತಯಾರಾಗದ ಪೆÇಲೀಸರು ಯಾವ ರೀತಿಯ ಶಾಂತಿ ಸ್ಥಾಪಿಸಲು ಸಭೆ ನಡೆಸುವುದಾಗಿ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.
ಚೇಟ್ಟುಕುಂಡಿನಲ್ಲಿ ಗೂಡಂಗಡಿಗಳನ್ನು ಉರಿಸಿದ್ದು, ವಾಹನಗಳ ಮೇಲೆ ನಡೆಸಿದ ದಾಳಿ ಸಂಬಂಧಿಸಿ ಒಂದು ಕೇಸು ಕೂಡ ದಾಖಲಿಸಿಲ್ಲ. ಇದೇ ವೇಳೆ ಬಿಜೆಪಿ-ಆರ್‍ಎಸ್‍ಎಸ್ ಕಾರ್ಯಕರ್ತರ ಮನೆಗಳಿಗೆ ಹಗಲು ರಾತ್ರಿ ದಾಳಿ ನಡೆಸಿ ಮನೆಯವನ್ನು ಹಿಡಿಯಲು ಪೆÇಲೀಸರು ಬೇಟೆಯಾಡುತ್ತಿದ್ದಾರೆ.
ಕಾಸರಗೋಡು, ಮಂಜೇಶ್ವರ ಭಾಗಗಳಲ್ಲಿ ಉಗ್ರಗಾಮಿಗಳನ್ನು ಸೇರಿಸಿಕೊಂಡು ಸಿಪಿಎಂ ಆಕ್ರಮಣ ನಡೆಸಿದೆಯೆಂದು ಶ್ರೀಕಾಂತ್ ಆರೋಪಿಸಿದ್ದಾರೆ. ನುಳ್ಳಿಪ್ಪಾಡಿಯಲ್ಲಿ ಮಾಜಿ ಕೌನ್ಸಿಲರ್ ಗಣೇಶ್ ಅವರನ್ನು ಹಾಡುಹಗಲೇ ಇರಿದು ಕೊಲೆಗೈಯಲು ಯತ್ನಿಸಿದವರನ್ನು ಬಂಧಿಸಲು ಪೆÇಲೀಸರು ಪ್ರಯತ್ನಿಸುತ್ತಿಲ್ಲ. ಪೆÇಲೀಸ್ ಪಡೆ ನಿಷ್ಪ್ರಯೋಜಕವಾಗಿದೆಯೆಂದೂ ಅವರು ಆರೋಪಿಸಿದರು. ಪ್ರಹಸನವಾಗಿರುವ ಶಾಂತಿ ಸಭೆಗಳಲ್ಲಿ ಭಾಗವಹಿಸಲು ಬಿಜೆಪಿಗೆ ಆಸಕ್ತಿಯಿಲ್ಲವೆಂದೂ ಶ್ರೀಕಾಂತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.