ಎಚ್1 ಎನ್1 ರೋಗ ಹಾವಳಿ : ಜಿಲ್ಲೆಯಲ್ಲಿ ಪರಿಸ್ತಿತಿ ಹತೋಟಿಯಲ್ಲಿದೆ: ಸಚಿವ ಚಂದ್ರಶೇಖರನ್
0
ಫೆಬ್ರವರಿ 25, 2019
ಕಾಸರಗೋಡು: ಜಿಲ್ಲೆಯಲ್ಲಿ ಎಚ್1 ಎನ್ 1 ಕಾಯಿಲೆ ನಿಯಂತ್ರಣದಲ್ಲಿದೆ ಎಂದು ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ತಿಳಿಸಿದರು.
ಜಿಲ್ಲೆಯ ಪೆರಿಯ ನವೋದಯ ವಿದ್ಯಾಲಯದ ಕೆಲವು ವಿದ್ಯಾರ್ಥಿಗಳಲ್ಲಿ ಈ ರೋಗದ ಲಕ್ಷಣಗಳುಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕಾಞಂಗಾಡ್ ಜಿಲ್ಲಾಧಿಕಾರಿ ಕಚೇರಿ ಮಿನಿ ಸಭಾಂಗಣದಲ್ಲಿ ಸೋಮವಾರ ನಡೆದ ವಿದ್ಯಾಲಯದ ಮಕ್ಕಳ ಹೆತ್ತವರ, ಶಿಕ್ಷಕರ ಅವಲೋಕನ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಆರೋಗ್ಯ ಇಲಾಖೆ ನಡೆಸುತ್ತಿರುವ ಪ್ರತಿರೋಧ ಚಟುವಟಿಕೆಗಳು ಚುರುಕಾಗಿವೆ. ಹೆಚ್ಚುವರಿ ಪರಿಣತ ಚಿಕಿತ್ಸೆಅಗತ್ಯವಿದ್ದರೆ ಪ್ರತ್ಯೇಕ ವೈದ್ಯಕೀಯ ತಂಡವನ್ನು ರವಾನಿಸಲಾಗುವುದು ಎಂದು ಮುಖ್ಯಮಂತ್ರಿಮತ್ತು ಆರೋಗ್ಯ ಸಚಿವ ಭರವಸೆ ನೀಡಿರುವುದಾಗಿ ಸಚಿವ ಹೇಳಿದರು.
ಈಗ 9 ಮಂದಿ ವಿಧ್ಯಾರ್ಥಿಗಳಲ್ಲಿ ಎಚ್1 ಎನ್1 ರೋಗದ ಸೋಂಕು ಖಚಿತವಾಗಿದೆ. 72 ಮಂದಿ ನಿರೀಕ್ಷಣೆಯಲ್ಲಿದ್ದಾರೆ. ಇವರಲ್ಲಿ 34 ಹುಡುಗರು ಮತ್ತು 38 ಮಂದಿ ಹುಡುಗಿಯರೂ ಇದ್ದಾರೆ. ಮೂವರು ವೈದ್ಯರು, ಒಬ್ಬಫಿಸಿಶಿಯನ್, 6 ಪಾರಾ ಮೆಡಿಕಲ್ ಟೀಂ ಸದಸ್ಯರು ಶಾಲೆಯಲ್ಲಿ ತಂಗಿದ್ದು, ಈ ಮಕ್ಕಳ ಆರೋಗ್ಯ ಸ್ಥಿತಿ ಬಗ್ಗೆ ನಿಗಾ ಇರಿಸಿದ್ದಾರೆ. ಪರಿಸ್ಥಿತಿ ಹತೋಟಿಯಲ್ಲಿದೆ. ಮಕ್ಕಳ ಆರೋಗ್ಯ ಸುಧಾರಿಸುತ್ತಿದೆ. ಯಾರೂ ಭಯಪಡಬೇಕಾಗಿಲ್ಲ. ಆದರೂ ಒಂದು ವಾರ ಜಾಗ್ರತೆ ಪಾಲಿಸಬೇಕಾದ ಅಗತ್ಯವಿದೆ ಎಂದು ಸಚಿವ ಚಂದ್ರಶೇಖರನ್ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ಪಿ.ದಿನೇಶ್ ಕುಮಾರ್, ಡಿ.ಎಸ್.ಎಂ.ಒ.ಡಾ.ರಿಜಿತ್ ಕೃಷ್ಣನ್, ಡಾ.ಅಮರ್ ಸೆಟಿಲ್ ಮೊದಲಾದವರು ಉಪಸ್ಥಿತರಿದ್ದರು.
ಜ್ವರ, ಕೆಮ್ಮು ಸಹಿತ ಲಕ್ಷಣಗಳಿರುವವರಿಗೆ ಔಷಧ ನೀಡಲಾಗುತ್ತಿದೆ. ಜ್ವರದ ಲಕ್ಷಣ ಹೊಂದಿರುವ ಮಕ್ಕಳನ್ನು ಶಾಲೆಯಿಂದ ದೂರ ಇರಿಸಲಗುತ್ತಿದೆ. ಎಲ್ಲ ಮಕ್ಕಳಿಗೂ, ಸಿಬ್ಬಮದಿಗೂ ಮಾಸ್ಕ್ ವಿತರಿಸಲಾಗಿದೆ. ಇವ್ನು ಬಳಕೆಯ ನಂತರ ಇಲಾಖೆ ನೌಕರರೇ ಸಂಗ್ರಹಿಸಿ ನಾಶಗೊಳಿಸುವರು. ವಿಶೇಷ ರೀತಿ ಸಿದ್ಧಪಡಿಸಿದ ರೋಗನಶಕ ಬಳಸಿ ಶುಚೀಕರಣನಡೆಸಲೂಕ್ರಮಕೈಗೊಳ್ಳಲಾಗಿದೆ. ಒಬ್ಬ ಮಹಿಳಾ ವೈದ್ಯಯ ಸೇವೆಯೂ ಇಲ್ಲಿದೆ.
ಮಕ್ಕಳಹೆತ್ತವರಿಗೆ ಈ ಸಂಬಂಧ ಜಾಗೃತಿ ನಿಡುವ ಕಾಯಕವೂ ನಡೆದಿದೆ. ಹೆತ್ತವರಿಗಾಗಿ ಆರೋಗ್ಯ ಇಲಾಖೆಯ ಹೆಲ್ಪ್ ಲೈನ್ ಆರಂಭಿಸಲಾಗಿದೆ. ನಂಬ್ರ: 0467-2234057.