ಫೆ.10ರಂದು ವಲಯ ಸಮಾವೇಶ
0
ಫೆಬ್ರವರಿ 08, 2019
ಮುಳ್ಳೇರಿಯ: ಆರ್ಯ ಮರಾಠ ಸಮಾಜ ಸಂಘÀ ಮಂಗಳೂರು-ಕಾಸರಗೋಡು ಇದರ ಯುವ ಮರಾಠ ಸಮಿತಿಯ ನೇತೃತ್ವದಲ್ಲಿ ಕುಂಟಾರು, ಆದೂರು ಮತ್ತು ಅಡೂರು ವಲಯಗಳ ಕ್ರೀಡಾಕೂಟ ಮತ್ತು ಸಮಾವೇಶ ಫೆ.10ರಂದು ಕುಂಟಾರು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ 8.30ಕ್ಕೆ ವಿವಿಧ ವಯೋಮಿತಿಯವರಿಗೆ ಕ್ರೀಡಾ ಸ್ಪರ್ಧೆಗಳ ನೋಂದಾವಣೆ ನಡೆಯಲಿದೆ. ಮಹಿಳೆಯರಿಗೆ ಕ್ರಿಕೆಟ್ ಪಂದ್ಯಾಟ ಮತ್ತು ಹಗ್ಗಜಗ್ಗಾಟ , ಪುರುಷರಿಗೆ ಸ್ಪರ್ಧೆ ಇದೇ ದಿನ ನಡೆಯಲಿದೆ.
ಅಪರಾಹ್ನ 3 ಕ್ಕೆ ಸಭಾ ಕಾರ್ಯಕ್ರಮವನ್ನು ಬ್ರಹ್ಮಶ್ರೀ ರವೀಶ ತಂತ್ರಿ ಉದ್ಘಾಟಿಸುವರು. ಯುವ ಮರಾಠ ಸಮಿತಿ ಅಧ್ಯಕ್ಷ ಪ್ರಕಾಶ್ ಮಾಸ್ಟರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಆರ್ಯ ಮರಾಠ ಸಮಾಜ ಸಂಘದ ಅಧ್ಯಕ್ಷ ಯತೀಂದ್ರ ಬಹುಮಾನ್, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಎ.ವಿ.ಸುರೇಶ್ ರಾವ್ ಕರ್ಮೋರೆ ಭಾಗವಹಿಸುವರು. ಡಾ. ಮೋಹನ್ ಕುಂಟಾರು ಅವರು ದಿ.ಮಾಟೆಡ್ಕ ಪುರುಷೋತ್ತಮ ರಾವ್ ಅವರ ಸಂಸ್ಮರಣೆ ಮಾಡುವರು. ಪ್ರೇಮಲತಾ ವೈ ರಾವ್ ಕಾಸರಗೋಡು, ಆದೂರು ವಲಯ ಸಂಚಾಲಕ ಜನಾರ್ಧನ ರಾವ್ ಕಡೆಂಗೋಡು, ಅಡೂರು ವಲಯ ಸಂಚಾಲಕ ವಿವೇಕ್ ರಾವ್ ಚೆರ್ಲಕೈ, ಕುಂಟಾರು ವಲಯ ಸಂಚಾಲಕ ಉದಯ ರಾವ್ ಕುಂಟಾರು, ಯುವ ಮರಾಠ ಸಮಿತಿ ಕಾರ್ಯದರ್ಶಿ ಜೀವನ್ ಮಾಟೆ, ನಯನ್ ಕುಮಾರ್ ಎಲಿಕ್ಕಳ ಮತ್ತು ದೇವರ ಮನೆಯ ಮುಖ್ಯಸ್ಥರು ಭಾಗವಹಿಸುವರು. ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡುವರು.