HEALTH TIPS

ಗೆರೆ-ಬರೆ-ವರ್ಣ ಜಾಲ ಫೆ.10 ರಂದು

ಉಪ್ಪಳ: ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ, ತಪಸ್ಯ ಕಲಾ ಸಾಹಿತ್ಯ ವೇದಿಕೆಯ ಜಿಲ್ಲಾ ಘಟಕ ಮತ್ತು ಕಾರ್ಟೂನು ಕಾಸರಗೋಡು ಇವುಗಳ ಸಂಯುಕ್ತ ಆಶ್ರಯದಲ್ಲಿ ಗೆರೆ-ಬರೆ-ವರ್ಣ ಜಾಲ ಎಂಬ ವಿಶಿಷ್ಟ ಕಾರ್ಯಕ್ರಮ ಫೆ.10 ರಂದು ಭಾನುವಾರ ಬೆಳಿಗ್ಗೆ 9.30 ರಿಂದ ಸಂಜೆ 4.30ರ ವರೆಗೆ ಪೈವಳಿಕೆ ಸಮೀಪದ ಬಾಯಿಕಟ್ಟೆ ಶ್ರೀಅಯ್ಯಪ್ಪ ಭಜನಾ ಮಂದಿರದ ಸಭಾ ಭವನದಲ್ಲಿ ಆಯೋಜಿಸಲಾಗಿದೆ. ಬೆಳಿಗ್ಗೆ ಸಮಾರಂಭವನ್ನು ಸಾಂಕೇತಿಕವಾಗಿ ಉದ್ಘಾಟಿಸಿದ ಬಳಿಕ ಕಮ್ಮಟದಲ್ಲಿ ಭಾಗವಹಿಸುವವರಿಗಾಗಿ ಕವನಗಳ ಓದು, ಚಿತ್ರ ರಚನೆ, ಕಾರ್ಟೂನ್ ರಚನೆ ಮತ್ತು ಪ್ರದರ್ಶನ ಹಾಗೂ ಆಸಕ್ತರಿಗೆ ಚಿತ್ರ ರಚನಾ ತರಬೇತಿ, ಹಾಸ್ಯ ರಂಜನೆ ಸ್ಪರ್ಧೆ ಆಯೋಜಿಸಲಾಗಿದೆ. ಸಂಜೆ 3 ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಲೇಖಕರ ಸಂಘದ ಅಧ್ಯಕ್ಷ, ವೈದ್ಯ ಸಾಹಿತಿ ಡಾ.ರಮಾನಂದ ಬನಾರಿ ಅಧ್ಯಕ್ಷತೆ ವಹಿಸುವರು. ಸುಧಾಕರ ಮಾಸ್ತರ್, ವೆಂಕಟ್ ಬಟ್ ಎಡನೀರು, ಹರಿಣಿ, ಜೀವನ್ ಶೆಟ್ಟಿ, ಬಾಲ ಮಧುರಕಾನನ, ಸುಬ್ರಹ್ಮಣ್ಯ ಮೇಗರವಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶಿಬಿರದಲ್ಲಿ ಭಾಗವಹಿಸುವವರು ಸ್ವರಚಿತ ಎರಡು ಕವಿತೆಗಳೊಂದಿಗೆ ಪಾಲ್ಗೊಳ್ಳಬಹುದಾಗಿದ್ದು, ಈ ಪೈಕಿ ಒಂದನ್ನು ಸಂಕಲನ ರೂಪದಲ್ಲಿ ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ. ಜೊತೆಗೆ ನಾನು ಮೆಚ್ಚಿದ ಕವಿತೆ ಎಂಬ ಕಲ್ಪನೆಯಡಿ ತಾವು ಓದಿದ ಇತರರ ಕವಿತೆಯಲ್ಲೊಂದನ್ನು ಓದುವ ಅವಕಾಸ ಶಿಬಿರದಲ್ಲಿ ಆಯೋಜಿಸಲಾಗಿದೆ. ಸ್ವರಚಿತ ಕಾರ್ಟೂನುಗಳನ್ನು ಪ್ರದರ್ಶಿಸುವ ವ್ಯವಸ್ಥೆಯನ್ನು ಶಿಬಿರದಲ್ಲಿ ವ್ಯವಸ್ಥೆಗೊಳಿಸಲಾಗಿದೆ ಎಂದು ಕಾರ್ಯಕ್ರಮ ಸಂಘಟಕರಾದ ನಿವೃತ್ತ ಪ್ರಾಂಶುಪಾಲ ಪ್ರೊ.ಪಿ.ಎನ್.ಮೂಡಿತ್ತಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries