ಕಾಸರಗೋಡು: "ಜೈವಿಕ ಜೀವನ" ಎಂಬ ವಿಷಯದಲ್ಲಿ ವಿಚಾರಸಂಕಿರಣ ಫೆ.13ರಂದು ಸಿ.ಪಿ.ಸಿ.ಆರ್.ಐ. ವಜ್ರ ಮಹೋತ್ಸವ ಸಭಾಂಗಣದಲ್ಲಿ ನಡೆಯಲಿದೆ.
ಹಸುರು ಕೇರಳ ಮಿಷನ್, ಸಿ.ಪಿ.ಸಿ.ಆರ್.ಐ., ಕೃಷಿಇಲಾಖೆ ಜಂಟಿ ವತಿಯಿಂದ ಈ ಕಾರ್ಯಕ್ರಮಜರುಗಲಿದೆ. ಅಂದು ಬೆಳಗ್ಗೆ ಹತ್ತು ಗಂಟೆಗೆ ನಡೆಯುವ ಸಮಾರಂಭವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಉದ್ಘಾಟಿಸುವರು. ಸಿ.ಪಿ.ಸಿ.ಆರ್.ಐ ಪ್ರಭಾರ ನಿರ್ದೇಶಕಿ ಡಾ.ಅನಿತಾ ಕರುಣ್ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಪ್ರಧಾನಭಾಷಣ ಮಾಡುವರು.
"ಕಾಸರಗೋಡು :ಜೈವಿಕಜಿಲ್ಲೆ ಇಂದಿನ ಸ್ಥಿತಿ ಮತ್ತು ಯೋಜನೆಗಳು" ಇತ್ಯಾದಿ ವಿಷಯಗಳಲ್ಲಿ ಉಪನ್ಯಾಸ ಮಂಡನೆನಡೆಯಲಿದೆ. ಕಾಸರಗೋಡು ಜೈವಿಕ ಅಧ್ಯಯನ ವರದಿಯನ್ನು ಸಿ.ಪಿ.ಸಿ.ಆರ್.ಐ. ಪ್ರಧಾನ ವಿಜ್ಞಾನಿ ಡಾ.ಸಿ.ತಂಬಾನ್ ಮಂಡಿಸುವರು. ಸಂವಾದ ಜರುಗಲಿದೆ. ಸಹಾಯಕ ನಿರ್ದೇಶಕಿ ಸಜಿನಿಮೋಳ್ ಕೆ. ವಿಚಾರ ಸಂಕಿರಣದ ಕ್ರೋಡೀಕರಣ ನಡೆಸಲಿದ್ದಾರೆ.