ಎಡರಂಗ ನೇತೃತ್ವದಲ್ಲಿ ಕೇರಳ ಸಂರಕ್ಷಣಾ ಯಾತ್ರೆ ಫೆ.16 ರಿಂದ ಆರಂಭ ಉಪ್ಪಳ ಪೇಟೆಯಲ್ಲಿ ಉದ್ಘಾಟನೆ, ಸೀತಾರಾಂ ಯೆಚೂರಿಯಿಂದ ಚಾಲನೆ
0
ಫೆಬ್ರವರಿ 08, 2019
ಉಪ್ಪಳ: ಅಭಿವೃದ್ಧಿ-ಶಾಂತಿ ಮತ್ತು ಸಾಮಾಜಿಕ ಪುರೋಗತಿಯ ಧ್ಯೇಯವನ್ನಿರಿಸಿದ ಎಡರಂಗ ನೇತೃತ್ವದ ಕೇರಳ ಸಂರಕ್ಷಣಾ ಯಾತ್ರೆ ಫೆ.16 ರಂದು ಆರಂಭಗೊಳ್ಳಲಿದೆ. ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸಂಜೆ 3 ಕ್ಕೆ ಉಪ್ಪಳದಲ್ಲಿ ಯಾತ್ರೆಯನ್ನು ಉದ್ಘಾಟಿಸಲಿದ್ದಾರೆ. ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್ ಯಾತ್ರೆಯನ್ನು ಮುನ್ನಡೆಸಲಿದ್ದಾರೆ. ಎರಡು ದಿನಗಳ ಕಾಲ ಕಾಸರಗೋಡು ಜಿಲ್ಲೆಯಲ್ಲಿ ಸಂಚರಿಸಲಿರುವ ಯಾತ್ರೆಯು ಫೆ.16 ರಂದು ಸಂಜೆ 4.30 ಕ್ಕೆ ಕಾಸರಗೋಡು ನಗರ ತಲುಪಲಿದೆ. ಫೆ.17 ರಂದು ಭಾನುವಾರ ಬೆಳಿಗ್ಗೆ 10 ಕ್ಕೆ ಚಟ್ಟಂಚಾಲ್, 3 ಕ್ಕೆ ಕೋಟ್ಟಂಚ್ಚೇರಿ, 4 ಗಂಟೆಗೆ ಕಾಲಿಕ್ಕಡವು ಮೂಲಕ ಸಾಗುವ ಯಾತ್ರೆಯು ಕಣ್ಣೂರು ಜಿಲ್ಲೆ ತಲುಪಲಿದೆ. ವಿವಿಧ ಜಿಲ್ಲಾ ಕೇಂದ್ರಗಳ ಹಾದುಹೋಗುವ ಯಾತ್ರೆಯು ತ್ರಿಶೂರು ಜಿಲ್ಲೆ ಮೂಲಕ ಸಾಗಿ ತಿರುವನಂತಪುರದಲ್ಲಿ ಸಮಾಪನಗೊಳ್ಳಲಿದೆ.