ಕೋಟೆಕಾರ್‍ನಲ್ಲಿ ಲೈಬ್ರರಿ ಉದ್ಘಾಟನೆ ಮಾ.2 ರಂದು
0
ಫೆಬ್ರವರಿ 28, 2019
ಕುಂಬಳೆ: ಕೋಟೆಕಾರು ಪ.ಜಾತಿ ಕಾಲನಿಯಲ್ಲಿ ನೆಹರು ಯುವಕೇಂದ್ರ ಕಾಸರಗೋಡು, ನೆಹರೂ ಯುವಕೇಂದ್ರದ ಸುರಕ್ಷಾ ಯೋಜನೆ ಹಾಗೂ ಕುಂಬಳೆ ಸರಕಾರಿ ಶಾಲೆಯ ಯನ್ ಎಸ್ ಎಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ನೂತನ ಲೈಬ್ರರಿ ಮಾ.2 ರಂದು ಲೋಕಾರ್ಪಣೆಗೊಳ್ಳಲಿದೆ.
"ಕೈಗೊಂದು ಪುಸ್ತಕ" ಎಂಬ ಘೋಷಣೆಯೊಂದಿಗೆ ಮುಂದಿನ ತಲೆಮಾರನ್ನು ಓದಿನೆಡೆಡೆಗೆ ಸೆಳೆಯುವ ಉದ್ದೇಶದಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿದೆ.
ತನ್ಬಿಹುಲ್ ಇಸ್ಲಾಂ ಸೆಂಟ್ರಲ್ ಸ್ಕೂಲ್ ಕೋಪ, ಕಾಸರಗೋಡು ಇವರ ವತಿಯಿಂದ ನೀಡುವ ಪುಸ್ತಕಗಳನ್ನು ಸ್ವೀಕರಿಸುವುದರೊಂದಿಗೆ ಜ್ಞಾನ ದೀಪ ಆಟ್ರ್ಸ್ ಫಾರಂ ಎಂಬ ಸಂಘಟನೆಯ ಮೂಲಕ ಈ ಯೋಜನೆ ಮುಂದುವರಿಯಲಿದೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ಆಯೋಜಕರು ವಿನಂತಿಸಿದ್ದಾರೆ.