ಕಾಸರಗೋಡು: ರಾಜ್ಯ ಸರಕಾರದ ಒಂದು ಸಾವಿರ ದಿನ ಪೂರ್ಣ ಆಚರಣೆ ಅಂಗವಾಗಿ ನಡೆಯಲಿರುವ ಜಿಲ್ಲಾ ಮಟ್ಟದ ಪ್ರದರ್ಶನ-ಮಾರಾಟ ಮೇಳ ಫೆ.20ರಿಂದ 27 ವರೆಗೆ ಕಾಂಞಂಗಾಡ್ ಪುರಭವನ ಆವರಣದಲ್ಲಿ ನಡೆಯಲಿದೆ.
ವಿವಿಧ ಸರಕಾರಿ ಇಲಾಖೆಗಳು, ಕುಟುಂಬಶ್ರೀ ಇತ್ಯಾದಿಗಳ ಆಶ್ರಯದಲ್ಲಿ ಜಿಲ್ಲೆಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಸಾಂಸ್ಕøತಿಕ ಕಾರ್ಯಕ್ರಮಗಳು, ಅಭಿವೃದ್ಧಿ ವಿಚಾರಸಂಕಿರಣ ಇತ್ಯಾದಿ ನಡೆಯಲಿವೆ.
ಸಂಘಟನಾ ಸಮಿತಿ ಸಭೆ : ಈ ಸಂಬಂಧ ಕಾಂಞಂಗಾಡ್‍ನಲ್ಲಿ ಸಂಘಟಕ ಸಮಿತಿ ರಚನೆ ನಡೆಯಿತು.
ಕಾಂಞಂಗಾಡ್ ತಾಲೂಕು ಸಭಾಂಗಣದಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಉಪಜಿಲ್ಲಾ„ಕಾರಿ ಅರುಣ್ ಕೆ.ವಿಜಯ್, ಸಹಾಯಕ ಜಿಲ್ಲಾಧಿಕಾರಿ(ಎನ್.ಆರ್.) ಕೆ.ರವಿಕುಮಾರ್, ಹಣಕಾಸು ಅ„ಕಾರಿ ಕೆ.ಸತೀಶನ್, ಕಾಂಞಂಗಾಡ್ ನಗರಸಭೆ ಉಪಾಧ್ಯಕ್ಷೆ ಸುಲೈಖಾ, ಅಜಾನೂರ್ ಗ್ರಾಮ ಪಂಚಾಯತ್ ಅಧ್ಯಕ್ಷ ದಾಮೋದರನ್ ಪುಲ್ಲೂರು, ಪೆರಿಯ ಗ್ರಾಮ ಪಂಚಾಯತ್ ಅಧ್ಯಕ್ಷ ಶಾರದಾ ಎಸ್.ನಾಯರ್ ಮೊದಲಾದವರು ಉಪಸ್ಥಿತರಿದ್ದರು.
ಸಂಘಟನಾ ಸಮಿತಿ ಪದಾಧಿಕಾರಿಗಳು : ಅಧ್ಯಕ್ಷ-ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್, ಸಂಚಾಲಕ-ಉಪಜಿಲ್ಲಾ„ಕಾರಿ ಅರುಣ್ ಕೆ.ವಿಜಯ್, ಉಪಾಧ್ಯಕ್ಷರು-ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ವ್ಯಾಪಾರಿ ವ್ಯವಸಾಯಿ ಪ್ರತಿನಿಧಿಗಳು, ಜತೆ ಸಂಚಾಲಕರು-ತಹಸೀಲ್ದಾರ್, ಕುಟುಂಬಶ್ರೀ ಸಿ.ಡಿ.ಎಸ್.ಅಧ್ಯಕ್ಷೆಯರು, ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂದನನ್. ವಿವಿಧ ಉಪಸಮಿತಿಗಳನ್ನೂ ರಚಿಸಲಾಯಿತು.