HEALTH TIPS

ಚಿಂತೆ ಬೇಡ, 2019ಕ್ಕೆ ಭಾರತಕ್ಕೆ ಮುಂಗಾರು ಮಳೆ ಕೊರತೆ ಇಲ್ಲ: ಸ್ಕೈಮೆಟ್ ವರದಿ

ನವದೆಹಲಿ: 2019ರಲ್ಲಿ ಮುಂಗಾರುಮಳೆ ಚುರುಕಾಗಿರಲಿದ್ದು, ಈ ಬಾರಿ ದೇಶಾದ್ಯಂತ ಭಾಗಶಃ ಮಳೆ ಕೊರತೆ ಇರುವ ಸಾಧ್ಯತೆ ಕಡಿಮೆ ಇದೆ ಎಂದು ಹವಾಮಾನ ವರದಿ ಹೇಳಿದೆ. ಈ ಬಗ್ಗೆ ಹವಾಮಾನ ವರದಿ ಸಂಸ್ಥೆ ಸ್ಕೈಮೆಟ್ ವರದಿ ಬಿಡುಗಡೆ ಮಾಡಿದ್ದು, ಈ ವರ್ಷ ಭಾರತದಲ್ಲಿ ಮುಂಗಾರು ಮಳೆ ಸಾಧಾರಣವಾಗಿ ಇರುವ ಸಾಧ್ಯತೆ ಇದೆ ಎಂದು ಹೇಳಿದೆ. ದೇಶದ ಏಕೈಕ ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್, 'ರೈತರು ಚಿಂತೆಗೀಡಾಗುವ ಅವಶ್ಯಕತೆ ಇಲ್ಲ. ಈ ಬಾರಿ ವಾಡಿಕೆಗಿಂತ ಉತ್ತಮ ಮಳೆಯ ನಿರೀಕ್ಷೆ ಇದೆ. ಈ ಮೂಲಕ ಈ ವರ್ಷ ಬೆಳೆ ಉತ್ತಮವಾಗಿರಲಿದ್ದು, ದೇಶದ ಆರ್ಥಿಕ ಬೆಳವಣಿಗೆ ಹೆಚ್ಚಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ. ಜೊತೆಗೆ ಈ ವರ್ಷ ಕೃಷಿ ಆದಾಯ ಮತ್ತು ಬೆಳವಣಿದೆ ಸುಮಾರು 2 ಟ್ರಿಲಿಯನ್ ಬಿಲಿಯನ್ ಡಾಲರ್ ಗೆ ಹೆಚ್ಚಳವಾಗಲಿದೆ ಎಂದೂ ಸ್ಕೈಮೆಟ್ ವರದಿಯಲ್ಲಿ ತಿಳಿಸಿದ್ದು, ಶೇ.50ಕ್ಕಿಂತ ಹೆಚ್ಚು ಭಾರತದಾದ್ಯಂತ ಸಾಧಾರಣ ಉತ್ತಮ ಮಳೆಯಾಗಲಿದೆ. ಈ ಬಾರಿ ಕಳೆದ ವರ್ಷದಂತ ಅತೀವೃಷ್ಟಿಯ ಸಾಧ್ಯತೆ ಕಡಿಮೆ ಎಂದೂ ವರದಿಯಲ್ಲಿ ಹೇಳಲಾಗಿದ್ದು, ಒಟ್ಟಾರೆ 4 ತಿಂಗಳ ಅವಧಿಯಲ್ಲಿ 89ಸಿಎಂ ಮಳೆಯಾಗುವ ನಿರೀಕ್ಷೆ ಇದೆ ಎಂದು ಸ್ಕೈಮೆಟ್ ಸಿಇಒ ಜತಿನ್ ಸಿಂಗ್ ಹೇಳಿದ್ದಾರೆ. ಅಂತೆಯೇ ಈ ಬಾರಿ ಶೇ.96 ರಿಂದ ಶೇ.104ರಷ್ಟು ಮಳೆಯಾಗುವ ನಿರೀಕ್ಷೆ ಇದ್ದು, ಮಾನ್ಸೂನ್ ತಿಂಗಳ ಅವಧಿಯಲ್ಲಿ ಶೇ.70ರಷ್ಟು ಮಳೆ ನಿರೀಕ್ಷಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries