21ರಿಂದ ನೀಲೇಶ್ವರದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
0
ಫೆಬ್ರವರಿ 08, 2019
ಮುಳ್ಳೇರಿಯ: ದ್ವಿತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಫೆ.21ರಿಂದ 24 ವರೆಗೆ ನೀಲೇಶ್ವರ ಪಡಿಞÂಟ್ಟಂಕೊಳುವಲ್ ನಲ್ಲಿ ನಡೆಯಲಿದೆ.
ನೀಲೇಶ್ವರ ನಗರಸಭೆ ವತಿಯಿಂದ, ಸ್ಥಳೀಯ ನವಜ್ಯೋತಿ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ಸಹಕರದೊಂದಿಗೆ ಚಲನಚಿತ್ರೋತ್ಸವ ನಡೆಯುತ್ತಿದೆ. ವಿವಿಧ ಭಾಷೆಗಳ 8 ಚಿತ್ರಗಳು ಈ ವೇಳೆ ಪ್ರದರ್ಶನಗೊಳ್ಳಲಿವೆ. ಕಾರ್ಯಕ್ರಮ ಅಂಗವಾಗಿ ಚಲನಚಿತ್ರ ವಲಯದ ಸಾಧಕರಾದ ಮೃಣಾಲ್ ಸೆನ್, ಲೆನಿನ್ ರಾಜೇಂದ್ರನ್ ಸಂಸ್ಮರಣೆ, "ಮೀನ ಮಾಸತ್ತಿಲೆ ಸೂರ್ಯನ್" ಚಿತ್ರದಲ್ಲಿ ಅಭಿನಯಿಸಿದ ನೀಲೇಶ್ವರ ಪ್ರದೇಶದ ಕಲಾವಿದರಿಗೆ ಅಭಿನಂದನೆ ಇತ್ಯಾದಿ ನಡೆಯಲಿವೆ.
ಕಾರ್ಯಕ್ರಮದ ಯಶಸ್ಸಿಗಾಗಿ ಸಂಘಟನಾ ಸಮಿತಿ ರಚನೆ ಸಭೆ ಜರುಗಿತು. ನಗರಸಭೆ ಅಧ್ಯಕ್ಷ ಪ್ರೊ.ಕೆ.ಪಿ.ಜಯರಾಜನ್ ಉದ್ಘಟಿಸಿದರು. ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ.ಕುಂಞÂಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಪಿ.ಪಿ.ಮಹಮ್ಮದ್ ರಾಫಿ, ಸದಸ್ಯರಾದ ಪಿ.ವಿ.ರಾಮಚಂದ್ರನ್ ಮಾಸ್ತರ್, ಪಿ.ವಿ.ರಾಧಾಕೃಷ್ಣನ್, ಕೆ.ವಿ.ರಾದಾ, ಕೆ.ತಂಗಮಣಿ, ವಿವಿಧ ಕ್ಷೇತ್ರಗಳ ಗಣ್ಯರಾದ ಕೆ.ವಿ.ಸಜೀವನ್ ಮಾಸ್ತರ್, ಸಿ.ಕೆ.ನಾರಾಯಣನ್ ಮಾಸ್ತರ್, ಕೆ.ಎಂ.ನಾರಾಯಣನ್, ಕೆ.ಉಣ್ಣಿನಾಯರ್, ಕೆ.ವಿ.ರಾಜೀವನ್ ಮೊದಲಾದವರು ಉಪಸ್ಥಿತರಿದ್ದರು.
ಸದಸ್ಯ ಪಿ.ಕುಂಞÂಕೃಷ್ಣನ್ ಸ್ವಾಗತಿಸಿ, ಸುಜಿತ್ ಮಾಸ್ಟರ್ ವಂದಿಸಿದರು. ಸಂಘಟನಾ ಸಮಿತಿ ಪದಾಧಿಕಾರಿಗಳು : ಅಧ್ಯಕ್ಷ-ನಗರಸಭೆ ಅಧ್ಯಕ್ಷ ಪ್ರೊ.ಕೆ.ಪಿ.ಜಯರಾಜನ್, ಪ್ರಧಾನ ಸಂಚಾಲಕ-ಕೆ.ವಿ.ಸಜೀವನ್ ಮಾಸ್ತರ್ ಅವರುಗಳನ್ನು ಆಯ್ಕೆಮಾಡಲಾಗಿದೆ.