HEALTH TIPS

ಇಸ್ರೊದಿಂದ ನಾಳೆ ಜಿಸ್ಯಾಟ್-31 ಉಪಗ್ರಹ ಉಡಾವಣೆ

ಬೆಂಗಳೂರು: ಭಾರತದ 40ನೇ ಸಂವಹನ ಉಪಗ್ರಹ ಜಿಸ್ಯಾಟ್-31 ನ್ನು ನಾಳೆ ಫ್ರಾನ್ಸ್ ನ ಗಯಾನ ಉಡ್ಡಯನ ಕೇಂದ್ರದಿಂದ ಉಡಾಯಿಸಲಾಗುತ್ತಿದೆ. ಇಸ್ರೊ ಉಡಾಯಿಸುತ್ತಿರುವ ಅತಿ ತೂಕದ ಉಪಗ್ರಹಗಳಲ್ಲಿ ಇದು ಒಂದಾಗಿದ್ದು ದೇಶದಲ್ಲಿ ಸಂವಹನ ಸಾಮಥ್ರ್ಯವನ್ನು ಹೆಚ್ಚಿಸಲಿದೆ. ಜಿಸ್ಯಾಟ್ -31 ಅಥವಾ ಜಿಯೊಸ್ಟೇಷನರಿ-31 2 ಸಾವಿರದ 535 ಕೆಜಿ ತೂಕವನ್ನು ಹೊಂದಿದ್ದು ಈಗಾಗಲೇ ಕಕ್ಷೆಯಲ್ಲಿರುವ ಕೆಲವು ಹಳೆಯ ಉಪಗ್ರಹಗಳನ್ನು ಇದು ಬದಲಾಯಿಸಲಿದೆ. ಏರಿಯನ್-5 ಉಡ್ಡಯನ ವಾಹಕದ ಮೂಲಕ ನಾಳೆ ನಸುಕಿನ ಜಾವ 2.31 ಗಂಟೆಗೆ ಉಡಾಯಿಸಲಾಗುತ್ತಿದೆ. ಈ ಉಪಗ್ರಹದ ಜೀವಿತಾವಧಿ 15 ವರ್ಷಗಳು. ವಿಸ್ಯಾಟ್(ನೆರಿ ಸ್ಮಾಲ್ ಅಪೆರ್ಚರ್ ಟರ್ಮಿನಲ್)ನ ನೆಟ್ ವರ್ಕ್, ಟೆಲಿವಿಷನ್ ಸಂಪರ್ಕ, ಡಿಜಿಟಲ್ ಸ್ಯಾಟಲೈಟ್ ಸುದ್ದಿ ಸಂಗ್ರಹ, ಡಿಟಿಎಚ್ ದೂರದರ್ಶನ ಸೇವೆ, ಸೆಲ್ಯುಲ್ಲರ್ ಸಂಪರ್ಕ ಇತ್ಯಾದಿ ಸೇವೆಗಳಿಗೆ ಈ ಸ್ಯಾಟಲೈಟನ್ನು ಬಳಸಲಾಗುತ್ತದೆ. ಕಳೆದ ಜನವರಿ 24ರಂದು ಪಿಎಎಲ್ ವಿ ಸಿ-44 ನ್ನು ಉಡಾಯಿಸಿದ ನಂತರ ಇಸ್ರೊ 2019ರಲ್ಲಿ ಉಡಾಯಿಸುತ್ತಿರುವ ಎರಡನೇ ಉಪಗ್ರಹ ಇದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries