ಮಾ.3 ರಂದು ನಿವೃತ್ತ ಪಂಚಾಯತ್ ನೌಕರರ ಜಿಲ್ಲಾ ಸಮಾವೇಶ
0
ಫೆಬ್ರವರಿ 28, 2019
ಕಾಸರಗೋಡು: ಪಂಚಾಯತ್‍ಗಳಲ್ಲಿ ಸೇವೆಗೈದು ನಿವೃತ್ತರಾದ ಅಧಿಕಾರಿಗಳು ಮತ್ತು ನೌಕರರ ಸಂಘಟನೆಯನ್ನು ತೃಶ್ಶೂರಿನಲ್ಲಿ ನಡೆದ ಸಭೆಯಲ್ಲಿ ರೂಪೀಕರಿಸಲಾಯಿತು.
ಪಿ.ಸಿ.ವೇಲಾಯುಧನ್ ಕುಟ್ಟಿ ಮಲಪ್ಪುರಂ ಅಧ್ಯಕ್ಷ, ಟಿ.ವಿ.ಉದಯಭಾನು ಎರ್ನಾಕುಳಂ ಪ್ರಧಾನ ಕಾರ್ಯದರ್ಶಿ, ತಾರಾನಾಥ ಮಧೂರು ಕಾಸರಗೋಡು ಕೋಶಾಧಿಕಾರಿಯಾಗಿ ಸಮಿತಿ ರಚಿಸಲಾಯಿತು. ಎಲ್ಲ ಜಿಲ್ಲೆಗಳಲ್ಲೂ ಸಂಚಾಲಕರನ್ನು ನೇಮಿಸಲಾಯಿತು. ಕಾಸರಗೋಡು ಜಿಲ್ಲೆಯ ಸಂಚಾಲಕರಾಗಿ ಲಕ್ಷ್ಮಣನ್ ಚೆಮ್ನಾಡ್ ಮತ್ತು ಸಿ.ದಾಮೋದರನ್ ತೃಕ್ಕರಿಪುರ ಅವರನ್ನು ನೇಮಿಸಲಾಯಿತು.
ಕಾಸರಗೋಡು ಜಿಲ್ಲಾ ಸಮಾವೇಶ ಮಾ.3 ರಂದು ಮಧ್ಯಾಹ್ನ 2 ಗಂಟೆಗೆ ಕಾಸರಗೋಡು ಹೊಸ ಬಸ್ ನಿಲ್ದಾಣ ಸಮೀಪದ ಸಿಟಿ ಟವರ್ ಸಭಾಂಗಣದಲ್ಲಿ ನಡೆಯಲಿದೆ. ನಿವೃತ್ತಿ ಹೊಂದಿದ ಎಲ್ಲಾ ಪಂಚಾಯತ್ ಅಧಿಕಾರಿಗಳು, ನೌಕರರು ಭಾಗವಹಿಸುವಂತೆ ವಿನಂತಿಸಲಾಗಿದೆ.