ಮಾದರಿ ಗ್ರಾ.ಪಂ.ಗಳಾಗಿ 4 ಮಾದರಿ ಗ್ರಾ.ಪಂ.ಗಳ ಆಯ್ಕೆ
0
ಫೆಬ್ರವರಿ 08, 2019
ಕಾಸರಗೋಡು: ಜಿಲ್ಲೆಯ 4 ಗ್ರಾಮಪಂಚಾಯತ್ ಗಳನ್ನು ಮಾದರಿ ಪಂಚಾಯತ್ ಗಳಾಗಿ ಆಯ್ಕೆ ಮಾಡಲಾಗಿದೆ. 2021 ನೇ ಇಸವಿ ವೇಳೆಗೆ ರಾಜ್ಯದ ಎಲ್ಲ ಗ್ರಾಮಪಂಚಾಯತ್ ಗಳನ್ನು ಆಹಾರ ಸುರಕ್ಷೆ ಗ್ರಾಮಪಂಚಾಯತ್ ಗಳಾಗಿಸುವ ಉದ್ದೇಶದೊಂದಿಗೆ ಆಹಾರ ಸುರಕ್ಷೆ ಇಲಾಖೆ ಜಿಲ್ಲೆಯ 4 ಗ್ರಾಮಪಂಚಾಯತ್ ಗಳನ್ನು ಮಾದರಿಯಾಗಿ ಆಯ್ಕೆಮಾಡಿದೆ.
ಮಂಗಲ್ಪಾಡಿ, ಮೊಗ್ರಾಲ್ ಪುತ್ತೂರು, ಉದುಮಾ, ಅಜಾನೂರು ಪಂಚಾಯತ್ ಗಳು ಈ ವರ್ಷದ ಮಾದರಿ ಗ್ರಾಮಪಂಚಾಯತ್ ಗಳಾಗಿ ಆಯ್ಕೆಗೊಂಡಿವೆ.
ಸಾರ್ವಜನಿಕ ಸುರಕ್ಷೆ , ಆರೋಗ್ಯಕರ ಆಹಾರ ರೀತಿ ಕುರಿತು ಜಾಗೃತಿ ಮೂಡಿಸುವಲ್ಲಿ ಈ ಪಂಚಾಯತ್ ಗಳು ವಹಿಸಿದ ಪಾತ್ರದ ಹಿನ್ನೆಲೆಯಲ್ಲಿ ಈ ಆಯ್ಕೆ ನಡೆದಿದೆ. ಆಹಾರ ಉತ್ಪಾದನೆ ನಡೆಸುವ ಸಂಸ್ಥೆಗಳಿಗೆ ಪರವಾನಗಿನೀಡುವ ವೇಳೆ ನಡೆಸಿದ ಜಾಗೃತಿ, ಕುಡಿಯುವ ನೀರಿಗಾಗಿ ಜಲಾಶಯಗಳ ಸಂರಕ್ಷಣೆ, ಅಂಗನವಾಡಿಗಳಗಳ, ಶಾಲೆಗಳ, ಆಹಾರ ಉತ್ಪಾದನೆ ಸಂಸ್ಥೆ ಇತ್ಯಾದಿಗಳ ತಪಾಸಣೆ ನಡೆಸುವಲ್ಲಿ ಈ ಸಂಸ್ಥೆಗಳುಮಾದರಿಯಾಗಿವೆ. ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಭಿತ್ತಿಪತ್ರ, ಫಲಕಗಳು, ನೋಟೀಸುಗಳ ಲಗತ್ತಿಸುವಿಕೆ, ವಿಚಾರಸಂಕಿರಣ ನಡೆಸುವ ಮೂಲಕ, ಶಾಲೆಗಳಲ್ಲಿ, ಕಾಲೇಜುಗಳಲ್ಲಿ, ಅಂಗನವಾಡಿಗಳಲ್ಲಿ , ಕುಟುಂಬಶ್ರೀ ನೆರೆಕೂಟಗಳಲ್ಲಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಆಹಾರ ಸುರಕ್ಷೆ ಸಂದೇಶ ನೀಡಲಾಗಿತ್ತು.