ಗಮನ ಸೆಳೆದ ಪೆರ್ಲ ಶಾಲಾ ಕಲಿಕೋತ್ಸವ
0
ಫೆಬ್ರವರಿ 08, 2019
ಪೆರ್ಲ: ಮಕ್ಕಳು ತರಗತಿ ಕೋಣೆಯಲ್ಲಿ ಪಡೆದ ಶೈಕ್ಷಣಿಕ ಪ್ರಗತಿಯ ಪ್ರದಶ9ನ ವೇದಿಕೆಯಾಗಿ ಕಲಿಕೋತ್ಸವ ಹೊರಹೊಮ್ಮಿದೆ. ಪ್ರತಿಭೆಯ ಪೋಷಣೆಯಲ್ಲಿ ನಿರಂತರವಾಗಿ ದುಡಿಯುವ ಅಧ್ಯಾಪಕರು ಹಾಗೂ ಮಕ್ಕಳ ಹೆತ್ತವರ ಪರಿಶ್ರಮ ಶ್ಲಾಘನೀಯವಾಗಿದೆ ಎಂದು ಪೆರ್ಲ ಶ್ರೀಸತ್ಯನಾರಾಯಣ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಕಲಿಕೋತ್ಸವವನ್ನು ಶಾಲಾ ಮುಖ್ಯೋಪಾಧ್ಯಾಯ ಮಹಾಲಿಂಗೇಶ್ವರ ಎನ್ ಉದ್ಘಾಟಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಶ್ರಫ್ ಕುರೆಡ್ಕ ಅಧ್ಯಕ್ಷತೆ ವಹಿಸಿದ್ದರು.ಬಿ. ಆರ್.ಸಿ ಸಂಯೋಜಕಿ ಸುಪ್ರಿಯಾÉುಣ್ಮಕಜೆ ಗ್ರಾಮ ಪಂಚಾಯತ್ ವಿದ್ಯಾಭ್ಯಾಸ ಸ್ಥಾಯಿಸಮಿತಿ ಅಧ್ಯಕ್ಷೆ ಆಯಿಷಾ ಎ.ಎ.ಪೆಲ9, ಉಪಾಧ್ಯಕ್ಷ ಅಬೂಬಕ್ಕರ್ ಸಿದ್ಧಿಕ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಭಟ್, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ಸುಬ್ರಮ್ಮಣ್ಯ ಭಟ್ ಕೊಡುಮಾಡ್, ಮಾತೃಸಂಘದ ಅಧ್ಯಕ್ಷೆ ಉಷಾ ಅಮೇಕ್ಕಳ, ಪೌಢ ಶಾಲಾ ಮುಖ್ಯೋಪಾಧ್ಯಾಯ ರಾಜೇಂದ್ರ ಬಿ, ಮುಂತಾದವರು ಉಪಸ್ಥಿತರಿದ್ದರು.
ಪಾಠ ಭಾಗದಲ್ಲಿ ಬಂದಿರುವ ವಿಷಯಗಳಿಗೆ ಹೊಸ ರೂಪುನೀಡಿ ಅಚ್ಚುಕಟ್ಟಾದ ಮಕ್ಕಳ ಮಂಡಿಸುವಿಕೆ ಎಲ್ಲರ ಗಮನ ಸೆಳೆಯಿತು.ವೈಜ್ಞಾನಿಕ ಆಶಯಗಳ ಮೇಲಿನ ಪ್ರಯೋಗದ ಪ್ರಾತ್ಯಕ್ಷಿಕೆ 'ಮ್ಯಾಜಿಕ್ ಶೋ ' , ಪಾಠ ಪುಸ್ತಕದ ಹಾಡುಗಳಿಗೆ ರಾಗ ನೃತ್ಯ ಸಂಗೀತ ಪರಿಕರಗಳ ಬಳಕೆಯೊಂದಿಗೆ ಕೊರಿಯಾಗ್ರಾಫಿ, ನಾಟಕ , ಪಿಕ್ ಆಂಡ್ ಸೇ, ಸೂಪರ್ ಸ್ಟುಡೆಂಟ್ಸ್,ಹೀಗೆ ಓದುವಿಕೆ ಬರವಣಿಗೆ ಹಾಗೂ ಹೆತ್ತವರ ಮಾತು ಮುಂತಾದ ಮೌಲ್ಯಯುತ ಕಾಯ9ಕ್ರಮಗಳೊಂದಿಗೆ ಕಲಿಕೋತ್ಸವ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಶಿಕ್ಷಕ ಕೋಟೆ ಗೋಪಾಲಕೃಷ್ಣ ಭಟ್ ಸ್ವಾಗತಿಸಿ, ಉದಯ ಸಾರಂಗ ವಂದಿಸಿದರು.ಶಿಕ್ಷಕಿ ಕಲಂದರ್ ಬೀಬಿ ಕಾಯ9ಕ್ರಮ ನಿರೂಪಿಸಿದರು.