ಕಾಸರಗೋಡು: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಡಾ.ಪ್ರಭಾಕರನ್ ಆಯೋಗ ಶಿಫಾರಸು ಮಾಡಿರುವ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನ ವಿಶೇಷ ಅಧಿಕಾರಿಯಾಗಿ ಕೇರಳ ಕೃಷಿವಿವಿಯ ನಿಯಂತ್ರಣಾಧಿಕಾರಿ ಇ.ಪಿ.ರಾಜ್ ಮೋಹನ್ ಅವರನ್ನು ನೇಮಿಸಲಾಗಿದೆ.
ಜಿಲ್ಲಾ ಹಣಕಾಸು ನಿರೀಕ್ಷಣೆ ಅಧಿಕಾರಿ, ಜಿಲ್ಲಾ ಹಣಕಾಸು ಅಧಿಕಾರಿ,ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಮೊದಲಾದ ಪದವಿಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ.ಪ್ರೌಢಶಾಲಾ ಶಿಕ್ಷಕನಾಗಿ ಕಾ?ಂಗಾಡ್ ಸೌತ್, ಪಡನ್ನ ಕಡಪ್ಪುರಂ, ಉದಿನೂರ್ ಸಹಿತ ವಿವಿಧೆಡೆ ಸೇವೆ ಸಲ್ಲಿಸಿದ್ದಾರೆ. ಅತ್ಯುತ್ತಮ ಸಾಧನೆ ನಡೆಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯ ಇನ್ ವೆನ್ಶನ್ ಪ್ರಶಸ್ತಿ, ಎರಡು ಬಾರಿ ಗುಡ್ ಸರ್ವೀಸ್ ಎಂಟ್ರಿ ಗಳಿಸಿದ್ದಾರೆ. ಕೋಯಿಕೋಡ್ ವಿವಿಯಲ್ಲಿ ಎಕನಾಮಿಕ್ಸ್ ಬಿ.ಎ.ಯನ್ನು ದ್ವಿತೀಯ ಯಾರ್ಂಕ್ ನೊಂದಿಗೆ ಪಡೆದಿದ್ದಾರೆ. ಮೈಸೂರು ವಿವಿಯಿಂದ ಎಕನಾಮಿಕ್ಸ್ ಎಂ.ಎ.ಯನ್ನು ಚಿನ್ನದ ಪದಕ ಸಹಿತ ಪಡೆದರು. ಇವರು ಜಿಲ್ಲೆಯ ಚಂದೇರ ನಿವಾಸಿಯಾಗಿದ್ದಾರೆ.