ಕಾಸರಗೋಡು: ದೇಶದ ಪ್ರಥಮ ಯೋಗ-ಪ್ರಕೃತಿ ಚಿಕಿತ್ಸೆ ಸಂಶೋಧನೆ ಕೇಂದ್ರ ಜಿಲ್ಲೆಯ ಕರಿದಳಂನಲ್ಲಿ ಸ್ಥಾಪನೆಗೊಳ್ಳಲಿದೆ. ನಾಳೆ(ಫೆ.3) ಬೆಳಿಗ್ಗೆ 10 ಗಂಟೆಗೆ ನಡೆಯುವ ಸಮಾರಂಭದಲ್ಲಿ ಕೇಂರ ಸಚಿವ ಶ್ರೀಪಾದ್ ಯಶ್ವಂತ್ ಶಿಲಾನ್ಯಾಸ ನಡೆಸುವರು.
ಕೇಂದ್ರ ಆಯುಷ್ ಇಲಾಖೆ ವತಿಯಿಂದ ಕಿನಾನೂನು-ಕರಿಂದಳಂ ಗ್ರಾಮಪಂಚಾಯತ್ನಲ್ಲಿ ಸ್ಥಾಪಿಸುವ ಈ ಕೇಂದ್ರಕ್ಕೆ ಶಿಲಾನ್ಯಾಸ ನಡೆಯಲಿದೆ.
ಸಮಾರಂಭದಲ್ಲಿ ಸಂಸದ ಪಿ.ಕರುಣಾಕರನ್, ಸಚಿವರಾದ ಕೆ.ಕೆ.ಶೈಲಜಾ, ಇ.ಚಂದ್ರಶೇಖರನ್ ಉಪಸ್ಥಿತರಿರುವರು. ಆಯುಷ್ ಇಲಾಖೆ ವ್ಯಾಪ್ತಿಯ ಸ್ವಯಾಡಳಿತೆ ಸಂಸ್ಥೆಯಾಗಿರುವ ಸೆಂಟ್ರಲ್ ಕೌನ್ಸಿಲ್ ಫಾರ್ ರೀಸರ್ಚ್ ಇನ್ ಯೋಗ ಆಂಡ್ ನ್ಯಾಚುರೋಪತಿ(ಸಿ.ಸಿ.ಆರ್.ವೈ.ಎನ್.) ಕರಿಂದಳಂನಲ್ಲಿ ಈ ಸಂಸ್ಥೆಯನ್ನು ಆರಂಭಿಸಲಿದೆ. ಆಸ್ಪತ್ರೆ ಸಹಿಒತ ಸಂಸ್ಥೆಗೆ 30 ವರ್ಷದ ಅವಧಿಗೆ 15 ಎಕ್ರೆ ಜಾಗ ರಾಜ್ಯ ಸರಕಾರ ಭೂಹಕ್ಕು ರೂಪದಲ್ಲಿ ನೀಡಿದೆ. 100 ಹಾಸುಗೆಗಳಿರುವ ದಾಖಲಾತಿ ಚಿಕಿತ್ಸೆಯ ಆಸ್ಪತ್ರೆ ಇಲ್ಲಿ ನಿರ್ಮಾಣಗೊಳ್ಳಲಿದೆ. ಬಿ.ಪಿ.ಎಲ್. ವಿಭಾಗದ ಮಂದಿಗೆ ಚಿಕಿತ್ಸೆ ಉಚಿತವಾಗಿರುವುದು. ಹಿರಿಯ ನಾಗರೀಕರಿಗೆ ಶುಲ್ಕದಲ್ಲಿ ಅಧಾರ್ಂಶ ರಿಯಾಯಿತಿ ಇದೆ.
ಶೀಘ್ರದಲ್ಲೇ ಸ್ನಾತಕೋತ್ತರ ತರಬೇತಿ ಆರಂಭಿಸುವ ಯೋಜನೆಯಿದೆ ಎಂದು ಸಿ.ಸಿ.ಆರ್.ವೈ.ಎನ್.ನಿರ್ದೇಶಕ ಡಾ.ಈಶ್ವರ ಎನ್.ಆಚಾರ್ಯ ತಿಳಿಸಿದರು. ಕಂದಾಯ ಸಚಿವ ಇ.ಚಂದ್ರೇಖರನ್ ಅವರ ವಿಶೇಷ ಕಾಳಜಿ ಪ್ರಕಾರ ವೆಳ್ಳರಿಕುಂಡ್ ತಾಲೂಕಿನ ಕರಿಂದಳಂನಲ್ಲಿ ಸಂಸ್ಥೆ ನಿರ್ಮಾಣಗೊಳ್ಳುತ್ತಿದೆ.