ಆದ್ಯಂತ್ ಅಡೂರು ಶಾಸ್ತ್ರೀಯ ಸಂಗೀತದಲ್ಲಿ ಪ್ರಥಮ
0
ಫೆಬ್ರವರಿ 06, 2019
ಮುಳ್ಳೇರಿಯ: ಕೇರಳದ ತ್ರಿಶೂರಿನ ಸರಸ್ವತಿ ಮಂದಿರದಲ್ಲಿ ಇತ್ತೀಚೆಗೆ ಉಡುಪಿ ಮಾಧ್ವ ಬ್ರಾಹ್ಮಣ ಸಭಾದ 41ನೇ ಕೇರಳ ರಾಜ್ಯ ಮಟ್ಟದ ಸಮ್ಮೇಳನದ ಅಂಗವಾಗಿ ಸಮುದಾಯದ ವ್ಯಾಪ್ತಿಯಲ್ಲಿ ನಡೆದ ಕೇರಳ ರಾಜ್ಯ ಮಟ್ಟದ ಸಬ್ ಜ್ಯೂನಿಯರ್ ವಿಭಾಗದ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಕಾಸರಗೋಡು ಜಿಲ್ಲೆಯ ಅಡೂರು ವಿದ್ಯಾಭಾರತಿ ವಿದ್ಯಾಲಯದ 5ನೇ ತರಗತಿಯ ವಿದ್ಯಾರ್ಥಿ ಆದ್ಯಂತ್ ಅಡೂರು ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ ಉಡುಪಿ ಮಾಧ್ವ ಬ್ರಾಹ್ಮಣ ಸಭಾದ ಕೇರಳ ರಾಜ್ಯದ ವಿವಿಧ ಘಟಕಗಳ ಸ್ಪರ್ಧಾಳುಗಳು ಭಾಗವಹಿಸಿದ್ದರು. ಆದ್ಯಂತ್ ಅವರು ಸಾಹಿತಿ ವಿರಾಜ್ ಅಡೂರು ಹಾಗೂ ಜಯಲಕ್ಷ್ಮಿ ದಂಪತಿಯ ಪುತ್ರ. ಅಡೂರಿನ ಬೈತನಡ್ಕದ ಶಾರದಾದೇವಿ ಅವರಿಂದ ಸಂಗೀತ ಶಿಕ್ಷಣ ಪಡೆಯುತ್ತಿದ್ದಾರೆ.