ಕುಂಟಿಕಾನ ಮಠದಲ್ಲಿ ಜೀರ್ಣೋದ್ಧಾರ ಸಮಿತಿ ಸಭೆ
0
ಫೆಬ್ರವರಿ 10, 2019
ಬದಿಯಡ್ಕ: ಜೀರ್ಣೋದ್ಧಾರಗೊಳ್ಳುತ್ತಿರುವ ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಾಲಯದ ಕಾಮಗಾರಿ ಕೆಲಸ ಕಾರ್ಯಗಳ ಅವಲೋಕನಾ ಸಭೆ ಶ್ರೀ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆಯಿತು.
ಪ್ರಧಾನ ಕಾರ್ಯದರ್ಶಿ ಕೆ.ಎಂ.ಶಾಂ ಭಟ್ ಅವರು ಇದುವರೆಗಿನ ಕೆಲಸ ಕಾರ್ಯಗಳ ನಿರ್ವಹಣೆ ಹಾಗು ಲೆಕ್ಕಪತ್ರ ಮಂಡಿಸಿದರು. ಗೌರವಾಧ್ಯಕ್ಷ ವಸಂತ ಪೈ ಬದಿಯಡ್ಕ ಇದುವರೆಗೆ ನಡೆದ ಕೆಲಸಗಳಿಗೆ ಮೆಚ್ಚುಗೆ ಸೂಚಿಸಿ ಮುಂದೆ ನಡೆಯಬೇಕಾಗಿದ್ದ ಕಾರ್ಯಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಮಿಂಚಿನಡ್ಕ ಮಹಾಬಲ ಭಟ್, ಅಪ್ಪಣ್ಣ ಮಾಸ್ತರ್, ಕೆ.ಶಂಕರ ನಾರಾಯಣ ಶರ್ಮ, ಶಿವರಾಮ, ಅಣ್ಣಪ್ಪ ಮಾಸ್ತರ್, ರಾಮ ನಾಯಕ್, ಬಾಲಸುಬ್ರಹ್ಮಣ್ಯ, ದೇವಸ್ಯ, ಆಡಳಿತ ಮೊಕ್ತೇಸರ ಕೆ.ಎಂ.ಶಂಕರನಾರಾಯಣ ಭಟ್ ಸಹಿತ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.