ಕುಟುಂಬಶ್ರೀ ಯೋಜನೆ ನಿರ್ವಹಣೆಯಲ್ಲಿ ಅತ್ಯುತ್ತಮ ಸಾಧನೆ : ಕಾಸರಗೋಡು ಜಿಲ್ಲಾ ಮಿಷನ್ ನ ಹೆಗ್ಗಳಿಕೆ
0
ಫೆಬ್ರವರಿ 08, 2019
ಕಾಸರಗೋಡು: ರಾಜ್ಯ ಸರಕಾರದ ಸ್ವಸಹಾಯ ಯೋಜನೆ ಕುಟುಂಬಶ್ರೀಯ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ ಕಾಸರಗೋಡು ಜಿಲ್ಲಾ ಮಿಷನ್ ಅತ್ಯುತ್ತಮ ಸಾಧನೆ ನಡೆಸಿ ಗರಿಮೆ ತಂದಿದೆ.
ಪ್ರಸ್ತುತ ಆರ್ಥಿಕ ವರ್ಷದಲ್ಲಿ ಆರಂಭಿಸಿದ ಎಲ್ಲ ಚಟುವಟಿಕೆಗಲ್ಲಿ ಜಿಲ್ಲಾ ಮಿಷನ್ ಅತ್ಯುತ್ತಮ ಸಾಧನೆ ಮಾಡಿದೆ. ಯೋಜನೆ ನಿಧಿಯಾಗಿರುವ 9,77,39197 ರೂ. ಪೂರ್ಣ ರೂಪದಲ್ಲಿ ಬಳಸಿದೆ. ನೆರೆಕೂಟಗಳಲ್ಲಿ ಇಂಟರ್ ಸಬ್ಸಿಡಿ ರೂಪದಲ್ಲಿ 2,20,94190 ರೂ., ಕೃಷಿ ವಲಯದಲ್ಲಿ ಇಂಟೆನ್ಸೀ ರೂಪದಲ್ಲಿ 40,11357 ರೂ. ಈ ವಲಯದ ಇಂಟರ್ ಸಬ್ಸಿಡಿಯಾಗಿ 76,28950 ರೂ., ಉದ್ದಿಮೆ ವಲಯದಲ್ಲಿ 60,44511 ರೂ. ಜೆಂಡರ್ ಯೋಜನೆಗಳಿಗೆ 32,36012 ರೂ., ಪರಿಶಿಷ್ಟ ಪಂಗಡ ವಲಯದಲ್ಲಿ 9,54454 ರೂ., ಬಾಲಸಭೆಗೆ 9,49,430 ರೂ. ವೆಚ್ಚಮಾಡಲಾಗಿದೆ.
ನೆರೆಕೂಟಗಳ ರಿವೋಲ್ವಿಂಗ್ ನಿಧಿ ರೂಪದಲ್ಲಿ10,95,000ರೂ., ಪಶುಸಂಗೋಪನೆ ವಲಯದಲ್ಲಿ 2,13,62500 ರೂ., ಮಾರ್ಕೆಟಿಂಗ್ ವಲಯದಲ್ಲಿ 88400 ರೂ.,ನೂತನವಾಗಿ 9 ಬಡ್ಸ್ ಶಾಲೆಗಳ ಚಟುವಟಿಕೆಗಳಿಗೆ 1,25,68950 ರೂ., ಕುಟುಂಬಶ್ರೀ ಶಾಲಾಯೋಜನೆಯಾಗಿರುವ 3,54,368 ರೂ. ಆಡಳಿತೆ ನಿರ್ವಹಣೆ ನಿಧಿ ರೂಪದಲ್ಲಿ 22,24800 ರೂ. ವೆಚ್ಚ ಮಾಡಲಾಗಿದೆ. ನೆರೆಕೂಟಗಳ ರಿವಾಲ್ವಿಂಗ್ ನಿಧಿ ರೂಪದಲ್ಲಿ 10,95,000ರೂ., ಅನಾತ ರಹಿತ ಕೇರಳಂ ಯೋಜನೆಗಾಗಿ 3,96,18295 ರೂ.ವೆಚ್ಚ ಮಾಡಲಾಗಿದೆ.
ಕಾಸರಗೋಡು ಜಿಲ್ಲಾ ಮಿಷನ್ ವ್ಯಾಪ್ತಿಯ "ಸ್ನೇಹಿತೆ ಕಾಲಿಂಗ್ ಬೆಲ್" ರಾಜ್ಯದ ಇತರರಿಗೆ ಮಾದರಿಯಾಗಿದೆ. ಬಂಜರು ರಹಿತ ಗ್ರಾಮ ಯೋಜನೆ ಮೂಲಕ ಯುವಜನತೆಯನ್ನು ಕೃಷಿ ವಲಯದತ್ತ ಆಕರ್ಷಿಸುವ ನಿಟ್ಟಿನಲ್ಲಿ 414 ಎಕ್ರೆ ಬಂಜರು ಭೂಮಿ ಪತ್ತೆ ಮಾಡಿ ಅದನ್ನು ಕೃಷಿಗೆ ಅನುಯೋಜ್ಯಗೊಳಿಸಲಾಗಿದೆ. ಕೇಂದ್ರ ಸರಕಾರಿ ಯೋಜನೆ ದೀನ್ ದಯಾಳ್ ಗ್ರಾಮೀಣ ಕೌಶಲ್ಯ ಯೋಜನೆ(ಡಿ.ಡಿ.ಯು.ಜಿ.ಕೆ.ವೈ.) ಮಕ್ಕಲೀಗೆವಿವಿಧ ವಿಚಾರಗಳಲ್ಲಿ ತರಬೇತಿನೀಡಲಾಗಿದೆ. ವಿವಿಧ ಸಂಸ್ಥೆಗಳಲ್ಲಿ 1650 ಮಂದಿ ನೌಕರಿ ಒದಗಿಸಿಕೊಡಲು ಸಾಧ್ಯವಾಗಿದೆ. ಉದ್ಯಮ ವಲಯದಲ್ಲಿ ಗ್ರಾಮಕಿರಣ ಎಲ್.ಇ.ಡಿ.ಬಲ್ಬ್ ನಿರ್ಮಾಣ, ನಿರ್ಮಾಣ ಘಟಕಗಳು, ಕ್ಯಾಂಟೀನ್-ಕ್ಯಾಟರಿಂಗ್ ಘಟಕಗಳು, ವಯೋವೃದ್ಧರಸೇವೆಗಳು, ಜೆರಿಯಾಟ್ರಿಕ್ ಘಟಕಗಳು, ಹಸುರು ಕ್ರಿಯಾ ಸೇನೆ ಇತ್ಯಾದಿ ಚಟುವಟಿಕೆಗಳು ಯಶಸ್ವಿಯಾಗಿ ನಡೆದುಬರುತ್ತಿವೆ. ಕುಟುಂಬಶ್ರೀ ಸ್ತ್ರೀ ಸುರಕ್ಷೆ ಭೀಮಾಯೋಜನೆ-ನೆರೆಕೂಟ ಮಹಿಳೆಯರಿಗೆ ವಿಮಾ ಯೋಜನೆಯಲ್ಲಿ 11544 ಸದಸ್ಯರನ್ನು ನೂತನವಾಗಿ ಅಳವಡಿಸಲಾಗಿದೆ.
ಶೇ 95.5 ಮೊಬಲಗನ್ನು ವೆಚ್ಚಗೊಳಿಸಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿ ನಿಲ್ಲಲುಕಾಸರಗೋಡು ಮಿಷನ್ ಗೆ ಸಾಧ್ಯವಾಗಿದೆ.