ಕಾಸರಗೋಡು: ಅಭಿವೃದ್ಧಿ ಸಾಧ್ಯತೆಗಳ ಕುರಿತು ಮಾತುಕತೆ ನಡೆಸುವ ಮೂಲಕ ಸ್ಟಾರ್ಟ್ ಅಪ್‍ನ ಬ್ರೇಕ್ ಫಾಸ್ಟ್ ಒಕ್ಕೂಟ ಜಿಲ್ಲೆಯ ಉದ್ದಿಮೆರಂಗದ ಉತ್ಸಾಹ ಹೆಚ್ಚಿಸಿದೆ.
ಕೇರಳ ಸ್ಟಾರ್ಟ್ ಅಪ್ ಮಿಷನ್ ಜಿಲ್ಲೆಯ ಉದ್ದಿಮೆದಾರರು ಮತ್ತು ಉದ್ದಿಮೆ ಒಕ್ಕೂಟಗಳ ಪ್ರತಿನಿಧಿಗಳಿಗಾಗಿ ಕಾಸರಗೋಡು ಸಿ.ಪಿ.ಸಿ.ಆರ್.ಐ.ಯಲ್ಲಿ ನಡೆಸಿದ ಬ್ರೇಕಾಸ್ಟ್ ಒಕ್ಕೂಟ ಕಾರ್ಯಕ್ರಮ ಸಕಾರಾತ್ಮಕ ಫಲ ಕಂಡಿದೆ.
ಕೇರಳ ಸ್ಟಾರ್ಟ್ ಅಪ್ ಮಿಷನ್, ಸಿ.ಪಿ.ಸಿ.ಆರ್.ಐ., ನೋರ್ತ್ ಮಲಬಾರ್ ಚೇಂಬರ್ ಆಫ್ ಕಾಮರ್ಸ್ ಜಂಟಿ ವತಿಯಿಂದ ಈ ಕಾರ್ಯಕ್ರಮ ಜರಗಿತು. ಸಮಾರಂಭ ಅಂಗವಾಗಿ `ಸಾಮಾಜಿಕ ಸ್ಟಾರ್ಟ್ ಅಪ್ ಗಳು, ಅವಕಾಶಗಳು ಮತ್ತು ಸ್ಪರ್ಧೆಗಳು' ಎಂಬ ವಿಷಯದಲ್ಲಿ ವಿಚಾರಸಂಕಿರಣ ಜರಗಿತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನೇತೃತ್ವ ವಹಿಸಿದ್ದರು. ಜಿಲ್ಲೆಯ ತ್ಯಾಜ್ಯ ಪರಿಷ್ಕರಣೆಗೆ ಇಂದೋರ್ ಮಾದರಿ ಪರಿಹಾರ ಯೋಜನೆ ಜಾರಿಗೊಳಿಸುವ ಕುರಿತು ಚರ್ಚಿಸಲಾಯಿತು. ತ್ಯಾಜ್ಯವನ್ನು ಬಯೋಗ್ಯಾಸ್ ಆಗಿ ಪರಿವರ್ತಿಸುವ ಯೋಜನೆ ಇದಾಗಿದೆ. ಕಾಸರಗೋಡು ಕೆಫೆ, ಐ.ಟಿ.ಪಾರ್ಕ್ ಗಳು, ಸಪ್ತಬಾಷಾ ಎಫ್.ಎಂ.ಸ್ಟೇಷನ್, ಬ್ಯಾಂಬೂ ಪಾರ್ಕ್‍ಗಳು ಇತ್ಯಾದಿ ಜಿಲ್ಲಾಡಳಿತೆಯ ನೇತೃತ್ವದಲ್ಲಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಈ ವೇಳೆ ತಿಳಿಸಿದರು.
ತಿಂಗಳಿಗೊಮ್ಮೆ ಬ್ರೇಕ್ ಫಾಸ್ಟ್ ಒಕ್ಕೂಟ ನಡೆಸಲು ನಿರ್ಧರಿಸಲಾಗಿದೆ. ಹಿರಿಯ ಉದ್ಯಮಿ ನಾಗರಾಜ್ ಪ್ರಕಾಶ್, ಸ್ಟಾರ್ಟ್ ಅಪ್ ಮಿಷನ್ ಯೋಜನೆ ಸಂಚಾಲಕ ಸಯ್ಯದ್ ಸವಾದ್, ಮಲಬಾರ್ ಇನ್ನೋವೇಶನ್ ಎಂ.ಡಿ.ಸುಭಾಷ್ ಬಾಬು, ಸಿ.ಪಿ.ಸಿ.ಆರ್.ಐ.ನಿರ್ದೇಶಕಿ ಡಾ.ಅನಿತಾ, ಡಾ.ಮುರಳಿ, ಶ್ರೀಧರನ್, ಎನ್.ಎ.ಅಬೂಬಕ್ಕರ್, ನೋರ್ತ್ ಮಲಬಾರ್ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಸಂಚಾಲಕ ಎ.ಕೆ.ಶ್ಯಾಮಪ್ರಸಾದ್, ಕಾರ್ಯದರ್ಶಿ ಮಹಮ್ಮದ್ ಆಲಿ ಫತಾಹ್, ಕೆ.ಸಿ.ಡಿ.ಎ.ನಿರ್ದೇಶಕ ಡಾ.ನಿಝಾಂ ಫಲಾಹ್, ಕಾಸರಗೋಡಿನ್ ಒರಿಡಂ ಸಂಘಟನೆಯ ಪ್ರತಿನಿಧಿ ಝುಬಿರ್ ಜೋಸ್, ಸಿ.ಪಿ.ಸಿ.ಆರ್.ಐ.ವ್ಯಾಪಾರ ಪ್ರಬಂಧಕ ಅಲೋಕ್ ನಾಥ್, ಸ್ಟಾರ್ಟ್ ಅಪ್ ಸ್ಥಾಪಕರು, ಉದ್ಯಮಿಗಳು ಉಪಸ್ಥಿತರಿದ್ದರು.