ರಾಜ್ಯಮಟ್ಟದ ಭಜನಾ ಸಂಕೀರ್ತನಾ ಸ್ಪರ್ಧೆ : ಗುಡ್ಡೆ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಸಂಘ ಪ್ರಥಮ
0
ಫೆಬ್ರವರಿ 07, 2019
ಕಾಸರಗೋಡು: ಮೈಸೂರಿನ ಶ್ರೀ ಮದ್ ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಮೈಸೂರಿನ ಸುತ್ತೂರು ಮಠದಲ್ಲಿ ನಡೆದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಕೂಡ್ಲು ಗುಡ್ಡೆ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಸಂಘ ಪ್ರಥಮ ಬಹುಮಾನ ಪಡೆದಿದೆ.
ಈ ತಂಡದ ಸದಸ್ಯರು ಕಾಸರಗೋಡು ಜಿಲ್ಲೆಯ ಗುರು ಸಾರ್ವಭೌಮ ದಾಸ ಸಾಹಿತ್ಯ ಪೆÇ್ರಜೆಕ್ಟ್ ಮಂತ್ರಾಲಯದ ಸಂಚಾಲಕಿ ಕುಂಬಳೆ ಕೃಷ್ಣನಗರದ ಪ್ರೇಮಲತಾ ಗೋಕುಲ್‍ದಾಸ್ ಅವರ ಶಿಷ್ಯರಾಗಿದ್ದಾರೆ.
ಪ್ರೇಮಲತಾ ಗೋಕುಲ್‍ದಾಸ್ ಅವರ ಮಾರ್ಗದರ್ಶನದ ಪೆರುವಾಡ ಸೋಮನಾಥ ಮಹಿಳಾ ಭಜನಾ ತಂಡ ದ್ವಿತೀಯ ಸ್ಥಾನವನ್ನು ಪಡೆದಿದೆ.
ಭಜನಾ ಸ್ಪರ್ಧೆಯಲ್ಲಿ 84 ತಂಡಗಳು ಭಾಗವಹಿಸಿತ್ತು. ಕಾಸರಗೋಡು ಜಿಲ್ಲೆಯಿಂದ 15 ತಂಡಗಳು ಭಾಗವಹಿಸಿತ್ತು.