ಬದಿಯಡ್ಕ ಶ್ರೀನಿಧಿ ಕ್ಲಿನಿಕ್ ನಲ್ಲಿ ಉಚಿತ ಇಸಿಜಿ ಸೌಲಭ್ಯ ಆರಂಭ
0
ಫೆಬ್ರವರಿ 28, 2019
ಬದಿಯಡ್ಕ: ಬದಿಯಡ್ಕದ ಖ್ಯಾತ ವೈದ್ಯರಾದ ಡಾ.ಶ್ರೀನಿಧಿ ಸರಳಾಯ ಅವರ ಶ್ರೀನಿಧಿ ಕ್ಲಿನಿಕ್ ನಲ್ಲಿ ಹೃದಯದ ತೊಂದರೆ ಇರುವ ಜನಸಾಮಾನ್ಯರ ಆರೋಗ್ಯ ಸಂರಕ್ಷಣೆಗಾಗಿ ಉಚಿತ ಇಸಿಜಿ ಸೇವೆಯನ್ನು ಆರಂಭಿಸಲಾಗಿದೆ.
ಮಂಗಳೂರು ಕೆಎಂಸಿ ಆಸ್ಪತ್ರೆಯ ಹಿರಿಯ ಹೃದಯ ತಜ್ಞ ಡಾ.ಪದ್ಮನಾಭ ಕಾಮತ್ ಅವರು ಉಚಿತ ಇಸಿಜಿ ಯಂತ್ರವನ್ನು ಕೊಡಮಾಡಿದ್ದು, ಅವರು ಇತ್ತೀಚೆಗೆ ಶ್ರೀನಿಧಿ ಕ್ಲಿನಿಕ್ ನಲ್ಲಿ ಯಂತ್ರವನ್ನು ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಡಾ.ಶ್ರೀನಿಧಿ ಸರಳಾಯ ಅವರು, ಬಡ ಜನರಿಗೆ ಹೃದಯ ಸಂಬಂಧಿ ಅಸೌಖ್ಯಗಳ ಪತ್ತೆ-ಚಿಕಿತ್ಸೆಗಳಿಗೆ ಆರ್ಥಿಕ ಹೊರೆ ಬಾಧಿಸಬಾರದೆಂಬ ಆಶಯದೊಂದಿಗೆ ಇಂತಹ ಉಚಿತ ವ್ಯವಸ್ಥೆಗೆ ರೂಪುನೀಡಲಾಗಿದೆ. ಡಾ.ಕಾಮತ್ ಅವರ ಸಹೃದಯತೆಯಿಂದ ಕೊಡಮಾಡಲ್ಪಟ್ಟ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸುವ ಮೂಲಕ ಅಭಿನಂದಿಸಬೇಕು ಎಂದು ತಿಳಿಸಿದರು.ಮುಂದಿನ ದಿನಗಳಲ್ಲಿ ಇನ್ನಷ್ಟು ವೈದ್ಯಕೀಯ ನೆರವಿಗೆ ಪ್ರಯತ್ನಿಸಲಾಗುವುದೆಂದು ಅವರು ಈ ಸಂದರ್ಭ ತಿಳಿಸಿದರು. ಆಸ್ಪತ್ರೆಯ ಸಿಬ್ಬಂದಿಗಳು, ಸ್ಥಳೀಯರು ಉಪಸ್ಥಿತರಿದ್ದರು.