ಮುಳ್ಳೇರಿಯ: ಮುಳಿಯಾರು ಸಮೀಪದ ಕೊಡವಂಜಿ ಶ್ರೀ ಪುಳ್ಳಿಕರಿಂಗಾಳಿ ಭಗವತೀ ಕ್ಷೇತ್ರದ ಕಳಿಯಾಟ ಮಹೋತ್ಸವ ಆರಂಭಗೊಂಡಿದ್ದು ಫೆ.5ರ ತನಕ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಆನೆಚಪ್ಪರ ಏರಿಸಲಾಯಿತು. ಕರಿಂದಿರಿ ನಾಯರ್ ದೈವದ ವೆಳ್ಳಾಟ, ಪುಲಿಕಂಡನ್ ದೈವದ ವೆಳ್ಳಾಟ, ಅಮ್ಮಂಗೋಡು ಶ್ರೀ ಶಬರೀನಾಥ ಸೇವಾಸಂಘದಿಂದ ಹೊರೆಕಾಣಿಕೆ, ಪುದಿಚ್ಚಾನ್ ದೈವದ ಸ್ತೋತ್ರ, ಪುಲ್ಲೂರಾಳಿ ಸ್ತೋತ್ರ, ವಿಷ್ಣುಮೂರ್ತಿ ದೈವದ ಕುಳಿಚ್ಚಾಟ, ಪುದಿಚ್ಚಾನ್ ದೈವ, ಕರಿಂದಿರಿ ನಾಯರ್ ದೈವ ನಡೆಯಿತು.
ಫೆ.4ರಂದು ಬೆಳಿಗ್ಗೆ 9ಕ್ಕೆ ಕಾಳಪುಲಿಯನ್ ದೈವ, 10.30ಕ್ಕೆ ಪುಲಿಕಂಡನ್ ದೈವದ ಮುಳಿಯಾರು ಕ್ಷೇತ್ರಕ್ಕೆ ಭೇಟಿ, ಮಧ್ಯಾಹ್ನ 12ಕ್ಕೆ ಪುಲ್ಲೂರ್ಣನ್, 2ಕ್ಕೆ ದೈವ ವಿಷ್ಣುಮೂರ್ತಿ ದೈವ, ಸಂಜೆ 4ಕ್ಕೆ ಪುಲ್ಲೂರಾಳಿ ದೈವ, ರಾತ್ರಿ 11ಕ್ಕೆ ಪುಲಿಕಂಡನ್ ದೈವದ ವೆಳ್ಳಾಟ, 12ಕ್ಕೆ ಕಾಳಪುಲಿಯನ್ ದೈವದ ವೆಳ್ಳಾಟ, 1ಕ್ಕೆ ಪುಲ್ಲೂರ್ಣನ್ ದೈವದ ವೆಳ್ಳಾಟ, ಮರುದಿನ 3ಕ್ಕೆ ವಿಷ್ಣುಮೂರ್ತಿ ದೈವದ ಕುಳಿಚ್ಚಾಟ ನಡೆಯಲಿದೆ.
ಫೆ.5ರಂದು ಬೆಳಿಗ್ಗೆ 10ಕ್ಕೆ ಕಾಳಪುಲಿಯನ್ ದೈವ, 12ಕ್ಕೆ ಪುಲಿಕಂಡನ್ ದೈವ, ಮಧ್ಯಾಹ್ನ 1ರಿಂದ ಪುಲ್ಲೂರಾಳಿ ದೈವ, ಸಂಜೆ 4ರಿಂದ ವಿಷ್ಣುಮೂರ್ತಿ ದೈವ, 5ರಿಂದ ಪುಲಿಕಂಡನ್ ದೈವ, ಸಂಜೆ 6ರಿಂದ ವಿಷ್ಣುಮೂರ್ತಿ, ಪುಲಿಕಂಡನ್ ದೈವಗಳು, ಮುಳಿಯಾರು ಕ್ಷೇತ್ರ ಭೇಟಿ ನಡೆಯಲಿದೆ.