ಸೀಮಿತ ಓವರ್‍ಗಳ ಕ್ರಿಕೆಟ್ ಪಂದ್ಯಾಟ
0
ಫೆಬ್ರವರಿ 26, 2019
ಕಾಸರಗೋಡು: ಜೆ.ಪಿ.ನಗರ ಫ್ರೆಂಡ್ಸ್‍ನ ಆಶ್ರಯದಲ್ಲಿ ಬಿ.ಟಿ.ವಿಜಯನ್ ಸ್ಮರಣಾರ್ಥ ಜರಗಿದ ಸೀಮಿತ ಓವರ್‍ಗಳ ಕ್ರಿಕೆಟ್ ಪಂದ್ಯಾಟವನ್ನು ಅಶೋಕನಗರ ಮೈದಾನದಲ್ಲಿ ನ್ಯಾಯವಾದಿ, ಮಲ್ಲಿಕಾರ್ಜುನ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಪಿ.ಮುರಳೀಧರ್ ಉದ್ಘಾಟಿಸಿದರು.
ಧಾರ್ಮಿಕ, ಸಾಂಸ್ಕøತಿಕ ಮುಂದಾಳು ಸಿ.ವಿ.ಪೆÇದುವಾಳ್ ಶುಭಹಾರೈಸಿದರು. ಅತಿಥಿಯಾಗಿ ಅಶೋಕನಗರ ಫ್ರೆಂಡ್ಸ್‍ನ ಅಧ್ಯಕ್ಷ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಪಂದ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದ ಎಸ್‍ಎಸ್‍ಸಿ ವಾರಿಯರ್ಸ್ ಅಣಂಗೂರು ತಂಡ ಹಾಗೂ ದ್ವಿತೀಯ ಸ್ಥಾನ ಪಡೆದ ಅಶೋಕ್ ಬ್ಲಾಸ್ಟರ್ಸ್ ಅಶೋಕನಗರ ಇವರಿಗೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ರಮೇಶ್ ನಗದು ಮತ್ತು ಪ್ರಶಸ್ತಿಯನ್ನು ನೀಡಿದರು.
ಕಾರ್ಯಕ್ರಮವನ್ನು ಜೆ.ಪಿ.ನಗರ ಫ್ರೆಂಡ್ಸ್‍ನ ಕಾರ್ಯದರ್ಶಿ ತಾರಾನಾಥ ಶೆಟ್ಟಿ ನಿರೂಪಿಸಿದರು. ಕೋಶಾಧಿಕಾರಿ ನಾಗೇಶ ವಂದಿಸಿದರು.