ಕೊಂಡೆವೂರಿನ ರಥಯಾತ್ರೆಗೆ ಪ್ರತಾಪನಗರದಲ್ಲಿ ಸ್ವಾಗತ
0
ಫೆಬ್ರವರಿ 05, 2019
ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಫೆ. 18ರಿಂದ 24ರತನಕ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ಪೂರ್ವಭಾವಿಯಾಗಿ ನಡೆಯುತ್ತಿರುವ ಶ್ರೀವಿಷ್ಣು ಸಹಸ್ರ ನಾಮ ಪಾರಾಯಣ ಅಭಿಯಾನದ ರಥಯಾತ್ರೆ ಶ್ರೀ ಮಹಾವಿಷ್ಣು ದೇವರ ವಿಗ್ರಹದೊಂದಿಗೆ ಸೋಮವಾರ ಸಂಜೆ ಪ್ರತಾಪನಗರದ ಶ್ರೀ ಗೌರೀ ಗಣೇಶ ಭಜನಾ ಮಂದಿರಕ್ಕೆ ಅಗಮಿಸಿತು.
ರಥಯಾತ್ರೆಗೆ ಅದ್ದೂರಿಯಾಗಿ ಸ್ವಾಗತವನ್ನು ನೀಡಲಾಯಿತು. ಸ್ಥಳೀಯ ಶ್ರೀ ಗೌರೀ ಗಣೇಶ ಮಹಿಳಾ ಭಜನಾ ಮಂಡಳಿ, ಪ್ರಣವ್ ಮಾತೃ ಭಜನಾ ಸಂಘ, ಶ್ರೀ ಲಕ್ಷ್ಮೀ ಭಜನಾ ಮಂಡಳಿ, ಶ್ರೀ ಗಾಯತ್ರಿ ಭಜನಾ ಸಂಘ ಇವರಿಂದ ಭಜನ್ ನಡೆಯಿತು. ಬಳಿಕ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಪೂಜೆ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರಿಂದ ಸತ್ಸಂಗ ನಡೆಯಿತು. ಯಾಗದ ಪ್ರಚಾರ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಸ್ಮರಣ ಸಂಚಿಕೆಯ ಪ್ರಮುಖರಾದ ದೇವದಾಸ ಮೇನಾಲ, ಶ್ರೀ ವಿಷ್ಣು ಸಹಸ್ರನಾಮ ಅಭಿಯಾನ ಸಮಿತಿ ಅಧ್ಯಕ್ಷ ಹರೀಶ ಶೆಟ್ಟಿ ಮಾಡ, ಪ್ರಮುಖರಾದ ಹರ್ಷ, ಯಾದವ ಬಡಾಜೆ ಉಪಸ್ಥಿತರಿದ್ದರು. ಶ್ರೀ ಗೌರೀ ಗಣೇಶ ಭಜನಾ ಮಂದಿರದ ಪದಾಧಿಕಾರಿಗಳಾದ ಪುರುಷೋತ್ತಮ ಸ್ವಾಗತಿಸಿ, ವಸಂತ ಕುಮಾರ್ ಮಯ್ಯ ವಂದಿಸಿದರು. ಮಂದಿರದ ಪದಾಧಿಕಾರಿಗಳು, ಕಾರ್ಯಕರ್ತರು, ಮಾತೆಯರ ಸಹಿತ ನೂರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.