ಮಂಜೇಶ್ವರ: ತೂಮಿನಾಡು ಅರನ್ ರೈಡರ್ಸ್ ತಂಡ ಹಾಗೂ ಯೆನೆಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಇದರ ಸಹಯೋಗದೊಂದಿಗೆ ಭಾನುವಾರ ಬೃಹತ್ ರಕ್ತದಾನ ಶಿಬಿರ ನಡೆಯಿತು.
ತೂಮಿನಾಡು ಸಿರಾಜುಲ್ ಇಸ್ಲಾಂ ಮದ್ರಸಾದಲ್ಲಿ ನಡೆದ ಶಿಬಿರವನ್ನು ಮಂಜೇಶ್ವರ ಬ್ಲಾ.ಪಂ ಅಧ್ಯಕ್ಷ ಎ.ಕೆ.ಎಂ ಅಶ್ರಫ್ ಉದ್ಘಾಟಿಸಿದರು. ಅರಬ್ ರೈಡರ್ಸ್ ಕ್ಲಬ್ ಅಧ್ಯಕ್ಷ ಯಯ್ಯಾ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ.ಜಯಪಾಲ ಶೆಟ್ಟಿ, ಖಾದರ್.ಎ, ಬ್ಲಾ.ಪಂ ಸ್ಥಾಯೀ ಸಮಿತಿ ಅಧ್ಯಕ್ಷ ಮುಸ್ತಫಾ ಉದ್ಯಾವರ, ಆಲ್ ಫತಾ ಜುಮಾ ಮಸೀದಿ ಅಧ್ಯಕ್ಷ ಮೊಹಮ್ಮದ್ ಹನೀಫ, ಮಸೀದಿ ಖತೀಬ್ ಅಬ್ದುಲ್ ರಹ್ಮಾನ್ ಹರ್ಶಿದಿ ಇದ್ದರು. ಕ್ಲಬ್ ಕಾರ್ಯದರ್ಶಿ ಸಿದ್ದೀಖ್ ತಂಞಳ್ ಸ್ವಾಗತಿಸಿ, ರಜಾಕ್ ಎಂ.ಬಿ ವಂದಿಸಿದರು. ಕ್ಲಬ್ ಅಧ್ಯಕ್ಷ ಯಯ್ಯಾ ಸ್ವತಃ ಮೊದಲಿಗರಾಗಿ ರಕ್ತದಾನಕ್ಕೆ ಚಾಲನೆ ನೀಡಿದರು. ಹಲವು ಮಂದಿ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು.