ನೀರೋಳಿಕೆ ಬಾಲಿಕಾಶ್ರಮ ಭೇಟಿಯೊಂದಿಗೆ ವಿಶ್ವಕರ್ಮ ಸಮಾಜ ದರ್ಶನ ಯೋಜನೆಗೆ ಚಾಲನೆ
0
ಫೆಬ್ರವರಿ 25, 2019
ಮಂಜೇಶ್ವರ: ವಿಶ್ವಕರ್ಮ ಸಾಹಿತ್ಯ ದರ್ಶನ ಬಳಗದ ಯಶಶ್ವಿ ಮೂರನೇ ವರ್ಷಾಚಾರಣೆಯ ಅಂಗವಾಗಿ "ಸಮಾಜ ದರ್ಶನ" ಯೋಜನೆಯಂತೆ ವರ್ಕಾಡಿ ಗ್ರಾಮದ ನೀರೋಳಿಕೆ ಎಂಬಲ್ಲಿರುವ ಶ್ರೀಮಾತ ಸೇವಾ ಟ್ರಸ್ಟ್ ನ ಬಾಲಿಕಾಶ್ರಮವನ್ನು ಭಾನುವಾರ
ಸಂದರ್ಶಿಸಲಾಯಿತು.
ಬಡ ವರ್ಗಕ್ಕೆ ಸೇರಿದ ಮಕ್ಕಳು ಆಶ್ರಮದಲ್ಲಿದ್ದು ಸ್ಥಳೀಯ ಸರಕಾರಿ ಶಾಲೆಯ ಶಿಕ್ಷಣವನ್ನು ಆಶ್ರಯಿಸುವ ಇವರಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯ ಪ್ರಾಧಾನ್ಯತೆ ಎದ್ದು ಕಾಣುತ್ತಿದೆ. ಭಾರತೀಯ ಸಂಸ್ಕೃತಿಯ ಆಧಾರಿತ ನಿತ್ಯ ಚಟುವಟಿಕೆಗಳು ಇಲ್ಲಿನ ಗಮನಾರ್ಹ ವಿಷಯವಾಗಿದೆ. ಇದು ಮುಂದಿನ ಭಾರತದ ಭವಿಷ್ಯಕ್ಕೊಂದು ಉದಾತ್ತ ಕೊಡುಗೆಯಾಗಲಿ ಎಂದು ಹಾರೈಸಿ ಮುಂದಿನ ದಿನಗಳಲ್ಲಿ ವಿಶ್ವಕರ್ಮ ಸಾಹಿತ್ಯ ದರ್ಶನ ಬಳಗದ ಎಲ್ಲಾ ಸದಸ್ಯರು ಈ ಆಶ್ರಮಕ್ಕೆ ಭೇಟಿ ನೀಡುವುದಾಗಿ ಭರವಸೆಯಿತ್ತು ಸಿಹಿತಿಂಡಿ,ಪುಸ್ತಕ,ವಿಶ್ವದರ್ಶನ ಪುರವಣಿ,ನೆನಪಿನ ಕಾಣಿಕೆಗಳನ್ನು ಆಶ್ರಮದ ಮಕ್ಕಳಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಮಾತಾ ಸೇವಾಟ್ರಸ್ಟ್ ನ ಮುಖ್ಯಸ್ಥ ಯೋಗಾಚಾರ್ಯ ಪುಂಡರೀಕಾಕ್ಷ ಆಚಾರ್ಯ ಹಾಗೂ ಸಮಾಜ ಸೇವಕ ತುಳಸಿದಾಸ್ ಮಂಜೇಶ್ವರ, ವಿಶ್ವದರ್ಶನ ಸಮಿತಿ ಅಧ್ಯಕ್ಷ ಆಶೋಕ್ ಸಾನಗ,ಕಾರ್ಯದರ್ಶಿ ನಿರಂಜನ್ ಪುರೋಹಿತ್ ನೀರ್ಚಾಲು,ವಿಶ್ವಕರ್ಮ ಸಾಹಿತ್ಯ ದರ್ಶನದ ಸ್ಥಾಪಕ ಜಯ ಮಣಿಯಂಪಾರೆ, ನಿರ್ವಾಹಕ ಕಿರಣ್ ಶರ್ಮ ಮಧೂರು,ಪತ್ರಕರ್ತ ಸಂಘಟಕ ರತನ್ ಕುಮಾರ್ ಹೊಸಂಗಡಿ ಉಪಸ್ಥಿತರಿದ್ದರು.