ಉಲ್ಟಾ-ಫುಲ್ ಉಲ್ಟಾ ಹೊಡೆದ ಪಾಕ್- ಇಬ್ಬರಲ್ಲ, ಒಬ್ಬ ಐಎಎಫ್ ಪೈಲಟ್ ಮಾತ್ರ ನಮ್ಮ ವಶದಲ್ಲಿದ್ದಾರೆ-ಗೊಂದಲದ ಹೇಳಿಕೆ
0
ಫೆಬ್ರವರಿ 28, 2019
ಇಸ್ಲಾಮಾಬಾದ್: ಭಾರತೀಯ ವಾಯುಪಡೆಯ ಎರಡು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದು, ಇಬ್ಬರು ಪೈಲಟ್ ಗಳು ನಮ್ಮ ವಶದಲ್ಲಿದ್ದಾರೆ ಎಂದಿದ್ದ ಪಾಕಿಸ್ತಾನ ಈಗ ಉಲ್ಟಾ ಹೊಡೆದಿದ್ದು, ಇಬ್ಬರಲ್ಲ, ಒಬ್ಬರು ಐಎಎಫ್ ಪೈಲಟ್ ಮಾತ್ರ ನಮ್ಮ ವಶದಲ್ಲಿದ್ದಾರೆ ಎಂದು ಹೇಳಿದೆ.
ಇಬ್ಬರಲ್ಲಿ ಒಬ್ಬ ಐಎಎಫ್ ಪೈಲಟ್ ನನ್ನು ನಮ್ಮ ವಶಕ್ಕೆ ಪಡೆದಿದ್ದೇವೆ ಎಂದು ಪಾಕಿಸ್ತಾನ ಸೇನಾ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಅವರು ಸ್ಪಷ್ಟನೆ ನೀಡಿದ್ದಾರೆ.
ಭಾರತದ ವಿಂಗ್ ಕಮಾಂಡರ್ ಅಭಿನಂದನ್ ನಮ್ಮ ವಶದಲ್ಲಿದ್ದಾರೆ ಎಂದು ಅವರು ಟ್ವೀಟ್? ಮಾಡಿದ್ದಾರೆ. ಅಲ್ಲದೆ ಬದ್ಗಾಮ್ ನಲ್ಲಿ ಪತನಗೊಂಡ ವಿಮಾನಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಸುದ್ದಿಗೋಷ್ಠಿಯಲ್ಲಿ ಅವರು ಇಬ್ಬರು ಪೈಲಟ್ ಗಳನ್ನು ವಶಕ್ಕೆ ಪಡೆದಿದ್ದಾಗಿ ಹೇಳಿದ್ದರು.