ಕಿಳಿಂಗಾರು ಶಾಲೆಯಲ್ಲಿ ಕಲಿಕೋತ್ಸವ
0
ಫೆಬ್ರವರಿ 08, 2019
ಬದಿಯಡ್ಕ: ಕಿಳಿಗಾರು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕೋತ್ಸವ ಇತ್ತೀಚೆಗೆ ಜರಗಿತು. ಶಾಲಾ ವ್ಯವಸ್ಥಾಪಕರೂ, ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷರೂ ಆದ ಕೆ. ಎನ್. ಕೃಷ್ಣ ಭಟ್ ಕಲಿಕೋತ್ಸವವನ್ನು ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪದ್ಮನಾಭ ರೈ ಬಂಡ್ರಡ್ಕ ಅಧ್ಯಕ್ಷತೆ ವಹಿಸಿದ್ದರು. ಉದಯಗಿರಿ ಶಾಲಾ ಅಧ್ಯಾಪಕರಾದ ರಾಜೇಶ್ ಉಬ್ರಂಗಳ ಕಲಿಕೋತ್ಸವದ ಮಹತ್ವವನ್ನು ವಿವರಿಸಿದರು. ಶಾಲಾ ಮಾತೃಸಂಘದ ಅಧ್ಯಕ್ಷೆ ವಸಂತಿ ಬಂಡ್ರಡ್ಕ , ಅಧ್ಯಾಪಿಕೆ ಶ್ರೀವಿದ್ಯಾ, ಅಧ್ಯಾಪಕರಾದ ಪ್ರದೀಪ್ ಕುಮಾರ್ ಶೆಟ್ಟಿ ಶುಭಾಶಂಸನೆಗೈದರು. ಗಣಿತದ ಆಟ ಕೂಟ ಶಿಬಿರ ಹಾಗೂ ಶಾಲಾ ಮಕ್ಕಳಿಂದ ರಕ್ಷಕರೊಂದಿಗೆ ವಿವಿಧ ಪ್ರತಿಭಾ ಪ್ರದರ್ಶನ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯ ಕೆ. ರಾಮಕೃಷ್ಣ ಭಟ್ ಸ್ವಾಗತಿಸಿ, ಶಿಕ್ಷಕಿ ಮಧುಮತಿ ಕಂಬಾರು ವಂದಿಸಿದರು.