ವಿದ್ಯಾರ್ಥಿಗಳ ಭವಿತವ್ಯಕ್ಕೆ ಸಹಕಾರಿ ಕೆರಿಯರ್ ಗೈಡೆನ್ಸ್ ಸೆಲ್
0
ಫೆಬ್ರವರಿ 28, 2019
ಕಾಸರಗೋಡು: ಹತ್ತನೇ ತರಗತಿ ಕಲಿಕೆಯ ನಂತರ ಯಾವ ಶಿಕ್ಷಣವನ್ನು ಆರಿಸಿಕೊಳ್ಳಬೇಕು ಎಂಬ ವಿದ್ಯಾರ್ಥಿಗಳ ಸಂದೇಹ ಪರಿಹಾರಕ್ಕೆ ಜಿಲ್ಲಾ„ಕಾರಿ ಕಚೇರಿಯಲ್ಲಿ ಸೌಲಭ್ಯ ಏರ್ಪಡಿಸಲಾಗಿದೆ.
ವಿವಿಧ ರೀತಿಯ ತರಬೇತಿಗಳ ಕುರಿತು, ಸಂಸ್ಥೆಗಳ ಕುರಿತು ಮಾರ್ಗದರ್ಶನ, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗೈಡೆನ್ಸ್ ಸೆಲ್ ಆರಂಭಗೊಂಡಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ವಿಶೇಷ ಕಾಳಜಿಯ ಹಿನ್ನೆಲೆಯಲ್ಲಿ ಈ ಘಟಕವನ್ನು ಪ್ರಾರಂಭಿಸಲಾಗಿದ್ದು, ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಚಾಲನೆ ನೀಡಿದ್ದಾರೆ.
ರಾಜ್ಯ ಸರಕಾರ ಪೂರೈಸಿದ ಒಂದು ಸಾವಿರ ದಿನ ಅಂಗವಾಗಿ ನಡೆಯುತ್ತಿರುವ ಜಿಲ್ಲಾ ಮಟ್ಟದ ಸರಣಿ ಕಾರ್ಯಕ್ರಮಗಳ ಸಲುವಾಗಿ ಈ ಸಂಸ್ಥೆಗೆ ಚಾಲನೆ ಲಭಿಸಿದೆ. ಕೆರಿಯರ್ ಗೈಡೆನ್ಸ್ ವಲಯದಲ್ಲಿ ಪರಿಣತರಾದ ಜಿಲ್ಲೆಯ ವಿವಿಧ ಶಾಲೆಗಳ 26 ಮಂದಿಯನ್ನು ಈ ವಲಯಕ್ಕಾಗಿ ಆಯ್ಕೆ ಮಾಡಲಾಗಿದೆ. ಚಟುವಟಿಕೆಗಳ ದಿನಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 4 ಗಂಟೆ ವರೆಗೆ ಇವರ ಸೇವೆ ಲಭ್ಯವಿದೆ. ಜಿಲ್ಲೆಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ವಲಯದ ಕುರಿತು ಸೂಕ್ತ ಮಾರ್ಗದರ್ಶನ ಈ ಮೂಲಕ ಪಡೆಯಬಹುದಾಗಿದೆ.