ಕಾಸರಗೋಡು: ನೆಹರೂ ಯುವ ಕೇಂದ್ರದ ಆಶ್ರಯದಲ್ಲಿ ಜಿಲ್ಲೆಯ 15 ರಿಂದ 29 ರ ನಡುವಿನ ವಯೋಮಾನದವರಿಗಾಗಿ ನೇತೃತ್ವ ತರಬೇತಿ ಶಿಬಿರ ನಡೆಸಲಾಗುವುದು.
ಫೆ.16ರಿಂದ 18 ವರೆಗೆ ಪಡನ್ನ ಶರಫ್ ಆಟ್ರ್ಸ್ ಆ್ಯಂಡ್ ಸಯನ್ಸ್ ಕಾಲೇಜಿನಲ್ಲಿ ಶಿಬಿರ ಜರಗಲಿದೆ. ವಸತಿ, ಭೋಜನ ಉಚಿತ ವಾಗಿರುವುದು. ಆಸಕ್ತರು ಫೆ.12ರ ಮುಂಚಿತವಾಗಿ ಜಿಲ್ಲಾ ಯೂತ್ ಕೋರ್ಡಿನೇಟರ್, ನೆಹರೂ ಯುವಕೇಂದ್ರ, ಸಿವಿಲ್ ಸ್ಟೇಷನ್, ಕಾಸರಗೋಡು ಎಂಬ ವಿಳಾಸದಲ್ಲಿ ಹೆಸರು ನೋಂದಣಿ ನಡೆಸಬೇಕು. ಮಾಹಿತಿಗಾಗಿ ದೂರವಾಣಿ ಸಂಬ್ರ: 9539413261, 7025123383 ಸಂಪರ್ಕಿಸಬಹುದು.