ವೈದ್ಯಕೀಯ ಎಂ.ಡಿಯಲ್ಲಿ ಪ್ರಥಮ ರ್ಯಾಂಕ್
0
ಫೆಬ್ರವರಿ 08, 2019
ಬದಿಯಡ್ಕ: 2018 ನೇ ಸಾಲಿನ ರಾಜೀವ ಗಾಂಧಿ ವಿಶ್ವ ವಿದ್ಯಾಲಯ ನಡೆಸಿದ ಆಯುರ್ವೇದ ಎಂ.ಡಿ ಪರೀಕ್ಷೆಯ 'ರೋಗ ವಿಧಾನ' ವಿಭಾಗದಲ್ಲಿ ಡಾ. ವಿದುಷಿ ಶಾರದಾ ಸ್ಫೂರ್ತಿ .ವೈ ಅವರು ಪ್ರಥಮ ರ್ಯಾಂಕು ಗಳಿಸಿರುತ್ತಾರೆ. ಇವರು ಹಾಸನದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ವಿಧ್ಯಾರ್ಥಿನಿಯಾಗಿದ್ದು, ಪ್ರಸ್ತುತ ಪತಿ ಅಭಿಜ್ಞಾ ಕಶ್ಯಪ್, ಕೋಂಬ್ರಾಜೆ ಅವರೊಂದಿಗೆ ಬೆಂಗಳೂರಲ್ಲಿ ನೆಲೆಸಿರುವರು.ಇವರು ಖ್ಯಾತ ಪ್ರಗತಿ ಪರ ಕೃಷಿ ತಜ್ಞ ಚಂದ್ರಶೇಖರ್ ಏತಡ್ಕ ಹಾಗೂ ಡಾ.ಅನ್ನಪೂರ್ಣೇಶ್ವರಿ ದಂಪತಿಗಳ ಸುಪುತ್ರಿ. ಖ್ಯಾತ ಸಾಹಿತಿ ದಿ.ವಿಚಿತ್ರ ಏತಡ್ಕ ಹಾಗೂ ಕೀರಿಕ್ಕಾಡು ವನಮಾಲ ಕೇಶವ ಭಟ್ಟರ ಮೊಮ್ಮಗಳು.