ಕಾಸರಗೋಡು: ಅಕ್ರಮವಾಗಿ ಚಟುವಟಿಕೆ ನಡೆಸುತ್ತಿರುವ ಗೂಡಂಗಡಿಗಳ ವಿರುದ್ಧ ತಪಾಸಣೆ ನಡೆಸಿ ಕ್ರಮಕೈಗೊಳ್ಳುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ನಿನ್ನೆ ನಡೆದ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆ ಆದೇಶಿಸಿದೆ.
ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂಬಂಧ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಲಭಿಸಿದ ದೂರಿನಹಿನ್ನೆಲೆಯಲ್ಲಿ ಈ ಕುರಿತು ಕಳೆದ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಈ ಕುರಿತು ಆದೇಶ ನೀಡಿದ್ದರು. ಕಾಸರಗೋಡು,ಕಾ?ಂಗಾಡ್,ನೀಲೇಶ್ವರ ನಗರಸಭೆ ಕಾರ್ಯದರ್ಶಿಗಳು, ಲೋಕೋಪಯೋಗಿ ರಸ್ತೆ ಕಾರ್ಯಕಾರಿ ಇಂನಿಯರ್ ರು, ರಾಟ್ರೀಯ ಹೆದ್ದಾರಿ ವಿಭಾಗ ಕಾರ್ಯಕಾರಿ ಸಹಾಯಕ ಇಂಜಿನಿಯರ್ ರಿಗೆ ತೆರವುಗೊಳ್ಳದೇ ಉಳಿದಿರುವ ಗೂಡಂಗಡಿಗಳನ್ನು ತಕ್ಷಣ ತೆರವುಗೊಳಿಸುವಂತೆ ಸಭೆಯಲ್ಲಿ ಆದೇಶ ನೀಡಲಾಗಿದೆ.