ಸಂಕಷ್ಟದಲ್ಲಿರುವ ಕಾವ್ಯಾಳಿಗೆ ನೆರವಾಗಲು ಮನವಿ
0
ಫೆಬ್ರವರಿ 04, 2019
ಮುಳ್ಳೇರಿಯ: ಬೋವಿಕ್ಕಾನ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6 ನೇ ತರಗತಿಯಲ್ಲಿ ಕಲಿಯುತ್ತಿರುವ ಕಾವ್ಯ ಎಂಬ ವಿದ್ಯಾರ್ಥಿನಿಯು ಸುಮಾರು 8 ವರ್ಷಗಳಿಂದ ಕಿಡ್ನಿಯ ಸಮಸ್ಯೆಯಿಂದ ಬಳಲುತ್ತಿದ್ದು ವಿದ್ಯಾಭ್ಯಾಸವನ್ನು ಮುಂದುವರಿಸಲು ಅಸಾಧ್ಯವಾದ ಸ್ಥಿತಿಯಲ್ಲಿದ್ದಾಳೆ. ಆರ್ಥಿಕವಾಗಿ ಬಹಳ ಹಿಂದಿರುವ ಬಡ ಕುಟುಂಬದ ಏಕ ಮಗಳಾಗಿದ್ದಾಳೆ ಕಾವ್ಯ. ತಾಯಿ ಸುಮಿತ್ರಾ ಇವರ ಆಶ್ರಯದಿಂದ ಮಾತ್ರ ಜೀವನ ಸಾಗಿಸಲು ಕಷ್ಟವಾಗುತ್ತಿರುವ ಈ ಕುಟುಂಬಕ್ಕೆ ಮಗಳ ಚಿಕಿತ್ಸಾ ವೆಚ್ಚ ಭರಿಸಲು ಅಸಾಧ್ಯವಾಗುತ್ತಿದೆ. ಸಾಮಾನ್ಯ ತಿಂಗಳಿಗೆ ಐದುಸಾವಿರ ಚಿಕಿತ್ಸಾ ವೆಚ್ಚ ತಗಲುವ ಇವಳಿಗೆ ಮುಂದಿನ ಚಿಕಿತ್ಸಾ ಸಹಾಯಕ್ಕಾಗಿ ಪಂಚಾಯತು ಮಟ್ಟದಲ್ಲಿ ಸಮಿತಿ ರೂಪೀಕರಿಸಿ ದಾನಿಗಳ ಸಹಾಯವನ್ನು ಯಾಚಿಸಲಾಗಿದೆ. ಸಹಾಯಹಸ್ತ ನೀಡುವುದು ಪುಣ್ಯಕೆಲಸ ಎಂದೇ ಭಾವಿಸಿ ಕೈಲಾದ ಸಹಾಯವನ್ನು ನೀಡಿ ಮಗುವನ್ನು ರಕ್ಷಿಸುವಲ್ಲಿ ಸಹೃದಯರು ಕೈಜೋಡಿಸಬೇಕಾಗಿ ವಿನಂತಿಸಿಕೊಳ್ಳಲಾಗಿದೆ.
ದಾನಿಗಳು ಮನೆ ವಿಳಾಸ-ಸುಮಿತ್ರಾ, ಕೋಳ0ಗೋಡು ಮನೆ, ಅಂಚೆ ಮಲ್ಲ. ವಯಾ ಮುಳಿಯಾರು. ಬ್ಯಾಂಕ್ ಖಾತೆ ವಿವರ: ಕಾವ್ಯಾ ಟ್ರೀಟ್‍ಮೆಂಟ್ ಅಸಿಸ್ಟೆನ್ಸ್ ಕಮಿಟಿ ಬೋವಿಕ್ಕಾನ. ಮುಳ್ಳೇರಿಯ. ಕಾರ್ಪೋರೇಶನ್ ಬ್ಯಾಂಕ್. ಖಾತೆ ಸಂಖ್ಯೆ 520101258487339. ಐಎಫ್‍ಎಸ್‍ಸಿ ಸಂಖ್ಯೆ ಸಿಓಆರ್‍ಪಿ0000169 ಸಂಖ್ಯೆಗೆ ನೆರವು ನೀಡಬಹುದು. ಅಥವಾ ಚೇಮ್ರ್ಯಾನ್. ಖಾದರ್ ಬೆಳ್ಳಿಪ್ಪಾಡಿ. ಅಧ್ಯಕ್ಷರು, ಮುಳಿಯಾರು ಗ್ರಾಮ ಪಂಚಾಯತಿ ಮತ್ತು ಸಂಚಾಲಕರು, ವಿಮಲಾ ಕೆ ಐ, ಮುಖ್ಯೋಪಾಧ್ಯಾಯಿನಿ, ಎ.ಯು.ಪಿ.ಶಾಲೆ ಬೋವಿಕ್ಕಾನ ಅವರನ್ನು ಸಂಪರ್ಕಿಸಬಹುದೆಂದು ತಿಳಿಸಲಾಗಿದೆ.