HEALTH TIPS

ಇಲ್ಲಿದೆ ಕೇಂದ್ರ ಬಜೆಟ್ ಮುಖ್ಯಾಂಶ

   
    : 'ಇದು ಮಧ್ಯಂತರ ಬಜೆಟ್ ಅಲ್ಲ, ಇದು ದೇಶದ ಅಭಿವೃದ್ಧಿ ರೂಪಾಂತರದ ವಾಹಕ' ಎಂದು ಹೇಳುವ ಮೂಲಕ ಒಂದು ಗಂಟೆ 45 ನಿಮಿಷಗಳಲ್ಲಿ ಬಜೆಟ್ ಮಂಡನೆ ಮುಕ್ತಾಯಗೊಳಿಸಿದ ವಿತ್ತ ಸಚಿವ ಪಿಯೂಶ್ ಗೋಯಲ್.
   : ಮುಂದಿನ ವರ್ಷದ ವಿತ್ತೀಯ ಕೊರತೆ ಅಂದಾಜು ಶೇ 3.4 ಎಂದು ಪ್ರಕಟಿಸಿದ ಗೋಯಲ್
: ಬಂಡವಾಳ ವೆಚ್ಚ- 3,36,292 ಲಕ್ಷ ಕೋಟಿ ರೂ: ಗೋಯಲ್
: ಮೇಕ್ ಇನ್ ಇಂಡಿಯಾ ಉಪಕ್ರಮದಡಿ ಆಧುನಿಕ ಉದ್ಯಮ ತಂತ್ರ????ನಗಳನ್ನು ಬಳಸಿಕೊಂಡು ಗ್ರಾಮೀಣ ಔದ್ಯಮೀಕರಣದ ಗುರಿ ವಿಸ್ತರಣೆ: ಗೋಯಲ್
: 2019ನೇ ಸಾಲಿನ ಬಜೆಟ್ ಮಂಡನೆ ಮುಕ್ತಾಯಗೊಳಿಸಿದ ಪಿಯೂಶ್ ಗೋಯಲ್, ಸಂಸತ್ ಅಧಿವೇಶನ ಸೋಮವಾರಕ್ಕೆ ಮುಂದೂಡಿಕೆ
: ಬಜೆಟ್ ಮಂಡನೆ ಮುಕ್ತಾಯ
: ಸ್ಟಾಂಡರ್ಡ್ ಡಿಡಕ್ಷನ್ ರೂ40 ಸಾವಿರದಿಂದ ರೂ50 ಸಾವಿರಕ್ಕೆ ಹೆಚ್ಚಳ
: 2 ಲಕ್ಷದವರೆಗಿನ ಗೃಹ ಸಾಲಕ್ಕೆ ತೆರಿಗೆ ವಿನಾಯಿತಿ
: ರೂ 5 ಲಕ್ಷದ ವರೆಗೂ ಆದಾಯ ಹೊಂದಿರುವವರಿಗೆ ಯಾವುದೇ ತೆರಿಗೆ ಇಲ್ಲ; ಶೇ 5 ರಷ್ಟು ಇದ್ದ ತೆರಿಗೆಯನ್ನು ರದ್ದು ಗೊಳಿಸಿರುವುದಾಗಿ ಘೋಷಣೆ, ಮಧ್ಯಮ ವರ್ಗ ಸೇರಿದಂತೆ ಸುಮಾರು 3 ಕೋಟಿ ಜನರಿಗೆ ತೆರಿಗೆ ಇಲ್ಲ. ಪಿ.ಎಫ್ ಸೇರಿದಂತೆ ಹಲವು ಉಳಿತಾಯಗಳಲ್ಲಿ ಉಳಿಸುವುದು ಸೇರಿದಂತೆ ಒಟ್ಟು ?6.5 ಲಕ್ಷ ಆದಾಯದವರೆಗೂ ತೆರಿಗೆ ಬರುವುದಿಲ್ಲ
: ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ 40 ಸಾವಿರದಿಂದ 50 ಸಾವಿರಕ್ಕೆ ಏರಿಕೆ
: 40 ಸಾವಿರ ವರೆಗಿನ ಬಡ್ಡಿ ಆದಾಯಕ್ಕೆ ತೆರಿಗೆ ವಿನಾಯಿತಿ
: ವಿಶ್ವದಲ್ಲೇ ಭಾರತ ಎರಡನೇ ಬೆಸ್ಟ್ ಸ್ಟಾರ್ಟಪ್ ದೇಶವಾಗಿದೆ. ಕೆಲಸ ಹುಡುಕುವವರು ಕೆಲಸ ಸೃಷ್ಟಿಸುತ್ತಿದ್ದಾರೆ. ಸಣ್ಣ ಕೈಗಾರಿಕೆಗಳಿಗೆ ಶೇ.2 ರಷ್ಟು ಬಡ್ಡಿ ವಿನಾಯಿತಿ. ಸ್ವದೇಶಿ ವಸ್ತುಗಳ ವ್ಯಾಪಾರಕ್ಕೆ ಒತ್ತು.
12:37 ಠಿm : ಎಲ್ಲರಿಗೂ ಶುದ್ಧ ನೀರು ವಿತರಣೆ ಗುರಿ. ನದಿ ಸ್ವಚ್ಛತೆಗೆ ಒತ್ತು. ಮಾಲಿನ್ಯ ನಿಯಂತ್ರಣಕ್ಕೆ ಕ್ರಮ.
: ಸ್ವದೇಶಿ ನಿರ್ಮಿತ ಮೇಕ್ ಇನ್ ಇಂಡಿಯಾ ಅಡಿಯಲ್ಲಿ `ವಂದೇ ಮಾತರಂ’ ಸೆಮಿ ಹೈ ಸ್ಪೀಡ್ ರೈಲನ್ನು ನಿರ್ಮಿಸಲಾಗಿದೆ. ಭಾರತದ ಪ್ರಯಾಣಿಕರಿಗೆ ವಿಶ್ವದರ್ಜೆಯ ಗುಣಮಟ್ಟವನ್ನು ಈ ರೈಲು ನೀಡಲಿದೆ. ಮೇಘಾಲಯ, ತ್ರಿಪುರಾಗಳಿಗೆ ರೈಲು ಸಂಪರ್ಕ ಕಲ್ಪಿಸಿದ್ದೇವೆ.
: 3 ಕೋಟಿ ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲ
: ಕಪ್ಪು ಹಣ ಮುಕ್ತ ದೇಶವನ್ನಾಗಿ ಮಾಡಲು ಸರ್ಕಾರ ಕ್ರಮ. ನಕಲಿ ಕಂಪನಿಗಳ ಬಿಸಿ ಮುಟ್ಟಿಸಿದ್ದೇವೆ. ಕಪ್ಪು ಹಣ ನಿಯಂತ್ರಣಕ್ಕೆ ಕಾನೂನು ತಂದಿದ್ದೇವೆ. 24 ಗಂಟೆಯಲ್ಲಿ ಟಿಡಿಎಸ್ ಪಾವತಿ ಕ್ರಮ.
: ಒಟ್ಟಾರೆ 6.5 ಲಕ್ಷ ರೂವರೆಗೆ ಯಾವುದೇ ಆದಾಯ ತೆರಿಗೆ ಇಲ್ಲ
ಠಿm : ಆದಾಯ ತೆರಿಗೆ ಪಾವತಿಯನ್ನು 24 ಗಂಟೆಯ ಒಳಗೆ ಪರಿಶೀಲಿಸಿ, ಪ್ರತಿಕ್ರಿಯಿಸುವ ವ್ಯವಸ್ಥೆ ಜಾರಿ ಮಾಡಲಾಗುವುದು. ಇನ್ನು ಎರಡು ವರ್ಷಗಳಲ್ಲಿ ಆದಾಯ ತೆರಿಗೆಯ ಅಂದಾಜು ಮತ್ತು ಪಾವತಿ ಸಂಪೂರ್ಣ ಕಂಪ್ಯೂಟರೀಕರಣಗೊಳ್ಳಲಿದೆ.
: ಆದಾಯ ತೆರಿಗೆ ಪಾವತಿದಾರರಿಗೆ ಬಿಗ್ ರಿಲೀಫ್; ತೆರಿಗೆ ಮಿತಿ 2.5 ರಿಂದ 5 ಲಕ್ಷಕ್ಕೆ ಏರಿಕೆ; ಉಳಿತಾಯ ಯೋಜನೆಗಳ ಮೇಲೆ ಒಂದೂ ವರೆ ಲಕ್ಷದವರೆಗೆ ಹೂಡಿಕೆಗೆ ಅವಕಾಶ
: ದೇಶದಲ್ಲೀಗ ಕಾವಲು ರಹಿತ ಲೆವೆಲ್ ಕ್ರಾಸಿಂಗ್ ಯಾವುದೂ ಉಳಿದಿಲ್ಲ. ರೈಲ್ವೇ ಪಾಲಿಗೆ ಅತ್ಯಂತ ಸುರಕ್ಷಿತ ವರ್ಷ ಇದಾಗಿದೆ
: ಭಾರತದಲ್ಲಿ ಈಗ ಡೇಟಾ ಮತ್ತು ಧ್ವನಿ ಕರೆಗಳ ವೆಚ್ಚ ಜಗತ್ತಿನಲ್ಲೇ ಅತಿ ಕಡಿಮೆಯಿದ್ದು, ಮೊಬೈಲ್ ಮತ್ತು ಮೊಬೈಲ್ ಬಿಡಿ ಭಾಗಗಳ ಉತ್ಪಾದನೆ ಕಂಪನಿಗಳು 2ರಿಂದ 268ಕ್ಕೆ ಏರಿಕೆಯಾಗಿವೆ
: ಪುನರ್ ನವೀಕರಣ ಮಾಡಬಹುದಾದ ಇಂಧನ ಬಳಕೆಗೆ ಉತ್ತೇಜನ ನೀಡಲು ನಮ್ಮ ಸರಕಾರ ಅಂತಾರಾಷ್ಟ್ರೀಯ ಸೋಲಾರ್ ಅಲಯೆನ್ಸ್ ರೂಪಿಸಿದೆ. ಕಳೆದ 5 ವರ್ಷಗಳಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಸಾಮಥ್ರ್ಯ 10 ಪಟ್ಟು ಹೆಚ್ಚಳವಾಗಿದೆ; ಈ ವಲಯದಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಿವೆ
: ಹೀರೊಮೊಟೊಕಾರ್ಪ್, ಬಜಾಜ್ ಆಟೊ ಮತ್ತು ಟಿವಿಎಸ್ ಮೋಟಾರ್ಸ್ ಕಂಪನಿಗಳು ದ್ವಿಚಕ್ರ ವಾಹನಗಳ ಮೇಲಿರುವ ಶೇ28ರ ಜಿಎಸ್‍ಟಿ ಹೊರೆಯನ್ನು ಶೇ18ಕ್ಕೆ ಇಳಿಸುವಂತೆ ಮನವಿ ಮಾಡಿದ್ದವು. ಬಜೆಟ್‍ನಲ್ಲಿ ಸರ್ಕಾರ ಈ ಮನವಿಗೆ ಮನ್ನಣೆ ನೀಡಿಲ್ಲ
: ಮನೆಗಳನ್ನು ಕೊಳ್ಳುವವರಿಗೆ ಜಿಎಸ್‍ಟಿ ಹೊರೆ ತಗ್ಗಿಸಬೇಕು ಎಂದು ನಮ್ಮ ಸರ್ಕಾರ ಯೋಚಿಸುತ್ತಿದೆ. ಇದಕ್ಕಾಗಿ ಜಿಎಸ್‍ಟಿ ಕೌನ್ಸಿಲ್ ರೂಪಿಸಲು ವಿನಂತಿಸಿದ್ದೇವೆ. ಈ ಮೂಲಕ ಸಚಿವರ ಗುಂಪು ಮನೆಕೊಳ್ಳುವವರಿಗೆ ಹೇಗೆಲ್ಲಾ ತೆರಿಗೆ ಹೊರೆ ಕಡಿಮೆ ಮಾಡಬಹುದು ಎಂಬುದನ್ನು ಪರಿಶೀಲಿಸಿ, ಕರಡು ರೂಪಿಸಲಿದೆ
: ಸಂಚಾರಿ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗೆ ಪಣ; ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕೆ ಕ್ರಮ, ಮುಂದಿನ ಐದು ವರ್ಷಗಳಲ್ಲಿ 355.33 ಲಕ್ಷ ಕೋಟಿ ಆರ್ಥಿಕ ವ್ಯವಸ್ಥೆಯಾಗುವ ಗುರಿ; 8 ವರ್ಷಗಳಲ್ಲಿ ?710 ಲಕ್ಷ ಕೋಟಿ ಆರ್ಥಿಕತೆ
: ಆಧುನಿಕ ಕೃಷಿ ತಂತ್ರ????ನ ಅಳವಡಿಕೆ ಮೂಲಕ ಉತ್ಪಾದನೆಯಲ್ಲಿ ಹೆಚ್ಚಳ
: ಸಾಗರ ಮಾಲಾ ಯೋಜನೆಯಡಿಯಲ್ಲಿ ಬಂದರುಗಳ ಅಭಿವೃದ್ಧಿ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ತ್ವರಿತಗತಿ ಕಾಮಗಾರಿ. ದೇಶಾದ್ಯಂತ ದಿನಕ್ಕೆ 27 ಕಿಲೋಮೀಟರ್ ಹೆದ್ದಾರಿ ರಸ್ತೆ ನಿರ್ಮಾಣದ ದಾಖಲೆ.
: ಸಿನಿಮಾ ಚಿತ್ರೀಕರಣ ಅನುಮತಿಗೆ ಏಕ ಗವಾಕ್ಷಿ ಕಾರ್ಯಕ್ರಮ– ವಿದೇಶಿಗರಿಗೆ ಮಾತ್ರ ಇದ್ದ ಅನುಕೂಲ ಈಗ ದೇಶೀಯ ಚಿತ್ರ ನಿರ್ಮಾಣಕ್ಕೂ ವಿಸ್ತರಿಸಲಾಗುತ್ತಿದೆ
: ಮುಂದಿನ 5 ವರ್ಷಗಳಲ್ಲಿ 1ಲಕ್ಷ ಗ್ರಾಮಗಳಲ್ಲಿ ಡಿಜಿಟಲ್ ಕ್ರಾಂತಿಗೆ ನಿರ್ಧಾರ.
: ತೆರಿಗೆ ಸಂಗ್ರಹ ದ್ವಿಗುಣವಾಗಿದೆ. 12 ಲಕ್ಷ ಕೋಟಿಗೂ ಮೀರಿದ ತೆರಿಗೆ ಸಂಗ್ರಹ. 2013-14 ರಲ್ಲಿ 6.38 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗುತ್ತಿತ್ತು.
: ಆದಾಯ ತೆರಿಗೆ 12 ಲಕ್ಷ ಕೋಟಿ ಪಾವತಿ ಶೇ.99.94 ರಷ್ಟು ತೆರಿಗೆ ಪಾವತಿ ತೆರಿಗೆ ಪಾವತೊಗೆ 24 ಗಂಟೆ ಆನ್ ಲೈನ್ ಸೇವೆ
: ಉರಿ ಚಿತ್ರ ನೋಡುವ ಸೌಭಾಗ್ಯ ಸಿಕ್ಕಿತು. ಭಾರತೀಯ ಚಿತ್ರೋದ್ಯಮಕ್ಕೆ ಏಕಗವಾಕ್ಷಿ ಪದ್ಧತಿ ನೇರ ತೆರಿಗೆಯಲ್ಲಿ ಮಹತ್ವದ ಬದಲಾವಣೆ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ
: ಉಡಾನ್ ಯೋಜನೆ ಮೂಲಕ ವಿಮಾನದಲ್ಲಿ ಪ್ರಯಾಣಿಸುವವರ ಸಂಖ್ಯೆ 5 ವರ್ಷಗಳಲ್ಲಿ ದ್ವಿಗುಣ, ಒಳನಾಡು ಸಾರಿಗೆ ಮೂಲಕ ಕೋಲ್ಕತ್ತಾದಿಂದ ವಾರಾಣಸಿಗೆ ಸಂಪರ್ಕ
: ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿ ಶೇ 75ರಷ್ಟು ಮಹಿಳಾ ಫಲಾನುಭವಿಗಳು. ಹೆರಿಗೆ ರಜೆ 26 ವಾರಗಳಿಗೆ ಏರಿಕೆ ಯೋಜನೆಗಳಿಂದ ದೇಶದ ಮಹಿಳೆಯರ ಸಬಲೀಕರಣ
: ಮುದ್ರಾ ಯೋಜನೆಯಡಿ ಮಹಿಳೆಯರಿಗೆ ಸಾಲ ಯೋಜನೆ, ಸಣ್ಣ ಕೈಗಾರಿಕೋದ್ಯಮಿಗಳಿಗೆ ಬಡ್ಡಿ ವಿನಾಯ್ತಿ, ಗ್ರಾಚ್ಯುಟಿ ಮೊತ್ತ 10 ಲಕ್ಷದಿಂದ 20ಲಕ್ಷಕ್ಕೆ ಏರಿಕೆ, ಹೊಸ ಪೆನ್ಷನ್ ಸ್ಕೀಂನಲ್ಲಿ ನಿಯಮ ಸಡಿಲಿಕೆ. ಗ್ರಾಚ್ಯುಟಿ ಮೊತ್ತ 10 ಲಕ್ಷದಿಂದ 20ಲಕ್ಷಕ್ಕೆ ಏರಿಕೆ. ಕೆಲಸದ ಅವಧಿಯಲ್ಲಿ ಕಾರ್ಮಿಕ ಮೃತಪಟ್ಟರೆ 6ಲಕ್ಷದವರೆಗೂ ಪರಿಹಾರ. ಎರಡು ವರ್ಷದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿಯಾಗಿದೆ
: ಉಜ್ವಲ ಯೋಜನೆ ಅಡಿಯಲ್ಲಿ 8 ಕೋಟಿ ಗ್ರಾಮೀಣ ಕುಟುಂಬಗಳಿಗೆ ಉಚಿತ ಎಲ್‍ಪಿಜಿ ಸಂಪರ್ಕ ವ್ಯವಸ್ಥೆ; ಈಗಾಗಲೇ 6 ಕೋಟಿ ಸಂಪರ್ಕ
: ಸಣ್ಣ ರೈತರಿಗೆ ವಾರ್ಷಿಕ 6000 ರೂ ಬೆಂಬಲ ಧನ, ಈ ಹಣವನ್ನು ರೈತರ ಖಾತೆಗಳಿಗೆ ನೇವಾಗಿ ಮೂರು ಕಂತುಗಳಲ್ಲಿ ವರ್ಗಾವಣೆ ಮಾಡಲಾಗುವುದು. ಈ ಮೂಲಕ 12 ಕೋಟಿ ರೈತ ಕುಟುಂಬಗಳಿಗೆ ಲಾಭವಾಗಲಿದೆ. ಪಶು ಸಂಗೋಪನೆ ಹಾಗು ಮೀನುಗಾರಿಕೆಯಲ್ಲಿ ಭಾಗಿಯಾಗುವ ರೈತರಿಗೆ ಸಾಲದಲ್ಲಿ 2%ನಷ್ಟು ಬಡ್ಡಿಯಲ್ಲಿ ವಿನಾಯಿತಿ ನೀಡಲಾಗುವುದು.
: ರಕ್ಷಣಾ ವಲಯಕ್ಕೆ ರೂ3 ಲಕ್ಷ ಕೋಟಿಗೂ ಅಧಿಕ ಮೊತ್ತ ಮೀಸಲು, ಕಳೆದ 2 ವರ್ಷಗಳಲ್ಲಿ ಇಪಿಎ??? ಸದಸ್ಯರ ಸಂಖ್ಯೆ 2 ಕೋಟಿಗೆ ಏರಿಕೆ
: ತಿಂಗಳಿಗೆ ರೂ100 ಕಟ್ಟುವ ಮೂಲಕ 'ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧಾನ್' ಪಿಂಚಣಿ ಯೋಜನೆಗೆ ಅಸಂಘಟಿತ ವಲಯದ ನೌಕರರು ನೋಂದಾಯಿಸಿಕೊಳ್ಳಬಹುದು. 60 ವರ್ಷಗಳ ನಂತರ ತಿಂಗಳಿಗೆ ರೂ3000 ಪಿಂಚಣಿ ವ್ಯವಸ್ಥೆ
: ಗೋವುಗಳ ರಕ್ಷಣೆಗಾಗಿ 'ರಾಷ್ಟ್ರೀಯ ಕಾಮಧೇನು ಆಯೋಗ', ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ 12 ಕೋಟಿ ಸಣ್ಣ ರೈತರಿಗೆ ಅನುಕೂಲ. ಯೋಜನೆಗಾಗಿ ರೂ 75,000 ಕೋಟಿ
: ಪ್ರತಿ ವಿದ್ಯಾರ್ಥಿ ಶಾಲೆಯಿಂದ ತನ್ನ ಹಳ್ಳಿಯ ಮನೆಯ ವರೆಗೂ ಬಸ್; ಸಂಪರ್ಕ ವ್ಯವಸ್ಥೆಯಲ್ಲಿ ಅಭಿವೃದ್ಧಿ, ಉದ್ಯೋಗಖಾತ್ರಿ ಯೋಜನೆಗೆ ರೂ 60 ಸಾವಿರ ಕೋಟಿ ಮೀಸಲು. ಅಗತ್ಯ ಎನಿಸಿದರೆ ಈ ಮೊತ್ತವನ್ನು ಇನ್ನಷ್ಟು ಹೆಚ್ಚಿಸಲಾಗುವುದು, ಹರ್ಯಾಣದಲ್ಲಿ 22ನೇ ಏಮ್ಸ್ (ಅಖಿಲ ಭಾರತ ವೈದ್ಯಕೀಯ ಶಿಕ್ಷಣ ಸಂಸ್ಥೆ) ಆರಂಭ
: ಮುದ್ರಾ ಯೋಜನೆಯಡಿ 14.5 ಕೋಟಿ ಸಾಲ
: ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ: ಆಯುಷ್ಮಾನ್ ಭಾರತ್ ಮೂಲಕ 50 ಕೋಟಿ ಜನರಿಗೆ ಸಹಾಯ, ಆಯುಷ್ಮಾನ್ ಭಾರತ್ ಯೋಜನೆ ಮೂಲಕ ಬಡವರ ರೂ 3000 ಕೋಟಿ ಉಳಿತಾಯ, ಶೇ 98 ಗ್ರಾಮಗಳಲ್ಲಿ ನೈರ್ಮಲ್ಯ, ಜನ ಔಷಧಿ ಕೇಂದ್ರಗಳ ಮೂಲಕ ಅತಿ ಕಡಿಮೆ ದರದಲ್ಲಿ ಜನರಿಗೆ ಔಷಧಿ
: ಪ್ರಧಾನಿ ಕೌಶಲ್ಯ ಯೋಜನೆಯಡಿ 1 ಕೋಟಿಗೂ ಹೆಚ್ಚು ಯುವಕರಿಗೆ ತರಬೇತಿ ಶೇ.70 ರಷ್ಟು ಮಹಿಳೆಯರನ್ನು ತಲುಪಿರುವ ಉಜ್ವಲಾ ಯೋಜನೆ
: ಪ್ರಧಾನ ಮಂತ್ರಿ ಸಮ್ಮಾನ್ ಕಿಸಾನ್ ನಿಧಿ ಯೋಜನೆಗೆ ಸಮ್ಮತಿ, ಯೋಜನೆ ಅಡಿ ರೈತರಿಗೆ ವಾರ್ಷಿಕ ರೂ 6000; ಮೂರು ಹಂತಗಳಲ್ಲಿ ರೈತರಿಗೆ ತಲುಪಲಿದೆ. ರೈತರ ಖಾತೆಗಳಿಗೆ ನೇರವಾಗಿ ಜಮೆಯಾಗಲಿದೆ.
: ಅಲೆಮಾರಿ ಜನಾಂಗಕ್ಕೆ ಪ್ರತ್ಯೇಕ ಮಂಡಳಿ
: ಗ್ರಾಚ್ಯುಟಿ ಮೊತ್ತ 10 ಲಕ್ಷದಿಂದ 20 ಲಕ್ಷಕ್ಕೆ ಏರಿಕೆ ; ಕಾರ್ಮಿಕರ ಆದಾಯ ಮಿತಿ 21 ಸಾವಿರಕ್ಕೆ ಏರಿಕೆ; ಅಸಂಘಟಿತ, ಬೀದಿ ಬದಿ ವ್ಯಾಪಾರಿ ರಿಕ್ಷಾವಾಲಗಳ ಭದ್ರತೆಗೆ ಕ್ರಮ, ಪಿಂಚಣಿ ಯೋಜನೆ; 60 ವರ್ಶದ ಬಳಿಕ ಸಂಘಟಿತ ಕಾರ್ಮಿಕರಿಗೆ 3 ಸಾವಿರ ರೂ ಪಿಂಚಣಿ; ಪ್ರಧಾನಿ ಶ್ರಮ್ ಯೋಗಿ ಮಾನ್ ಧನ್ ಯೋಜನೆಗೆ ಧನ್ 500 ಕೋಟಿ ಮೀಸಲು; ಕೆಲಸದ ವೇಳೆ ಮೃತಪಟ್ಟರೆ 6 ಲಕ್ಶ ಪರಿಹಾರ.
: 5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವವರಿಗೆ ರೈತರ ಅಕೌಂಟ್ ಗೆ ಮೂರು ಕಂತುಗಳಲ್ಲಿ 2 ಸಾವಿರ ರೂಪಾಯಿ.
: ನೈಸರ್ಗಿಕ ವಿಕೋಪಕ್ಕೆ ಒಳಗಾದ ರೈತರಿಗೆ ಶೇ.2ರಷ್ಟು ಬಡ್ಡಿ ರಿಯಾಯಿತಿ. ಸಾಲ ಮರುಪಾವತಿ ಮಾಡಿದ ರೈತರಿಗೆ ಶೇ.3ರಷ್ಟು ಬಡ್ಡಿ ವಿನಾಯಿತಿ.
: ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್ ಧನ್ ಯೋಜನೆ ಘೋಷಣೆ
: ಕಾರ್ಮಿಕರ ಬೋಬಸ್ 7 ಸಾವಿರ ರೂ ಏರಿಕೆ ಹೊಸ ಪೆನ್ಷನ್ ಸ್ಕೀಂ
: ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ. ಬಡ ರೈತರ ಆದಾಯ ಹೆಚ್ಚಳಕ್ಕೂ ಕ್ರಮ ಕೈಗೊಳ್ಳಲಾಗಿದ್ದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಆರಂಭಿಸಲಾಗಿದೆ.
: ಪಶುಪಾಲನೆ ಮೀನುಗಾರಿಕೆ ಯೋಜನೆಗೆ 750 ಕೋಟಿ ರಾಷ್ಟ್ರೀಯ ಕಮಾಧೇನು ಯೋನನೆ ಘೋಷಣೆ
: 2 ಹೆಕ್ಟೇರ್ ಭೂಮಿ ಇರುವ ರೈತರಿಗೆ 6 ಸಾವಿರ ರೂ
:  12 ಕೋಟಿ ರೂ ರೈತರ ಕುಟುಂಬಗಳಿಗೆ ಲಾಭ
: ಸಣ್ಣರೈತರಿಗಾಗಿ ಪ್ರಧಾನಿ ಕಿಸಾನ್ ಸಮ್ಮಾನ್ ಯೋಜನೆ
: ರೈತರ ಖಾತೆಗೆ ನೇರವಾಗಿ 6 ಸಾವಿರ ಕೋಟಿ ರೂಪಾಯಿ
: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ರೈತರಿಗೆ ನೇರ ಆದಾಯ
: ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಕ್ರಮ ಎಫ್ ಡಿಐ ಪ್ರಮಾಣ ಗಣನೀಯವಾಗಿ ಏರಿಕೆ
: 22 ನೇ ಏಮ್ಸ್ ಹರ್ಯಾಣದಲ್ಲಿ ನಿರ್ಮಾಣ ಇತಿಹಾಸದಲ್ಲೆ ಮೊದಲ ಬಾರಿಗೆ ಎಂಎಸ್ ಪಿ, ಶೇ.50 ರಷ್ಟು ಏರಿಕೆ
: ಗ್ರಾಮ ಸಡಕ್ ಯೋಜನೆಗೆ 19 ಸಾವಿರ ಕೋಟಿ ರೂಪಾಯಿ ಅನುದಾನ ಬಿಡುಗಡೆ
: ಆಯುಷ್ಮಾನ್ ಭಾರತ್ 50 ಕೋಟಿ ಜನರಿಗೆ ಉಪಯೋಗ, ಈ ವರೆಗೂ 10ಲಕ್ಷದ ವರೆಗೆ ಔಷಧೀಯ ವೆಚ್ಚ
: ಮಾರ್ಚ್ 2019ರಲ್ಲಿ ದೇಶದ ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕದ ಗುರಿ
: ರೇರಾ ಕಾಯ್ದೆ ಮೂಲಕ ರಿಯಲ್ ಎಸ್ಟೇಟ್ ವಲಯದಲ್ಲಿ ಆಮೂಲಾಗ್ರ ಬದಲಾವಣೆ
: 5.45 ಲಕ್ಷ ಹಳ್ಳಿಗಳು ಬಹಿರ್ದೆಸೆ ಮುಕ್ತ ಘೋಷಣೆ; ಸ್ವಚ್ಛ ಭಾರತ ಅಭಿಯಾನದ ಯಶಸ್ಸಿಗೆ ಜನತೆಗೆ ಧನ್ಯವಾದ ಅರ್ಪಿಸಿದ ಗೋಯಲ್
: 5 ವರ್ಷಗಳಲ್ಲಿ 1 ಕೋಟಿಗೂ ಹೆಚ್ಚು ಮನೆ ನಿರ್ಮಾಣ
: ಬ್ಯಾಂಕಿಂಗ್ ಸುಧಾರಣೆಗೆ ದಿಟ್ಟ ಕ್ರಮ ದೇಶದ ಆರ್ಥಿಕ ಇತಿಹಾಸದ ಮೈಲಿಗಲ್ಲುಗಳು, ಬಡವರ ಹೊಟ್ಟೆಯ ಮೇಲೆ ಹೊಡೆಯುವ ಹಣದುಬ್ಬರ ಕಣ್ಣಿಗೆ ಕಾಣದ ತೆರಿಗೆ. ಕಳೆದ ಐದು ವರ್ಷಗಳಲ್ಲಿ ಹಣದುಬ್ಬರವನ್ನು ಯಶಸ್ವಿಯಾಗಿ ನಿಯಂತ್ರಣದಲ್ಲಿಟ್ಟಿದ್ದೇವೆ
: ರಾಜ್ಯಗಳ ತೆರಿಗೆ ಪ್ರಮಾಣಾ ಶೇ.32 ರಿಂದ 42 ಕ್ಕೆ ಏರಿಕೆ
: 2018ರ ಡಿಸೆಂಬರ್ ನಲ್ಲಿ ಹಣದುಬ್ಬರದ ದರ ಕೇವಲ ಶೇ.2.1ರಷ್ಟಿತ್ತು. 2019ರಲ್ಲಿ ಕೈಗೊಂಡಿರುವ ಸ್ವಚ್ಛ ಭಾರತ್ ಮಿಷನ್ ಬಹುತೇಕ ಯಶಸ್ವಿ.
: ಚಾಲ್ತಿ ಖಾತೆ ಕೊರತೆ ಶೇ.22. ಕ್ಕೆ ಇಳಿಕೆ ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆ ಅಡಿ ರಸ್ತೆ ಗಳ ನಿರ್ಮಾಣ 3 ಪಟ್ಟು ಹೆಚ್ಚಾಗಿದೆ.
: ಬೆಲೆ ಏರಿಕೆ ಪ್ರಮಾಣ ಕುಸಿತ
: ಭೂ ರಹಿತ ಕೃಷಿಕರಿಗೆ ಮೋದಿ ಸರ್ಕಾರದಿಂದ ಬಂಪರ್? ಕೊಡುಗೆ
: 2022 ರ ವೇಳೆಗೆ ಕೃಷಿ ಆದಾಯ ದುಪ್ಪಟ್ಟು
: ಎನ್ ಪಿಎ ಹಗರಣದ ಬಗ್ಗೆ ತನಿಖೆಗೆ ಆದೇಶಿಸಿದ್ದು ನಮ್ಮ ಸರ್ಕಾರದ ಹೆಮ್ಮೆ.
: ನೌಕರ ವರ್ಗಕ್ಕೆ ಸಿಹಿ ಸುದ್ದಿ, ರೂ. 5 ಲಕ್ಷದವರೆಗೂ ಆದಾಯ ತೆರಿಗೆ ಕಟ್ಟಬೇಕಿಲ್ಲ, ಕೈಗೆಟಕುವ ಬೆಲೆಗೆ ಮನೆ ಖರೀದಿ: ಕೇಂದ್ರ ಸರಕಾರದಿಂದ 1 ಲಕ್ಷ ಕೋಟಿ ಅನುದಾನ ಬಿಡುಗಡೆ
: ಹಣದುಬ್ಬರ ದರ ನಿಯಂತ್ರಣ ಮಾಡಿದ್ದೇವೆ. ಕಳೆದ ಸರ್ಕಾರಗಳಿಗೆ ಹೋಲಿಸಿದರೆ ನಾವು ಹಣದುಬ್ಬರವನ್ನು ಯಶಸ್ವಿಯಾಗಿ ನಿಯಂತ್ರಿಸಿದ್ದೇವೆ.
: ಸಕ್ಕರೆ ಕಾರ್ಖಾನೆಗಳಿಗೆ ಮತ್ತೊಂದು ಪ್ಯಾಕೇಜ್ ನೀಡಲು ಕೇಂದ್ರ ಚಿಂತನೆ, ಎಥೆನಾಲ್? ಉತ್ಪಾದನೆಗೆ ಸಕ್ಕರೆ ಕಾರ್ಖಾನೆಗಳಿಗೆ 10-12 ಸಾವಿರ ಕೋಟಿ ರೂ ಸರಳ ಸಾಲ ನೀಡಲು ಕೇಂದ್ರ ಚಿಂತನೆ
: 2009 ರಿಂದ 2014ರ ವರೆಗೆ ಹಣ ದುಬ್ಬರ ಪ್ರಮಾಣ ಇಳಿಕೆಯಾಗಿದ್ದು, ಆರ್ಥಿಕವಾಗಿ ಮುನ್ನಡೆಯುತ್ತಿರುವ ಭಾರತ ಜಾಗತಿಕವಾಗಿ 6ನೇ ಸ್ಥಾನದಲ್ಲಿದೆ
: ಬಜೆಟ್ ಮಂಡನೆಯಾಗುತ್ತಿದ್ದಂತೆಯೇ 100 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್
: 2022ರ ವೇಳೆಗೆ ನವಭಾರತ ನಿರ್ಮಾಣ, 5 ವರ್ಷಗಳಲ್ಲಿ ಜಾಗತಿಕವಾಗಿ ಭಾರತ ಪ್ರಕಾಶಿಸುತ್ತಿದೆ ಚೊಚ್ಚಲ ಬಜೆಟ್ ಮಂಡನೆಯಲ್ಲಿ ಪಿಯೂಷ್ ಗೋಯಲ್
: ವಿತ್ತ ಸಚಿವ ಪಿಯೂಶ್ ಗೋಯಲ್ ರಿಂದ ಬಜೆಟ್ ಮಂಡನೆ ಆರಂಭ
: ಪಿಯೂಶ್ ಗೋಯಲ್ ಅವರ ಮಧ್ಯಂತರ ಬಜೆಟ್ 2019ರ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
: ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಜನಪ್ರಿಯ ಯೋಜನೆಗಳ ಘೋಷಿಸುತ್ತಾರೆ: ಮಲ್ಲಿಕಾರ್ಜುನ ಖರ್ಗೆ
: ಬಜೆಟ್ 2019ರ ಮೇಲಿನ ನಿರೀಕ್ಷೆ; ಭಾರತೀಯ ಷೇರುಮಾರುಕಟ್ಟೆ ಚೇತರಿಕೆ, ಸೆನ್ಸೆಕ್ಸ್ 123 ಅಂಕಗಳ ಏರಿಕೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries