HEALTH TIPS

ಅರಿಯಪ್ಪಾಡಿಯಲ್ಲಿ ಗೋಕುಲೋತ್ಸವ ಸಂಪನ್ನ

ಬದಿಯಡ್ಕ: ಸನಾತನ ಸಂಸ್ಕøತಿಯಲ್ಲಿ ಮುಗ್ದತೆ, ಪರೋಪಕಾರ, ಶಾಂತಿ, ಸಹನೆ, ಪ್ರೀತಿ ಇವುಗಳ ಪ್ರತೀಕವಾಗಿ ಹಸುವನ್ನು ದೇವರ ಸ್ಥಾನದಲ್ಲಿ ಕಲ್ಪಿಸಿ ಪೂಜಿಸುವ ಪರಂಪರೆ ನಡೆದುಬಂದಿದೆ. ಜೊತೆಗೆ ಅಸೂಯೆ, ಕಪಟ, ಮೋಸ, ವಂಚನೆ ಅರಿಯದ ಮುಗ್ದ ಕಂದಮ್ಮರಲ್ಲಿ ನಾವು ದೇವರನ್ನು ಕಾಣುತ್ತೇವೆ. ಮುಗ್ದಮನಸ್ಸಿನ ಪ್ರೀತಿಯ ಮಕ್ಕಳು ಸೇರಿರುವ ಗೋಕುಲೋತ್ಸವದಲ್ಲಿ ಮಕ್ಕಳ ನಗುವಿನಿಂದ ಹಬ್ಬದ ವಾತಾವರಣ ಸೃಷ್ಟಿಯಾಗಿದೆ ಎಂದು ಕುಟುಂಬ ಪ್ರಬೋಧನ ಮಂಗಳೂರು ವಿಭಾಗದ ಸದಸ್ಯೆ, ಮಹೇಶ್ ಪದವಿಪೂರ್ವ ಕಾಲೇಜಿನ ಇಂಗ್ಲೀಷ್ ಉಪನ್ಯಾಸಕಿ ಸುಮತಿ ಪೈ ಅಭಿಪ್ರಾಯಪಟ್ಟರು. ಭಾನುವಾರ ಅರಿಯಪ್ಪಾಡಿ ಮಾಡ ಶ್ರೀ ಈರ್ವರು ಉಳ್ಳಾಕ್ಲು ದೈವಸ್ಥಾನದ ವಠಾರದಲ್ಲಿ ನಡೆದ ಬಾಲಗೋಕುಲ ಕಾಸರಗೋಡು ತಾಲೂಕು ಸಮಿತಿ ಬದಿಯಡ್ಕ ಮಹಾಮಂಡಲ ಗೋಕುಲೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಎಲ್ಲರನ್ನೂ ಸಮಾನವಾಗಿ ಕಾಣುವುದೇ ಉತ್ಸವವಾಗಿದೆ. ವ್ಯಕ್ತಿತ್ವವೆಂದರೆ ಬರೀ ಬಾಹ್ಯ ಸೌಂದರ್ಯವಲ್ಲ. ಭೌತಿಕವಾಗಿ, ಸಾಮಾಜಿಕವಾಗಿ, ಆಧ್ಯಾತ್ಮಿಕವಾಗಿ ಒಂದು ಪರಿಪೂರ್ಣ ವ್ಯಕ್ತಿತ್ವವನ್ನು ನಾವು ಹೊಂದಬೇಕಾಗಿದೆ. ಸಮಾಜಮುಖಿಯಾಗಿ ಬೆಳೆಯುವ ಮೂಲಕ ಮಕ್ಕಳು ವಿಶ್ವಮಾನವರಾಗಿ ಬೆಳಗಬೇಕು. ಬಾಲಗೋಕುಲಗಳ ಸಂಸ್ಕಾರದಿಂದ ಉತ್ತಮ ವ್ಯಕ್ತಿತ್ವ ರೂಪೀಕರಣವಾಗಲು ಸಾಧ್ಯವಿದೆ. ಆಧುನಿಕ ಕಾಲದಲ್ಲಿ ನಾಲ್ಕು ಗೋಡೆಗಳ ಮಧ್ಯದಲ್ಲಿ ನಮ್ಮ ಮಕ್ಕಳ ಬದುಕು ಬರಡಾಗಬಾರದು. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ದೈಹಿಕ, ಮಾನಸಿಕ, ಬೆಳವಣಿಗೆ ಕುಂಠಿತವಾಗುತ್ತದೆ. ಇದೊಂದು ಮಾದಕ ವಸ್ತುವಾಗಿ ಬದಲಾಗಿದೆ. ಇದಕ್ಕೊಂದು ಕಡಿವಾಣ ಹಾಕುವಲ್ಲಿ ಮನೆಯ ಹೆತ್ತವರೇ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗಿದೆ. ಇತರರೊಂದಿಗೆ ಹೋಲಿಕೆ ಮಾಡಿ ನಮ್ಮ ಮಕ್ಕಳನ್ನು ಬೆಳೆಸುವುದನ್ನು ಬಿಟ್ಟು ಒಳ್ಳೆಯ ವಿಚಾರಗಳನ್ನು ಅವರ ಮನಸ್ಸಿನಲ್ಲಿ ತುರುಕಬೇಕಾಗಿರುವುದು ಇಂದಿನ ಕಾಲದಲ್ಲಿ ಅತೀಅಗತ್ಯವಾಗಿದೆ ಎಂದರು. ನಿವೃತ್ತ ಮುಖ್ಯೋಪಾಧ್ಯಾಯ ವೈ. ವೆಂಕಟ್ರಮಣ ಭಟ್ ಈಂದುಗುಳಿ ದೀಪಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸತ್ಕಾರ್ಯಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಮಾಡಬೇಕು. ಶಿಸ್ತು, ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನವನ್ನು ನೀಡಿ ಮಕ್ಕಳನ್ನು ಬೆಳೆಸಬೇಕು. ಭಾರತೀಯ ಸಂಸ್ಕøತಿಯ ಪ್ರತೀಕವಾದ ಗೋವಿನ ಬಗ್ಗೆ ಪ್ರೀತಿಯನ್ನು ಬೆಳೆಸಬೇಕು ಎಂದು ತಿಳಿಸಿದರು. ಶ್ರೀ ಈರ್ವರು ಉಳ್ಳಾಕ್ಲು ದೈವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ ವೈ. ಮಹಾಲಿಂಗೇಶ್ವರ ಭಟ್ ಈಂದುಗುಳಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಬಾಲಗೋಕುಲ ಕಾಸರಗೋಡು ತಾಲೂಕು ಕಾರ್ಯದರ್ಶಿ ದೇವದಾಸ್ ನುಳ್ಳಿಪ್ಪಾಡಿ ಧ್ವಜಾರೋಹಣಗೈದು ಸಭೆಯಲ್ಲಿ ಉಪಸ್ಥಿತರಿದ್ದರು. ಸಾಮಾಜಿಕ ಕಾರ್ಯಕರ್ತ ಎಸ್. ನಾರಾಯಣ ಸ್ವಾಗತಿಸಿ, ಅಶ್ವಿನಿ ಬಡಗಮೂಲೆ ವಂದಿಸಿದರು. ಸುಂದರ ಕಟ್ನಡ್ಕ ನಿರೂಪಿಸಿದರು. ಬಳಿಕ ಮಕ್ಕಳಿಗೆ ಬೌದ್ಧಿಕ ಹಾಗೂ ಶಾರೀರಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅಪರಾಹ್ನ ಬಾಲಗೋಕುಲಗಳ ಮಕ್ಕಳಿಂದ ಸಾಂಸ್ಕøತಿಕ ವೈವಿಧ್ಯಮಯ ಕಾರ್ಯಕ್ರಮಗಳು ಅನಾವರಣಗೊಂಡವು. ಬೆಳಿಗ್ಗೆ ಮುಂಡಿತ್ತಡ್ಕ ವಿಷ್ಣುನಗರ ಶ್ರೀ ಮಹಾವಿಷ್ಣು ಭಜನಾ ಮಂದಿರದಿಂದ ಶೋಭಾಯಾತ್ರೆ ನಡೆಯಿತು. ಸಾಂಪ್ರದಾಯಿಕ ಚೆಂಡೆ, ಮುತ್ತುಕೊಡೆಯೊಂದಿಗೆ ಆಕರ್ಷಕ ಮೆರವಣಿಗೆಯಲ್ಲಿ ವಿವಿಧೆಡೆಗಳಿಂದ ಆಗಮಿಸಿದ ಬಾಲಗೋಕುಲದ ಮಕ್ಕಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries