ಕೊಂಡೆವೂರು ಸೋಮಾಯಾಗ ಪ್ರಬಂಧ ಸ್ಪರ್ಧೆ ಕೂಡ್ಲು ಪ್ರೌಢ ಶಾಲೆಯ ಅತುಲ್ ರೈ ಕೆ. ಪ್ರಥಮ
0
ಫೆಬ್ರವರಿ 28, 2019
ಮಧೂರು: ಕೊಂಡೆವೂರಿನಲ್ಲಿ ನಡೆದ ವಿಶ್ವಜಿತ್ ಅತಿರಾತ್ರ ಸೋಮಯಾಗದ ಅಂಗವಾಗಿ ಕೇರಳ ಮತ್ತು ಕರ್ನಾಟಕ ಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ಅಂತಾರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕೂಡ್ಲು ಶ್ರೀ ಗೋಪಾಲಕೃಷ್ಣ ಹೈಸ್ಕೂಲಿನ 9 ನೇ ತರಗತಿ ವಿದ್ಯಾರ್ಥಿ ಅತುಲ್ ರೈ ಕೆ. ಅವರಿಗೆ ಕೊಂಡೆವೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.
ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಶಾಲು ಹೊದೆಸಿದರು. ಕೊಂಡೆವೂರು ಸ್ವಾಮೀಜಿ ಬಹುಮಾನದ ಮೊತ್ತವಾದ ಹತ್ತು ಸಾವಿರ ರೂಪಾಯಿಗಳನ್ನು ನೀಡಿ ಆಶೀರ್ವದಿಸಿದರು.
ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿವರು ಸ್ಮರಣಿಕೆಯನ್ನು, ಆನೆಗುಂದಿ ಕಾಳಹಸ್ತೇಂದ್ರ ಸ್ವಾಮೀಜಿಯವರು ಪ್ರಶಸ್ತಿ ಪತ್ರವನ್ನು ವಿತರಿಸಿ ಆಶೀರ್ವದಿಸಿದರು. ಉಡುಪಿಯ ವಿ.ಕೆ.ಆಚಾರ್ಯ ಪ್ರೌಢ ಶಾಲೆಯ ಗುರುರಾಜ ಮಕ್ಕಿತ್ತಾಯ ಅವರಿಗೆ ದ್ವಿತೀಯ ಬಹುಮಾನವನ್ನು, ಕೊಂಡೆವೂರು ಶಾಲೆಯ ಪ್ರಜ್ಞಾ ಅವರಿಗೆ ತೃತೀಯ ಬಹುಮಾನವನ್ನು ಸ್ವಾಮೀಜಿಯವರು ವಿತರಿಸಿದರು.
ದಿನಕರ ಹೊಸಂಗಡಿ ಸ್ವಾಗತಿಸಿ, ಪುರುಷೋತ್ತಮ ಭಂಡಾರಿ ಅಡ್ಯಾರು ವಂದಿಸಿದರು. ರಾಮಚಂದ್ರ ಸಿ.ಐಲ ಅವರು ಕಾರ್ಯಕ್ರಮ ನಿರೂಪಿಸಿದರು. ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಯಾಗದ ವಿಶೇಷತೆಗಳ ಕುರಿತು ಅರಿವು ಕಾಳಜಿ ಮೂಡಿಸುವ ಸಲುವಾಗಿ ಈ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.