ಬದಿಯಡ್ಕದಲ್ಲಿ ಬಹು ನಿರೀಕ್ಷಿತ ವೃದ್ದರ ಹಗಲು ಮನೆ ಆರಂಭ
0
ಫೆಬ್ರವರಿ 08, 2019
ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯತಿನ 2018-19 ನೇ ವಾರ್ಷಿಕ ಯೋಜನೆಯ ಭಾಗವಾಗಿ ವಯೋವೃದ್ಧರ ಹಗಲು ಮನೆ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಲಾಯಿತು.
ವೃದ್ಧರ ಮಾನಸಿಕ ನೆಮ್ಮದಿಗಾಗಿ ಮತ್ತು ವಿಶ್ರಾಂತಿಗಾಗಿ ಬೋಳುಕಟ್ಟೆ ಮಿನಿ ಸ್ಟೇಡಿಯಂ ಬಳಿ ನಿರ್ಮಾಣಗೊಂಡ ಹಗಲು ಮನೆಯನ್ನು ಜಿಲ್ಲಾಧಿಕಾರಿ ಡಾ.ಡಿ ಸಜಿತ್ ಬಾಬು ಉದ್ಘಾಟಿಸಿ ಲೋಕಾರ್ಪಣೆಗೈದರು. ಗ್ರಾ.ಪಂ ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷೆ ಸೈಬುನ್ನೀಸಾ, ಎ.ಎಸ್ ಮುಹಮ್ಮದ್, ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್ ಮಾನ್ಯ, ಮಾಹಿನ್ ಕೇಳೋಟ್, ಬಿ.ಶಾಂತಾ, ಬಾಲಕೃಷ್ಣ ಶೆಟ್ಟಿ, ಮುನೀರ್, ಜಯಂತಿ, ಎಂ.ಕೆ.ಪ್ರಸನ್ನಾ, ವಿಶ್ವನಾಥ ಪ್ರಭು, ಪಿ.ಜಯಶ್ರೀ, ಪುಷ್ಪ ಕುಮಾರಿ, ಪಿ.ರಾಜೇಶ್ವರಿ, ಬಿ.ಎ ಮುಹಮ್ಮದ್, ಪ್ರೇಮಾ ಕುಮಾರಿ, ಕೆ.ಸುಕುಮಾರನ್ ಮಾಸ್ತರ್, ಪಿಲಿಂಗಲ್ಲು ಕೃಷ್ಣ ಭಟ್, ಸುಧಾ ಜಯರಾಂ, ಮೊದಲಾದವರು ಉಪಸ್ಥಿತರಿದ್ದರು. ಬದಿಯಡ್ಕ ಗ್ರಾ.ಪಂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅನ್ವರ್ ಜಝೋನ್ ಸ್ವಾಗತಿಸಿ, ಗ್ರಾ.ಪಂ ಕಾರ್ಯದರ್ಶಿ ಎನ್.ಶೈಲೇಂದ್ರ ವಂದಿಸಿದರು.
ಏನಿದು ಹಗಲು ಮನೆ:
60ರ ಹರೆಯ ದಾಟಿದ ವಯೋವೃದ್ದರ ಏಕತಾನತೆ, ಒಂಟಿತನವನ್ನು ಹೋಗಲಾಡಿಸುವ ಉದ್ದೇಶದೊಮದಿಗೆ 10 ಕೋಟಿ ರೂ. ನಿಧಿ ಬಳಸಿ ಈ ಯೋಜನೆ ಜಾರಿಗೊಳಿಸಲಾಗಿದೆ. ಕಟ್ಟಡದಲ್ಲಿ ಎರಡು ಬೆಡ್ ರೂಂ, ಸಭಾಂಗಣ, ಅಡುಗೆ ಕೋಣೆ, ಎರಡು ಶೌಚಗೃಹಗಳಿವೆ. ಅಡುಗೆಯನ್ನು ಸ್ವತಃ ತಯಾರಿಸಬೇಕಾಗುತ್ತದೆ. ಉಳಿದಂತೆ ಟಿ.ವಿ.ವೀಕ್ಷಣೆಗೆ ಅವಕಾಶ, ಪತ್ರಿಕೆ ಸಹಿತ ವಿವಿಧ ಪುಸ್ತಕಗಳ ಓದುವಿಕೆಗೆ ಅವಕಾಶ ಒದಗಿಸಲಾಗುತ್ತದೆ. ಸಂಜೆಯಾಗುತ್ತಿದ್ದಂತೆ ಅವರವರ ಮನೆಗೆ ತೆರಳಬೇಕಾಗುತ್ತದೆ.
ಇಂದಿನ ಕಾಳಘಟ್ಟದಲ್ಲಿ ಮನೆಯ ಮಕ್ಕಳು, ಮೊಮ್ಮಕ್ಕಳು ದಿನಪೂರ್ತಿ ವಿವಿಧ ಕೆಲಸಗಳಲ್ಲಿ ಭಿಝಿ ಇರುತ್ತಿದ್ದು, ಬಹುತೇಕ ಮನೆಗಳಲ್ಲಿ ವಯೋ ವೃದ್ದರು ಏಕಾಂತತೆಯಿಂದ ಮಾನಸಿಕ ಒತ್ತಡ, ಕಿರಿಕಿರಿಗೊಳಗಾಗುತ್ತಿದ್ದು, ಈ ಸಮಸ್ಯೆಯ ನಿವಾರಣೆಗೆ ಜಿಲ್ಲೆಯಲ್ಲೇ ಮೊತ್ತಮೊದಲ ಯೋಜನೆಯಾಗಿ ಗ್ರಾ.ಪಂ. ಒಂದು ದಿಟ್ಟ ಹೆಜ್ಜೆಯಿರಿಸಿರುವುದು ಆಶ್ಚರ್ಯಕರವಾಗಿದೆ.