ನೂಜಿಬೆಟ್ಟು ಕ್ಷೇತ್ರದಲ್ಲಿ ಇಂದು ಪ್ರತಿಷ್ಠೆ
0
ಫೆಬ್ರವರಿ 06, 2019
ಮುಳ್ಳೇರಿಯ: ದೇಲಂಪಾಡಿ ಸಮೀಪದ ನೂಜಿಬೆಟ್ಟು ಶ್ರೀ ಮಹಾವಿಷ್ಣು ದೇವಸ್ಥಾನದ ಪುನಃ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಫೆ.7ರಂದು ಬ್ರಹ್ಮಶ್ರೀ ವಾಸುದೇವ ತಂತ್ರಿ ಮತ್ತು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.
ಫೆ.7ರಂದು ಬೆಳಿಗ್ಗೆ 5ರಿಂದ ವೈದಿಕ ಕಾರ್ಯಕ್ರಮಗಳು, 8.17ಕ್ಕೆ ಶ್ರೀ ದೇವರ ಮತ್ತು ಪರಿವಾರ ದೇವರುಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಸಂಜೆ 5ರಿಂದ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಮಠದ ಶ್ರೀ ಗುರುದೇವಾನಂದ ಸ್ವಾಮೀಜಿ ಮತ್ತು ಬ್ರಹ್ಮಶ್ರೀ ವಾಸುದೇವ ತಂತ್ರಿಯವರಿಂದ ಆಶೀರ್ವಚನ, ಹರಿಣಿ ಪುತ್ತೂರಾಯ ಇವರಿಂದ ಧಾರ್ಮಿಕ ಉಪನ್ಯಾಸ, ವಸಂತ ಪೈ ಬದಿಯಡ್ಕ, ಶ್ರೀಧರನ್ ಪೆರುಂಬಳ, ಲಕ್ಷ್ಮೀನಾರಾಯಣ, ಸುಳ್ಯ ಶಾಸಕ ಅಂಗಾರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಿವರ್iಲಾ.ಟಿ ಭಾಗವಹಿಸುವರು. ಈ ಸಂದರ್ಭದಲ್ಲಿ ಗೌರವರ್ಪಣೆ ನಡೆಯಲಿದೆ. ರಾತ್ರಿ 7ರಿಂದ ಶ್ರೀ ದೇವರ ಭೂತಬಲಿ ಉತ್ಸವ, ರಾಜಾಂಗಣ ಪ್ರಸಾದ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವಿಶ್ವ ವಿನೋದ ಬನಾರಿ ಮಾರ್ಗದರ್ಶನದಲ್ಲಿ ಯಕ್ಷಗಾನ ವೈಭವ, ಶ್ವೇತಾ ಮತ್ತು ಬಳಗದವರಿಂದ ಸಮೂಹ ನೃತ್ಯ, ಪ್ರಿಯಾ ಮತ್ತು ಬಳಗದವರಿಂದ ತಿರುವಾದಿರ ಮತ್ತು ನೃತ್ಯ ಕಾರ್ಯಕ್ರಮ, ವಿಠಲ ನಾಯಕ್ ಮತ್ತು ಬಳಗ ಕಲ್ಲಡ್ಕ ಇವರಿಂದ ಗೀತಾ ಸಾಹಿತ್ಯ ಸಂಭ್ರಮ , ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದವರಿಂದ ಯಕ್ಷಗಾನ ತಾಳಮದ್ದಳೆ ಭೀಷ್ಮಾರ್ಜುನ, ಸುಧಾಕರ ಕೋಟೆ ಕುಂಜತ್ತಾಯ ಇವರಿಂದ ಹರಿಕಥಾ ಸಂಕೀರ್ತನೆ, ವಿದುಷಿ ನಿರ್ಮಲಾ ಜಗದೀಶ್ ಇವರ ಶಿಷ್ಯೆ ಜ್ಯೋತಿಕಾ ಅಡ್ಡಂತಡ್ಕ ಇವರಿಂದ ಭರತನಾಟ್ಯ, ಕೆವಿಜಿ ತಾಂತ್ರಿಕ ವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಿಂದ ನೃತ್ಯ ವೈಭವ, ಕು.ಸಿಂಧೂ ಮತ್ತು ಸಹೋದರಿಯರು ಮಂಡ್ಯ ಇವರಿಂದ ಭಕ್ತಿ ಲಹರಿ, ಸ್ಥಳೀಯ ಶಾಲಾ ಮಕ್ಕಳಿಂದ ನೃತ್ಯ,
ಮಧೂರು ಶ್ರೀ ಮಹಾಗಣಪತಿ ಯಕ್ಷಗಾನ ಕಲಾ ಸಂಘದವರಿಂದ ಯಕ್ಷಗಾನ ತಾಳಮದ್ದಳೆ ಭಾರ್ಗವ ವಿಜಯ, ಪಾಂಡುರಂಗ ನಾಯಕ್ ಮತ್ತು ಬಳಗ ಪುತ್ತೂರು ಇವರಿಂದ ಭಕ್ತಿಸುಧಾ, ಅನನ್ಯ, ಸಿಂಚನ ಇವರಿಂದ ಭರತನಾಟ್ಯ ನಡೆಯಲಿದೆ.