ಕೊಂಡೆವೂರಿನ ಯಾಗ ಭೂಮಿಗೆ ಕೇಂದ್ರ ಸಚಿವರ ಭೇಟಿ
0
ಫೆಬ್ರವರಿ 04, 2019
ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಆಶ್ರಯದಲ್ಲಿ ಫೆ.18 ರಿಂದ 24ರ ವರೆಗೆ ಆಶ್ರಮ ಆವರಣದಲ್ಲಿ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ಯಾಗ ಭೂಮಿಗೆ ಕೇಂದ್ರ ಆಯುಷ್ ಖಾತೆಯ ಸಚಿವ ಶ್ರೀಪಾದ ಯಸ್ಸೋ ನಾಯಕ್ ಅವರು ಭಾನುವಾರ ವಿಶೇಷ ಭೇಟಿ ನೀಡಿದರು.
ಯಾಗದ ಪ್ರಧಾನ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ಸಚಿವರು ಶ್ರೀಯೋಗಾನಂದ ಸರಸ್ವತೀ ಶ್ರೀಗಳೊಂದಿಗೆ ಯಾಗ ತಯಾರಿಯ ವಿವಿಧ ಚಟುವಟಿಕೆಗಳನ್ನು ಪರಿಶೀಲಿಸಿ ಸಲಹೆಸೂಚನೆಗಳನ್ನು ನೀಡಿದರು.