ಡಯಟ್ ನಲ್ಲಿ ಶಿಲ್ಪ ನಿರ್ಮಾಣ ಶಿಬಿರ
0
ಫೆಬ್ರವರಿ 28, 2019
ಕುಂಬಳೆ: ಮಾಯಿಪ್ಪಾಡಿಯಲ್ಲಿರುವ ಶಿಕ್ಷಕ ತರಬೇತಿ ಕೇಂದ್ರ ಕಾಸರಗೋಡು ಡಯಟ್ ನಲ್ಲಿ ಕಾಸರಗೋಡು ಜಿಲ್ಲಾ ಚಿತ್ರಕಲಾ ಅಧ್ಯಾಪಕರಿಗೆ ದ್ವಿದಿನ ಶಿಲ್ಪ ನಿರ್ಮಾಣ ಶಿಬಿರವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕರಕೌಶಲ ಸಂಪನ್ಮೂಲ ವ್ಯಕ್ತಿಯಾದ ಅನಿಲ್ ಮಣಿಯರ, ಚಿತ್ರನ್ ಕುಂಞÂಮಂಗಲಂ, ಶ್ಯಾಮ್‍ಶಶಿ ಹಾಗೂ ಸುರೇಶ್ ಸಹಕರಿಸಿದರು. ವಿವಿಧ ಶಾಲೆಗಳ ಚಿತ್ರಕಲಾ ಶಿಕ್ಷಕರು ಸಕ್ರಿಯರಾಗಿ ಶಿಬಿರದಲ್ಲಿ ಪಾಲ್ಗೊಂಡರು.ಕ್ಲೆ ಮೋಡೆಲ್, ಪ್ಲಾಸ್ಟರ್ ಫ್ಯಾರಿಸ್,ಸಿಮೆಂಟ್ ಶಿಲ್ಪ ಇತ್ಯಾದಿಗಳ ವಿಸ್ಕøತ ಕಮ್ಮಟ ನಡೆಯಿತು. ಜಯಪ್ರಕಾಶ್ ಶೆಟ್ಟಿ ಬೇಳ, ಗೋವಿಂದ ಶರ್ಮ ಕೋರಿಕ್ಕಾರ್, ದಿನೇಶ್ ಕೆ.ವಿ, ರಾಜ್‍ಕುಮಾರ್, ವೆಂಕಟ್ರಮಣ ಕಾರಂತ್, ದಿವಾಕರನ್ ಮೊದಲಾದ 25 ರಷ್ಟು ಚಿತ್ರ ಕಲಾವಿದರು ಭಾಗವಹಿಸಿದರು.