ವಿವಿ ಕಲೋತ್ಸವ: ಪ್ರಚಾರ ಮೆರವಣಿಗೆ
0
ಫೆಬ್ರವರಿ 06, 2019
ಕಾಸರಗೋಡು: ಬುಧವಾರದಿಂದ ಫೆಬ್ರವರಿ 10ರ ವರೆಗೆ ಕಾಂಞÂಂಗಾಡ್ ನೆಹರೂ ಕಾಲೇಜು ಆವರಣದಲ್ಲಿ ನಡೆಯಲಿರುವ ಕಣ್ಣೂರು ವಿಶ್ವ ವಿದ್ಯಾನಿಲಯದ ಪ್ರಸ್ತುತ ಸಾಲಿನ ಕಲೋತ್ಸವದ ಪೂರ್ವಭಾವಿಯಾಗಿ ಮಂಗಳವಾರ ಕಾಂಞÂಂಗಾಡು ನೆಹರೂ ಕಾಲೇಜು ಪರಿಸರದಿಂದ ನೀಲೇಶ್ವರದ ವರೆಗೆ ಪ್ರಚಾರ ಮೆರವಣಿಗೆ ನಡೆಯಿತು.
ನೀಲೇಶ್ವರ ನಗರ ಸಭಾ ಅಧ್ಯಕ್ಷ ಪ್ರೊ. ಕೆ.ವಿ.ಜಯರಾಜನ್, ವಿವಿ ಯೂನಿಯನ್ ಅಧ್ಯಕ್ಷ ವಿ.ವಿ.ಅಂಬಿಳಿ, ಯೂನಿಯನ್ ಪ್ರಧಾನ ಕಾರ್ಯದರ್ಶಿ ದೃಶ್ಯ ಇ.ಕೆ, ಜೊತೆ ಕಾರ್ಯದರ್ಶಿ ಮಂಜುಷಾ, ಕಾಂಞÂಂಗಾಡ್ ನಗರ ಸಭಾ ಸದಸ್ಯರುಗಳಾದ ಉಣ್ಣಿಕೃಷ್ಣನ್, ಎಂ.ನಾರಾಯಣನ್, ಅಬ್ದುಲ್ ರಝಾಕ್ ತಾಯಿಲಂಗಾಡಿ, ಸಿ.ಕೆ.ನಾಯರ್ ಕಾಲೇಜಿನ ಪ್ರಾಂಶುಪಾಲ ಡಾ.ಕುಂಞÂಕಣ್ಣನ್, ಡಾ.ರಾಧಾಕೃಷ್ಣನ್, ವಿ.ಕುಟ್ಟನ್, ಡಾ.ಕೆ.ಎಸ್.ಸುರೇಶ್ ಕುಮಾರ್, ಡಾ.ಎ.ಅಶೋಕನ್, ಶ್ರೀಜಿತ್ ರವೀಂದ್ರನ್, ಎಂ.ವಿ.ರತೀಶ್ ಮೊದಲಾದವರು ಮೆರವಣಿಗೆಯ ನೇತೃತ್ವ ವಹಿಸಿದ್ದರು.