ಮುಳ್ಳೇರಿಯ: ಆದೂರು ಸರಕಾರಿ ಹೈಯರ್ ಸೆಕೆಂಡರೀ ಶಾಲೆಯಲ್ಲಿ ಕಾರಡ್ಕ ಪಂಚಾಯಿತಿ ಮಟ್ಟದ ಹೆಲೋ ಇಂಗ್ಲೀಷ್ ಕಾರ್ಯಕ್ರಮದ ಅಂಗವಾಗಿ ಎರಡು ದಿನಗಳ ನಾಟಕ ಶಿಬಿರ ಇತ್ತೀಚೆಗೆ ನಡೆಯಿತು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೊಹಮ್ಮದ್ ಪಟ್ಟಾಂಗ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಶಿಕ್ಷಕ ರಾಮಣ್ಣ ಅಧ್ಯಕ್ಷತೆ ವಹಿಸಿದ್ದರು. ಶಾಲಾಡಳಿತ ಸಮಿತಿ ಅಧ್ಯಕ್ಷ ಮೊಹಮ್ಮದ್ ಹನೀಫ, ಹಿರಿಯ ಶಿಕ್ಷಕಿ ಸರಸ್ವತಿ.ಕೆ ಉಪಸ್ಥಿತರಿದ್ದರು. ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದರು. ಪಂಚಾಯಿತಿಯ ವಿವಿಧ ಶಾಲೆಗಳ ಶಿಕ್ಷಕಿಯರು ಭಾಗವಹಿಸಿದ್ದರು.
ಎಸ್‍ಆರ್‍ಜಿ ಸಂಚಾಲಕ ಶರತ್ ಕುಮಾರ್ ಸ್ವಾಗತಿಸಿ, ಶಾಲಾ ನೌಕರ ಸಂಘದ ಕಾರ್ಯದರ್ಶಿ ಪ್ರಕಾಶ.ಯಂ ವಂದಿಸಿದರು.