ಪೆರಿಯ ಕೊಲೆ : ಸರ್ವಪಕ್ಷ ಶಾಂತಿ ಸಭೆ ಖಂಡನೆ
0
ಫೆಬ್ರವರಿ 26, 2019
ಕಾಸರಗೋಡು: ಪೆರಿಯದಲ್ಲಿ ನಡೆದ ಇಬ್ಬರು ಯುವಕರ ಕೊಲೆ ಪ್ರಕರಣದಲ್ಲಿ ಸರ್ವಪಕ್ಷ ಶಾಂತಿ ಸಭೆ ಖಂಡನೆ ವ್ಯಕ್ತಪಡಿಸಿದೆ. ಈ ಸಂಬಂಧ ಜಿಲ್ಲೆಯ ಕೆಲವೆಡೆ ನಡೆದ ಕಾನೂನು ಭಂಗ ಪ್ರಕರಣಗಳ ಬಗೆಗೂ ಸಭೆ ಪ್ರತಿಭಟನೆ ವ್ಯಕ್ತಪಡಿಸಿದೆ.
ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ರಾಜ್ಯ ಕಂದಾಯಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಎಲ್ಲ ರಾಜಕೀಯ ಪಕ್ಷಗಳೂ ಈ ಕೊಲೆ ಪ್ರಕರಣದ ಬಗ್ಗೆ ಖಂಡನೆ ವ್ಯಕ್ತಪಡಿಸಿವೆ. ಜಿಲ್ಲೆಯಲ್ಲಿ ಶಾಂತಿಭಂಗ ನಡೆಸಲು ವ್ಯವಸ್ಥಿತ ಸಂಚು ನಡೆಯುತ್ತಿದ್ದು, ಜನತೆ ತಾಳ್ಮೆ ವಹಿಸಿಕೊಂಡು, ಒಟ್ಟಂದದಲ್ಲಿ ಅದನ್ನು ನಿಯಂತ್ರಿಸಬೇಕು ಎಂದು ಸಭೆ ವಿನಂತಿಸಿದೆ.
ಸಂಸದ ಪಿ.ಕರುಣಾಕರನ್, ಶಾಸಕರಾದ ಎನ್.ಎ.ನೆಲ್ಲಿಕುನ್ನು, ಕೆ.ಕುಂ??ರಾಮನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್, ವಲಯ ಕಂದಯಾಧಿಕಾರಿ ಅಬ್ದು ಸಮದ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಡಿ.ವೈಎಸ್.ಪಿ.ಗಳಾದ ಎಂ.ಅಸೀನಾರ್, ಎನ್.ಸಜೀವ್, ಬೇಕಲ ಸಿ.ಐ.ಜಿ.ಕೆ.ವಿಶ್ವಂಭರನ್, ಹೊಸದುರ್ಗ ತಹಸೀಲ್ದಾರ್ ಎನ್.ಶ್ರೀಧರನ್ ಪಿಳ್ಳೆ, ಕಾಸರಗೋಡು ತಹಸೀಲ್ದಾರ್ ಕೆ.ಎಚ್.ಮಹಮ್ಮದ್ ನವಾಝ್, ವೆಳ್ಳರಿಕುಂಡ್ ತಹಸೀಲ್ದಾರ್ ಪಿ.ಕುಂ??ಕಣ್ಣನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಂ.ವಿ.ಬಾಲಕೃಷ್ಣನ್ ಮಾಸ್ಟರ್, ಸಿ.ಎಚ್.ಕುಂ?ಂಬು, ಕೆ.ಪಿ.ಕುಂ??ಕಣ್ಣನ್, ಎ>ಗೋವಿಂದನ್ ನಾಯರ್, ಎಂ.ಸಿ.ಖಮರುದ್ದೀನ್, ಎ.ಅಬ್ದುಲ್ ರಹಮಾನ್, ಗೋವಿಂದನ್ ಪಳ್ಳಿಕ್ಕಾಪಿಲ್, ಹರೀಶ್ ಬಿ.ನಂಬ್ಯಾರ್, ಎಂ.ಅನಂತನ್ ನಂಬ್ಯಾರ್,ಅಬ್ರಾಹಂ ತೋಣಕ್ಕರ, ಕುರ್ಯಾಕೋಸ್ ಪ್ಲಾಪರಂಬಿಲ್, ಪಿ.ಕೆ.ಅಬ್ದುಲ್ ರಹಮಾನ್ ಮಾಸ್ಟರ್, ಬೇಬಿ ಪಂತುಲ್ಲೂರ್, ವಿ.ಕೆ.ರಮೇಶನ್, ಯುಧಿಷ್ಠರನ್, ಕೆ.ವಿ.ದಾಮೋದರನ್ ಬೆಳ್ಳಿಗೆ, ಎ>ಕುಮ??ರಾಮನ್ ನಾಯರ್, ಸಿ.ಎ.ಮಹಮ್ಮದ್ ಮುಳ್ಳೆರಿಯ, ಕೆ.ಶ್ರೀಕಾಂತ್, ಸುರೇಶ್ ಕುಮಾರ್ ಶೆಟ್ಟಿ, ಬಶೀರ್ ಆಲಡಿ, ಪಿ.ಕೆ.ಅಬ್ದುಲ್ಲ, ಸಿ.ಎ.ಯೂಸುಫ್, ಖಾದರ್ ಅರಫ, ಬಿ.ಕೆ.ಮಹಮ್ಮದ್ ಶಾ, ಭರತನ್ ಪಿಲಿಕೋಡ್, ಕೆ.ಎಂ.ಹಸೈನಾರ್ ಮೊದಲಾದವರು ಉಪಸ್ಥಿತರಿದ್ದರು.