ಅಧ್ಯಾಪಕರು ಮತ್ತು ಸರಕಾರಿ ನೌಕರರ ಕಾಲ್ನಡಿಗೆ ಜಾಥಾ
0
ಫೆಬ್ರವರಿ 28, 2019
ಮಂಜೇಶ್ವರ: ಅಧ್ಯಾಪಕರ ಮತ್ತು ಸರಕಾರಿ ನೌಕರರ ಮಂಜೇಶ್ವರ ವಿಧಾನ ಸಭಾ ಕ್ಷೇತ್ರ ಮಟ್ಟದ ಪಾದಯಾತ್ರೆಯ ಉದ್ಘಾಟನೆ ಮಂಗಳವಾರ ಕುಂಜತ್ತೂರಿನಲ್ಲಿ ನಡೆಯಿತು.
ಮೂರು ದಿನಗಳ ಕಾಲ ನಡೆಯುವ ಪಾದಯಾತ್ರೆಯನ್ನು ಮಂಜೇಶ್ವರ ಬ್ಲಾ.ಪಂ.ಸದಸ್ಯ ಕೆ.ಆರ್.ಜಯಾನಂದ ಅವರು ಜಾಥಾ ನಾಯಕ ಎಂ.ಚಂದ್ರಶೇಖರನ್ ಅವರಿಗೆ ಪತಾಕೆ ಹಸ್ತಾಂತರಿಸಿ ಉದ್ಘಾಟಿಸಿದರು.
ಸಂಘಟನಾ ಸಮಿತಿ ಉಪಾಧ್ಯಕ್ಷ ಅಶ್ರಫ್ ಕುಂಜತ್ತೂರು ಅಧ್ಯಕ್ಷತೆ ವಹಿಸಿದರು.ವಿವಿಧ ಸಂಘಟನೆಗಳ ಮುಖಂಡರುಗಳಾದ ಎ.ವೇಣುಗೋಪಾಲನ್, ತಾಜುದ್ದೀನ್ ಕೆ, ವಿನೋದ್, ಶೋಭಾ, ಅಶೋಕ್ ಕುಮಾರ್, ಶಾಜಹಾನ್ ಉಪಸ್ಥಿತರಿದ್ದರು. ಶಾಮ ಭಟ್ ಮಾಸ್ತರ್ ಸ್ವಾಗತಿಸಿ, ಜೋನ್ ಎಂ. ವಂದಿಸಿದರು.
ಪ್ರಾಂತ್ಯದ 140 ವಿಧಾನ ಸಭಾ ಕ್ಷೇತ್ರಗಳಲ್ಲಿ ಜಾಥಾ ಹಾದುಹೋಗಲಿದ್ದು, ಸಾವಿರಾರು ಶಿಕ್ಷಕರು, ಸರಕಾರಿ ಉದ್ಯೋಗಿಗಳು ಭಾಗವಹಿಸುವರು. ನವಕೇರಳ ನಿರ್ಮಾಣಕ್ಕೆ ಸಹಕಾರ ನೀಡಿರಿ, ಜನಪರ ಸರಕಾರವಾದ ಎಡರಂಗ ಸರಕಾರದ ನೀತಿಗಳನ್ನು ಬಲಪಡಿಸಿರಿ, ಕೋಮುವಾದವನ್ನು ಕೊನೆಗೊಳಿಸಿರಿ, ಭ್ರಷ್ಟಾಚಾರ ಧೋರಣೆಗೆ ತಿಲಾಂಜಲಿ ನೀಡಿರಿ ಮೊದಲಾದ ಬೇಡಿಕೆ ಮುಂದಿರಿಸಿ ಮೂರು ದಿನಗಳ ಪಾದಯಾತ್ರೆ ಮಜೀರ್ಪಳ್ಳದಿಂದ ಆರಂಭಗೊಂಡು ವಿವಿಧ ಪಂಚಾಯತುಗಳಲ್ಲಿ ಸಂಚರಿಸಿ ಕುಂಬಳೆಯಲ್ಲಿ ಗುರುವಾರ ಸಮಾರೋಪಗೊಳ್ಳಲಿದೆ.