ಬದಿಯಡ್ಕ:ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಕುಂಬಳೆ ಉಪಜಿಲ್ಲಾ ಘಟಕದ ನೇತೃತ್ವದಲ್ಲಿ ಎಲ್.ಎಸ್.ಎಸ್ ಹಾಗು ಯು.ಎಸ್.ಎಸ್ ಪರೀಕ್ಷಾರ್ಥಿಗಳಿಗಿರುವ ಮಾದರಿ (ಮೋಡೆಲ್) ಪರೀಕ್ಷೆಯು ಇಂದು(ಫೆ.2) ಶನಿವಾರದಂದು ನವಜೀವನ ಪ್ರೌಢಶಾಲೆಯಲ್ಲಿ ನಡೆಯಲಿರುವುದು. ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸಮೂರ್ತಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು. ಶ್ರೀಧರ ನಾಯಕ್ ಅಧ್ಯಕ್ಷತೆ ವಹಿಸುವರು. ನವಜೀವನ ಶಾಲಾ ಮುಖ್ಯೋಪಾಧ್ಯಾಯ ಶ್ಯಾಮ್ ಭಟ್ ಉಪಸ್ಥಿತರಿರುವರು. ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಪರೀಕ್ಷೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.
ಕನ್ನಡ ಅಧ್ಯಾಪಕರ ಸಂಘದ ವತಿಯಿಂದ ಎಲ್.ಎಸ್.ಎಸ್, ಯು.ಎಸ್.ಎಸ್ ಮೋಡೆಲ್ ಪರೀಕ್ಷೆ ಇಂದು
0
ಫೆಬ್ರವರಿ 01, 2019