ಬೆಳ್ಳೂರು ಗ್ರಾಮ ಪಂಚಾಯತ್‍ನಲ್ಲಿ ಆರೋಗ್ಯ ಜಾಗೃತಿ ಚಟುವಟಿಕೆಗೆ ಚಾಲನೆ
0
ಫೆಬ್ರವರಿ 10, 2019
ಮುಳ್ಳೇರಿಯ: ಸಾಂಕ್ರಾಮಿಕ ರೋಗಗಳನ್ನು ತಡುಗಟ್ಟುವ ಸಲುವಾಗಿ ಬೆಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಗ್ರಾಮ ಪಂಚಾಯತಿ ಮಟ್ಟದ ಆರೋಗ್ಯ ಜಾಗೃತಿ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು.
ಹಿಂದಿನ ವರ್ಷಗಳಲ್ಲಿ ಡೆಂಗ್ಯೂ ಮತ್ತಿತರ ಸಾಂಕ್ರಾಮಿಕ ರೋಗಗಳು ಬಹಳಷ್ಟು ಪ್ರಮಾಣದಲ್ಲಿ ಹರಡಿದ್ದ ಬೆಳ್ಳೂರಿನಲ್ಲಿ ಕಾಸರಗೋಡು ಡಿವಿಸಿ ಘಟಕ ನೇತೃತ್ವದಲ್ಲಿ ರೋಗ ವಾಹಕ ನುಸಿಗಳ ಅಧ್ಯಯನ ನಡೆಸಲು ಎಂಡೋಮೋಳಜಿಕಲ್ ಹಾಗೂ ರೋಗ ವಾಹಕ ಪ್ರಾಣಿಗಳ ಸಾಂದ್ರತೆ ನಿರ್ಣಯಿಸುವ ವೆಕ್ಟರ್ ಸರ್ವೆ ನಡೆಯಿತು.
ರೋಗ ವಾಹಕ ಸೊಳ್ಳೆಗಳ ನಿಯಂತ್ರಣ ಹಾಗು ನಿರ್ಮೂಲನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆಯೇ ಎಂಬುದರ ಕುರಿತು ಅಧ್ಯಯನ ಆರಂಭಿಸಲಾಗಿದ್ದು, ಡಿವಿಸಿ ಘಟಕದ ಒಟ್ಟು 16 ಸಿಬ್ಬಂದಿಗಳು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳೊಂದಿಗೆ ಅವಲೋಕನ ನಡೆಸಿದರು.
ವೈದ್ಯಕೀಯ ಅಧಿಕಾರಿ ಪವಾಸ್ ಮಜೀದ್, ಆರೋಗ್ಯ ಅಧಿಕಾರಿಗಳದ ಜಾನ್ ವರ್ಗೀಸ್, ತಿರುಮಲೇಶ್ವರ ನಾಯ್ಕ್, ಎಂಡೋಮೋಳಜಿ ಕನ್ಸಲ್ಟೆಂಟ್ ಅರವಿಂದ್, ಕಿರಿಯ ಆರೋಗ್ಯ ಅಧಿಕಾರಿ ಅನುಶ್ರೀ ನೇತೃತ್ವ ವಹಿಸಿದರು.