ಇಂದು ಸಾರ್ವಜನಿಕ ಸಂಪರ್ಕ ಇಲಾಖೆ ನೂತನ ಕಚೇರಿಗೆ ಶಿಲಾನ್ಯಾಸ
0
ಫೆಬ್ರವರಿ 25, 2019
ಕಾಸರಗೋಡು: ಜಿಲ್ಲಾ ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯ ನೂತನವಾಗಿ ನಿರ್ಮಾಣಗೊಳ್ಳಲಿರುವ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ ಇಂದು (ಫೆ.26) ನಡೆಯಲಿದೆ.
ರಾಜ್ಯ ಸರಕಾರ ಒಂದು ಸಾವಿರ ದಿನ ಪೂರೈಸಿದ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆಸಲಾಗುತ್ತಿರುವ ಸರಣಿ ಕಾರ್ಯಕ್ರಮಗಳ ಅಂಗವಾಗಿ ಈ ಸಮಾರಂಭವೂ ನಡೆಯಲಿದೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ 1.76 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಕಟ್ಟಡ ನಿರ್ಮಾಣಗೊಳ್ಳಲಿದೆ.
ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಶಿಲಾನ್ಯಾಸ ನಡೆಸುವರು. ಸಂಸದ ಪಿ.ಕರುಣಾಕರನ್ ಮುಖ್ಯ ಅತಿಥಯಾಗಿರುವರು. ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಸಾರ್ವಜನಿಕ ಸಂರ್ಕಿಲಾಖೆಯ ಹೆಚ್ಚುವರಿ ನಿರ್ದೇಶಕ ಪಿ.ಎಸ್.ರಾಜಶೇಖರನ್ ಯೋಜನೆ ಕುರಿತು ಮಾಹಿತಿ ನೀಡುವರು. ಲೋಕೋಪಯೋಗಿ ಇಲಾಖೆ ಕಾರ್ಯಕಾರಿ ಇಂಜಿನಿಯರ್ ಸಿ.ರಾಜೇಶ್ ಚಂದ್ರನ್ ತಾಂತ್ರಿಕವರದಿ ವಾಚಿಸುವರು. ಶಾಸಕರಾದ ಕೆ.ಕುಂ??ರಾಮನ್, ಎಂ.ರಾಜಗೋಪಾಲನ್, ಕಾಸರಗೋಡು ಬ್ಲೋಕ್ ಪಂಚಾಯತ್ ಅಧ್ಯಕ್ಷ ಮಹ್ಮದ್ ಕುಂ?? ಚಾಯಿಂಡಡಿ, ಚೆಂಗಳ ಗ್ರಾಮಪಂಚಾಯತ್ ಅಧ್ಯಕ್ಷೆ ಶಾಹಿನಾ ಸಲೀಂ, ಸಿವಿಲ್ ಸ್ಟೇಷನ್ ವಾರ್ಡ್ ಸದಸ್ಯ ಸದಾನಮದನ್ ಬಿ., ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಸಾರ್ವಜನಿಕ ಸಂಪರ್ಕ ಇಲಾಖೆ ಹೆಚ್ಚುವರಿ ನಿರ್ದೇಶಕ ಕೆ.ಪಿ.ಅಬ್ದುಲ್ ಖಾದರ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಂ.ವಿ.ಬಾಲಕೃಷ್ಣನ್ ಮಾಸ್ಟರ್, ನ್ಯಾಯವಾದಿ ಗೋವಿಂದನ್ ಪಳ್ಳಿಕಾಪಿಲ್, ಹಕೀಂ ಕುನ್ನಿಲ್, ಅಬ್ದುಲ್ ರಹಮಾನ್, ನ್ಯಾಯವಾದಿ ಕೆ.ಶ್ರೀಕಾಂತ್, ಕುರಿಯಾಕೋಸ್ ಪ್ಲಾಪರಂಬಿಲ್. ಎ.ಕುಂ??ರಾಮನ್ ನಾಯರ್, ಕೈಪ್ರತ್ ಕೃಷ್ಣನ್ ನಂಬ್ಯಾರ್, ನ್ಯಾಯವಾದಿ ಸಿ.ವಿ.ದಾಮೋರನ್, ಪಿ.ಕೆ.ಮಹಮ್ಮದ್ ಟಿಂಬರ್, ಅಬ್ರಾಹಂ ಎಸ್.ತೊಣಕ್ಕರ, ಕೆ.ವಿ.ಯುಧಿಷ್ಠಿರನ್, ನ್ಯಾಷನಲ್ ಅಬ್ದುಲ್ಲ, ಮಾಟ್ಟುಮ್ಮಲ್ ಹಸನ್ ಉಪಸ್ಥಿತರಿರುವರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸ್ವಾಗತಿಸುವರು. ಜಿಲ್ಲಾ ಮಾಹಿತಿ ಅಧಿಕಾರಿ ಮಧುಸೂದನನ್ ಎಂ. ವಂದಿಸುವರು.
ಬಳಿಕ ನಡೆಯುವ ಸಮಾರಂಭದಲ್ಲಿ "ಮಾಧ್ಯಮ ವರ್ತಮಾನ" ಎಂಬ ವಿಷಯದಲ್ಲಿ ಉಪನ್ಯಾಸ ನಡೆಯಲಿದೆ. ಸಂಸದ ಪಿ.ಕರುಣಾಕರನ್ ಉದ್ಘಾಟಿಸುವರು. ಎದಿರ್ದಿಶ ಸಂಪಾದಕ ಪಿ.ಕೆ.ಸುರೇಶ್ ಕುಮಾರ್ ಉಪನ್ಯಾಸ ನಡೆಸುವರು. ಕಾಸರಗೋಡು ಪ್ರೆಸ್ ಕ್ಲಬ್ ಅಧ್ಯಕ್ಷ ಟಿ.ಎ.ಶಾಫಿ ಉಪಸ್ಥಿತರಿರುವರು.